ಧಾರವಾಡ

ನ್ಯಾಯಮೂರ್ತಿಗಳಿಂದ ಕಟ್ಟುಪಾಡಿನ ಕಥೆ..

Published On :

ಧಾರವಾಡ: ಶನಿವಾರ ಧಾರವಾಡದಲ್ಲಿ ಹೈಕೋರ್ಟ್ ಕಾಯಂ ಪೀಠ ಉದ್ಘಾಟಿಸಿದ ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಎಚ್.ಎಲ್. ದತ್ತು ನ್ಯಾಯವಾದಿಗಳು ತಮ್ಮ ಕಕ್ಷಿದಾರರಿಗೆ ತ್ವರಿತ ನ್ಯಾಯ ಒದಗಿಸುವ ಕಟ್ಟುನಿಟ್ಟಿನ ಬದ್ಧತೆ ಕುರಿತು ರವೀಂದ್ರನಾಥ ಟ್ಯಾಗೋರರ ಕುರಿತು ಹೇಳಿದ ಕಥೆ ಇದು...
ಗಾಂಧೀಜಿ ಅವರು ವಿಶ್ವನಿಕೇತನ ಆಶ್ರಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಆಶ್ರಮವಾಸಿಗಳು ಗಾಂಧೀಜಿಗೆ ತಮ್ಮದೊಂದು ಬೇಡಿಕೆ ಇದೆ ಎಂದರು. ರವೀಂದ್ರನಾಥ ಟ್ಯಾಗೋರ್‌ರಂತಹ ಮಹರ್ಷಿಗಳ ಆಶ್ರಮವಾಸಿಗಳಿಗೆ ಬೇಡಿಕೆ ಇದೆ ಎನ್ನುವುದೇ ಆಶ್ವರ್ಯ. ಆದ್ದರಿಂದ ನನ್ನ ಮುಂದೆ ಬೇಡಿಕೆ ಬೇಡ ಅಂದರು. ಪದೇ ಪದೇ ಆಶ್ರಮವಾಸಿಗಳ ಕೋರಿಕೆ ತಾಳದೆ ಕೊನೆಗೆ ಏನದು ಬೇಡಿಕೆ? ಎಂದರು. ಏನಿಲ್ಲ, ರವೀಂದ್ರರು ಒಂದು ಮುಂಜಾನೆಯಿಂದ ರಾತ್ರಿಯವರೆಗೂ ಸದಾ ನಡೆದಾಡುತ್ತಲೇ ಇರುತ್ತಾರೆ. ಅವರು ಮಧ್ಯಾಹ್ನ ಒಮ್ಮೆಯೂ ವಿಶ್ರಾಂತಿ ಪಡೆಯುವುದಿಲ್ಲ. ದಯವಿಟ್ಟು ತಾವು ಅವರಿಗೆ ತಿಳಿಸಿ ಹೇಳಬೇಕು ಎಂದರು.
ಆಯ್ತು ಎಂದ ಗಾಂಧೀಜಿ, ರವೀಂದ್ರರನ್ನು ಹುಡುಕುತ್ತ ಕೊನೆಗೆ ವಿಶ್ವನಿಕೇತನದ ಅಡುಗೆ ಮನೆಗೆ ಹೋದರು. ಅಲ್ಲಿ ನಿಂತಿದ್ದ ರವೀಂದ್ರನಾಥ ಟ್ಯಾಗೋರ್‌ರಿಗೆ ದಯವಿಟ್ಟು ತಾವು ಮಧ್ಯಾಹ್ನ ವಿಶ್ರಾಂತಿ ಪಡೆಯಬೇಕು ಎಂದರು.
ಈ ಕುರಿತು ರವೀಂದ್ರನಾಥ ಟ್ಯಾಗೋರ್ ನಸುನಕ್ಕು ಇಲ್ಲ ಇದೊಂದು ಮಾತ್ರ ಸಾಧ್ಯವಿಲ್ಲ. ನಾನು ಚಿಕ್ಕವನಿದ್ದಾಗ ನನ್ನ ಗುರುಗಳಿಗಾಗಿ ಮಧ್ಯಾಹ್ನ ವಿಶ್ರಾಂತಿ ಪಡೆಯುವುದಿಲ್ಲವೆಂದು ಮಾತು ಕೊಟ್ಟಿದ್ದೆ. ಆ ಕಟ್ಟುಪಾಡನ್ನು ನಾನು ಮುರಿಯಲು ಸಾಧ್ಯವಿಲ್ಲವೆಂದರು. ಸಣ್ಣವನಿರುವಾಗಿನ ಮಾತನ್ನು ಕೊನೆಯತನಕ ಉಳಿಸಿಕೊಂಡ ರವೀಂದ್ರನಾಥ ಟ್ಯಾಗೋರ್‌ರ ಬದ್ಧತೆ ನಮಗೆಲ್ಲ ಮಾದರಿಯಾಗಬೇಕು. ಕಕ್ಷಿದಾರರಿಗೆ ತ್ವರಿತ ಗತಿಯಲ್ಲಿ ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸಿಕೊಡಲು ವಕೀಲರು ಬದ್ಧರಾಗಬೇಕೆಂದು ನ್ಯಾಯಮೂರ್ತಿ ಎಚ್.ಎಲ್. ದತ್ತು ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.