ಬೈಕ್ ರೇಸ್ ನೆನಪಿಸಿದ ಟ್ರಾಫಿಕ್!
ಹುಬ್ಬಳ್ಳಿ: ಗದಗ-ಕೇಶ್ವಾಪುರ ರಸ್ತೆ ಮಧ್ಯೆದಲ್ಲಿ ಮಂಗಳವಾರ ಕ್ಷಣಾರ್ಧದಲ್ಲಿ ಕಣ್ಣು ಹಾಯಿಸಿದಲೆಲ್ಲಾ ದ್ವಿಚಕ್ರವಾಹನಗಳ ಭರಾಟೆ...ಅದೇ ತಾನೇ ಬೇರೆ ಊರಿನಿಂದ ಬಂದು ಗದಗ ಗೇಟ್ ಬಳಿ ಇಳಿದುಕೊಂಡಿದ್ದ ಪ್ರಯಾಣಿಕರು ಒಂದು ಕ್ಷಣ ಉಸಿರು ಬಿಗಿ ಹಿಡಿದ ಪ್ರಸಂಗ...
ಗದಗ ರಸ್ತೆ, ಕೇಶ್ವಾಪುರ ಹಾಗೂ ಕಿತ್ತೂರ ಚೆನ್ನಮ್ಮ ವರ್ತುಳದಿಂದ ದ್ವಿಚಕ್ರವಾಹನಗಳು ಭರ್ರ ಗುಟ್ಟುತ್ತ ಒಂದೇ ಸ್ಥಳದಲ್ಲಿ ಜಮಾಯಿಸಿದ್ದರಿಂದ ಸಹಜವಾಗಿಯೇ ಜನತೆಗೆ ಇಂತಹದೊಂದು ಆಂತಕ ಕಾಡಿದ್ದು ಸುಳ್ಳಲ್ಲ.
ಕೆಲವರು ನಗರದಲ್ಲಿ ಬೈಕ್ ರ್ಯಾಲಿ ಆಯೋಜಿಸಲಾಗಿದೆಯೇನೋ ಎಂದು ಭಾವಿಸಿದ್ದರೆ ಮತ್ತೆ ಕೆಲವರು ಸೇರಿದ್ದ ಎಲ್ಲ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಿದ್ದರಿಂದ ಮತ್ತೊಂದು ರೀತಿಯ ಕಲ್ಪನೆಗೂ ಜಾರಿದ್ದರು!
ಗದಗ ಗೇಟ್ನ ತಿರುವಿನ ಬಲಬದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೇದೆ ಏಕಾಏಕಿ ಟ್ರಾಫಿಮ್ ಜಾಮ್ ಆಗಿರುವ ಸುದ್ದಿ ತಿಳಿದು ಅತ್ತ ಕಡೆ ದೌಡಾಯಿಸಿದರು. ಅಲ್ಲದೇ, ದ್ವಿಚಕ್ರ ವಾಹನಗಳಿಗೆ ತೆರಳು ಅಡ್ಡಗಡ್ಡಿ ನಿಂತಿದ್ದ ಎದುರಿನ ಬಸ್, ಭಾರಿ ವಾಹನಗಳಿಗೆ ದಾರಿ ಮಾಡಿಕೊಟ್ಟ ನಂತರ ಅಷ್ಟೇ ವೇಗದಲ್ಲಿ ದ್ವಿಚಕ್ರ ವಾಹನಗಳ ಅಲ್ಲಿಂದ ಮಾಯವಾಗಿದ್ದವು. ಈ ಎಲ್ಲ ದೃಶ್ಯ ಕಣ್ತುಂಬಿಕೊಂಡ ಜನತೆ ಹುಬ್ಬಳ್ಳಿ ಟ್ರಾಫಿಕಾ ಇದು ಎಂದು ಉದ್ಗರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

