ಧಾರವಾಡ

ನಾಳೆ ರಕ್ತದಾನ ಶಿಬಿರ

Published On :

ಧಾರವಾಡ: ಇಲ್ಲಿನ ಧಾರವಾಡ ಬೆಸುಗೆ ಸಂಸ್ಥೆಯಿಂದ ಸೆ. 1ರಂದು ರಕ್ತದಾನ ಶಿಬಿರವನ್ನು ನಗರದ ಭಾವಸಾರ ಕ್ಷತ್ರಿಯ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಚಾಲಕ ಕಿರಣ ಹಿರೇಮಠ, ಧಾರವಾಡ ಬೆಸುಗೆ ಸಂಸ್ಥೆಯು ಫೇಸ್ ಬುಕ್ ಮೂಲಕ 2 ವರ್ಷಗಳ ಹಿಂದೆ ಹುಟ್ಟಿದೆ. ಧಾರವಾಡದ 300ಕ್ಕೂ ಹೆಚ್ಚು ಸದಸ್ಯರು ಮೊದಲ ಬಾರಿಗೆ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ರಕ್ತ ಭಂಡಾರದಲ್ಲಿನ ರಕ್ತದ ಕೊರತೆ ಮನಗಂಡು ವಿವಿಧ ಸಂಘಟನೆಗಳೊಂದಿಗೆ ಚರ್ಚಿಸಿ ಶಿಬಿರ ನಡೆಸಲಾಗುತ್ತಿದೆ. ಶಿಬಿರಕ್ಕೆ ಪ್ರಮುಖ 20ಕ್ಕೂ ಹೆಚ್ಚು ಸಂಘ ಸಂಸ್ಥೆಗಳು, ವೈದ್ಯರು, ಗಣ್ಯರು ಕೈಜೋಡಿಸಿದ್ದು, 300ಕ್ಕೂ ಹೆಚ್ಚು ರಕ್ತದಾನಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ನಗರದ ರಕ್ತದಾನಿಗಳಿಗೆ ಅಲ್ಪೊಪಹಾರ, ಹಣ್ಣು, ಹಾಲು ವಿತರಿಸಲಾಗುವುದು. ಆಸಕ್ತರು ಸ್ವ-ಪ್ರೇರಣೆಯಿಂದ ಬಂದು ರಕ್ತದಾನ ಮಾಡಬೇಕು ಎಂದರು. ಶಿಬಿರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡಲಿದ್ದು, ಶಾಸಕರಾದ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ, ಡಿಸಿ ಸಮೀರ ಶುಕ್ಲ ಆಗಮಿಸುತ್ತಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೃಷ್ಣ ಜೋಶಿ, ಧಾರವಾಡ ಬೆಸುಗೆಯ ರವಿ ಶೂರ್ಪಾಲಿ, ಸಂಜಯ ಇಂಗಳೆ, ವಿರೇಶ ಕೆಲಗೇರಿ, ಎಂ.ಎ. ಮುಮ್ಮಿಗಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.