ಧಾರವಾಡ

ಡಬ್ಬಾ ಅಂಗಡಿಗಳ ವಿರುದ್ಧ ಕ್ರಮಕ್ಕೆ ವಿವಿಧ ಸಂಘಟನೆಗಳ ಆಗ್ರಹ

Published On :

ಧಾರವಾಡ: ಇಲ್ಲಿಯ ಗಾಂಧಿಚೌಕ್‌ದಿಂದ ಮಣಕಿಲ್ಲಾಕ್ಕೆ ಹೋಗುವ ರಸ್ತೆಯಲ್ಲಿ ಇರುವ ಡಬ್ಬಾ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಮತ್ತು ಜಯ ಕರ್ನಾಟಕದ ವತಿಯಿಂದ ಪಾಲಿಕೆ ಆಯುಕ್ತರ ಪ್ರತಿಕೃತಿ ದಹಿಸುವ ಮೂಲಕ ಶುಕ್ರವಾರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೀದಿ ವ್ಯಾಪಾರಸ್ಥರಿಗೆ ವ್ಯಾಪಾರಕ್ಕಾಗಿ ಕಾಯ್ದಿರಿಸಿದ್ದ ಜಾಗೆಯಲ್ಲಿ ಹಲವಾರು ಅಧಿಕಾರಿಗಳು ಹಾಗೂ ಕಾಂಟ್ರಾಕ್ಟರ್‌ಗಳ ಒತ್ತಡ ಮತ್ತು ಸುಳ್ಳು ದಾಖಲಾತಿ ಸೃಷ್ಟಿಸುವ ಮೂಲಕ 20 ರಿಂದ 25 ಡಬ್ಬಾ ಅಂಗಡಿಗಳನ್ನು ಇರಿಸಿದ್ದಾರೆ. ಈ ಕುರಿತು ಕಳೆದ ಹಲವಾರು ದಿನಗಳಿಂದ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಬರುತ್ತಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಈ ಅಂಗಡಿಗಳಿಂದ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಬೀದಿ ಬದಿಯ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದೇ ಜೀವನ ನಡೆಸುವುದೇ ದುಸ್ತರವಾಗಿದೆ. ಕಾಂಟ್ರಾಕ್ಟರ್ ಮಾರಡಗಿ ಎಂಬುವರು ಇಲ್ಲಿಯ ಹಲವಾರು ಅಂಗಡಿಕಾರರಿಗೆ ಸುಳ್ಳು ದಾಖಲೆ ಸೃಷ್ಟಿಸಿ ಅಂಗಡಿಗಳನ್ನು ಹಾಕಲು ಪರವಾನಗಿ ನೀಡಿದ್ದಾರೆ. ಆದ್ದರಿಂದ ಅವರನ್ನು ಕೂಡಲೇ ಕೆಲಸದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
ಸುಧೀರ ಮುಧೋಳ, ಚಂದ್ರು ಅಂಗಡಿ, ಪ್ರಕಾಶ ದೊಡವಾಡ, ಕರೆಪ್ಪ ಮಾಳಗಿಮನಿ, ಸಿದ್ಲಪ್ಪ, ಪರಶುರಾಮ ಅಲೀಮುಲ್ಲಾ, ಸಾಹಿಲ್ ಕಿತ್ತೂರ, ಮೈಲಾರಿ ಚವ್ಹಾಣ, ಗಜೂ ಮೋಹಿತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.