ಧಾರವಾಡ

ಜಿಲ್ಲಾ ಉತ್ಸವ: ಪಾರ್ಕಿಂಗ್ ವ್ಯವಸ್ಥೆ

Published On :

ಧಾರವಾಡ: ಜಿಲ್ಲಾ ಉತ್ಸವ ನಿಮಿತ್ತ ಮುಖ್ಯ ವೇದಿಕೆಯಾದ ಕರ್ನಾಟಕ ಕಲಾ ಕಾಲೇಜಿಗೆ ಬರುವ ವಾಹನಗಳಿಗೆ ವಿವಿಧ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಮಾಡಲಾಗಿದೆ.
ಕರ್ನಾಟಕ ಕಾಲೇಜಿನಿಂದ ದಾಸನಕೊಪ್ಪ ವೃತ್ತದವರೆಗೆ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್, ಸಪ್ತಾಪುರ ಸತ್ಯಸಾಯಿಬಾಬಾ ಮಹಾವಿದ್ಯಾಲಯದ ಆವರಣ ಹಾಗೂ ಆಲೂರ ವೆಂಕಟರಾವ್ ಸಭಾಭವಣದ ಪಕ್ಕದಲ್ಲಿರುವ ಬಿಇಡಿ ಕಾಲೇಜು ಆವರಣವನ್ನು ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್‌ಗೆ ಮೀಸಲಿಡಲಾಗಿದೆ.
ಕರ್ನಾಟಕ ಕಾಲೇಜಿನಿಂದ ಎಲ್‌ಐಸಿ ಕಚೇರಿ ರಸ್ತೆಯ ಎಡ ಭಾಗ, ಕರ್ನಾಟಕ ಕಾಲೇಜಿನಿಂದ ಹಳಿಯಾಳ ನಾಕಾವರೆಗೆ ಒಂದು ಬದಿಗೆ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡಬಹುದು.  ಕರ್ನಾಟಕ ಕಾಲೇಜು ಮುಖ್ಯದ್ವಾರದಿಂದ ವಾಹನಗಳಿಗೆ ಪ್ರವೇಶವಿಲ್ಲ. ಉದಯ ಹಾಸ್ಟೇಲ್ ಸರ್ಕಲ್‌ನಿಂದ ಕರ್ನಾಟಕ ಕಾಲೇಜಿನೊಳಗೆ ಗಣ್ಯರ, ಕಲಾವಿದರ ಹಾಗೂ ಸಮನ್ವಯ ಅಧಿಕಾರಿಗಳ ವಾಹನಗಳಿಗೆ ಮಾತ್ರ ಪ್ರವೇಶವಿದೆ ಎಂದು ಪೊಲೀಸ್ ಆಯುಕ್ತ ಪಿ.ಎ. ಪದ್ಮನಯನ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.