ಧಾರವಾಡ

ವೃತ್ತಿಯನ್ನು ಪ್ರೀತಿಸುವವರಿಗೆ ನಿವೃತ್ತಿಯೇ ಇಲ್ಲ: ದೇಸಾಯಿ

Published On :

ಹುಬ್ಬಳ್ಳಿ: ವೃತ್ತಿಯನ್ನು ಪ್ರೀತಿಸುವವರಿಗೆ ನಿವೃತ್ತಿ ಎನ್ನುವುದೇ ಇಲ್ಲ. ಕಲಿಯುವ ಕಲಿಸುವ ಆಸಕ್ತಿ ನಿರಂತರವಾದದ್ದು ಎಂದು ಉದ್ಯಮಿ ಮದನ್ ದೇಸಾಯಿ ಹೇಳಿದರು.
ಬುಧವಾರ ಚೇತನ್ ಬ್ಯೂಸಿನೆಸ್ ಸ್ಕೂಲ್ ವತಿಯಿಂದ ಡಾ. ಅಶೋಕ ಚಚಡಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ. ಅಶೋಕ ಚಚಡಿ ಅವರ ಬುದ್ಧಿವಂತಿಕೆ ಕೇವಲ ವಿದ್ಯಾರ್ಥಿಗಳಿಗೆ ಅಷ್ಟೆ ಅಲ್ಲ. ಉದ್ದಿಮೆ ಸಮಾಜಕ್ಕೂ ಮಾರ್ಗದರ್ಶವಾಗಿದೆ ಎಂದರು.
ಪ್ರೊ.ಸಿ.ಸಿ. ದಿಕ್ಷಿತ್ ಅವರು, ಪ್ರತಿಭಾವಂತರಿಗೆ ನಿವೃತ್ತಿ ಇರುವುದಿಲ್ಲ. ನಿವೃತ್ತಿಯ ನಂತರವೂ ಅವರು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿರುತ್ತವೆ. ಡಾ. ಅಶೋಕ ಚಚಡಿ ಅವರು ಸಂಪತ್ತಿನ ಗಳಿಕೆಗಿಂತ ಬೋಧನೆಯಲ್ಲಿ, ಸಂಶೋಧನೆಯಲ್ಲಿ ಮತ್ತು ಮಾರ್ಗದರ್ಶನ ನೀಡುವಲ್ಲಿ ತೃಪ್ತಿ ಕಂಡವರು ಎಂದರು.
ಚೇತನ ಬ್ಯುಸಿನೆಸ್ ಸ್ಕೂಲ್ ನಿರ್ದೇಶಕ ಡಾ. ವಿ.ಎಂ. ಕೊರವಿ, ಕರ್ನಾಟಕ ವಿವಿಯ ವ್ಯಾಪ್ತಿಯಲ್ಲಿ ಡಾ. ಅಶೋಕ ಚಚಡಿ ಅವರು ಎಂಬಿಎ, ಎಂಬಿಎಸ್, ಬಿಬಿಎ, ಬಿಸಿಎ ಕಾಲೇಜುಗಳನ್ನು ಬೆಳೆಸುವ ಮೂಲಕ ಶಿಕ್ಷಣ ಕ್ಷೇತ್ರ, ಔದ್ಯಮಿಕ ಕ್ಷೇತ್ರದ ಮಧ್ಯೆ ಸಂಬಂಧ ಬೆಳೆಸಿದವರು ಎಂದರು. ಸನ್ಮಾನ ಸ್ವೀಕರಿಸಿ ಡಾ. ಅಶೋಕ ಚಚಡಿ ಮಾತನಾಡಿ, ಮನೆತನದ ಸಮಸ್ಯೆಗಳ ಕಾರಣ ಅನೇಕ ಲಾಭದಾಯಕ ಹುದ್ದೆಗಳನ್ನು ಬಿಟ್ಟು ಶಿಕ್ಷಣ ಕ್ಷೇತ್ರಕ್ಕೆ ಕಾಲಿರಿಸಬೇಕಾಯಿತು. ಬೋಧನೆ ಪುಣ್ಯದ ಕೆಲಸ, ಆತ್ಮಗೌರವ ಹೆಚ್ಚಿಸಿದ ವೃತ್ತಿ ಇದು. ಯುವಕರೊಂದಿಗೆ ಸಂಪರ್ಕ ಇರಿಸಿಕೊಳ್ಳುವುದಕ್ಕೆ ವೃತ್ತಿ ಸಹಕಾರಿಯಾಯಿತು ಎಂದರು. ಡಾ. ಎ.ಬಿ. ಕಾಲಕುಂದ್ರಿಕರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಅಶೋಕ ಚಚಡಿ ನಿರ್ವಹಣಾ ಶಾಸ್ತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ ಶ್ರೇಷ್ಠ ಮಾನವತಾವಾದಿ ಎಂದರು. ರಾಜಣ್ಣ ಕೊರವಿ, ಜಗದೀಶ ದ್ಯಾವಪ್ಪನವರ, ರಮಾಕಾಂತ ಕುಲಕರ್ಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.