ಧಾರವಾಡ

ಹುಬ್ಬಳ್ಳಿಯಲ್ಲಿ 'ಬ್ರಹ್ಮ' ಧ್ವನಿಸುರುಳಿ ಬಿಡುಗಡೆ: ಗುರುಕಿರಣ್

Published On :

ಹುಬ್ಬಳ್ಳಿ: ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ಕನ್ನಡ ಚಲನಚಿತ್ರಗಳ ಗಳಿಕೆ ಉತ್ತಮವಾಗಿದೆ. ಹೀಗಾಗಿ ಭವಿಷ್ಯದ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಕನ್ನಡ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಹತ್ತು ವರ್ಷಗಳ ಹಿಂದೆ ಜೋಗಿ ಮತ್ತು ಕುಟುಂಬ ಚಿತ್ರಗಳ ಧ್ವನಿ ಸುರುಳಿ ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಕಾರಣ ಒಂದು ರೀತಿಯಲ್ಲಿ ಹುಬ್ಬಳ್ಳಿ ನನಗೆ ಅದೃಷ್ಟದ ಸ್ಥಳ. ಆದ್ದರಿಂದ ಡಿ. 29ರಂದು ಇಲ್ಲಿನ ನೆಹರು ಮೈದಾನದಲ್ಲಿ ಉಪೇಂದ್ರ ಅಭಿನಯದ ಬ್ರಹ್ಮ ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಅಂದು ಜರುಗುವ ಧ್ವನಿ ಸುರುಳಿ ಬಿಡುಗಡೆ ಸಮಾರಂಭಕ್ಕೆ ಚಿತ್ರದ ನಾಯಕ ನಟ ಉಪೇಂದ್ರ, ಶ್ರೀನಗರ ಕಿಟ್ಟಿ ಮತ್ತು ಪ್ರೇಮ ಆಗಮಿಸಲಿದ್ದಾರೆ. ಬ್ರಹ್ಮ ಚಿತ್ರದ ಹಾಡುಗಳ ಕುರಿತು ಮಾತನಾಡಿದ ಅವರು ಒಟ್ಟು ಐದು ಹಾಡುಗಳು ಇದ್ದು, ಮುಂಬೈ ಮತ್ತು ಮಲೇಷಿಯಾದಲ್ಲಿ ತಲಾ ಒಂದೊಂದು ಹಾಡುಗಳ ಚಿತ್ರೀಕರಣ ಆಗಿದೆ. ಐದು ಹಾಡುಗಳ ಪೈಕಿ ಎರಡು ಹಾಡುಗಳಿಗೆ ನನ್ನದೇ ಸಾಹಿತ್ಯ ಇದೆ. ಇನ್ನುಳಿದ ಮೂರು ಹಾಡುಗಳಿಗೆ ಸಂತೋಷ ಸಾಹಿತ್ಯದ ಮುಖಾಂತರ ಜೀವ ತುಂಬಿದ್ದಾರೆ. ಪಿ. ವಿ. ಮಂಜುನಾಥ ನಿರ್ಮಾಣದಲ್ಲಿ ಆರ್, ಚಂದ್ರ ಬ್ರಹ್ಮನಿಗೆ ನಿರ್ದೇಶನ ನೀಡಿದ್ದಾರೆ. ಉಪೇಂದ್ರ ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ಬ್ರಹ್ಮದಲ್ಲಿ ಅವರ ಪಾತ್ರ ಮೂಡಿ ಬಂದಿದೆ. ಹಿಂದಿ ಚಿತ್ರ ಸರ್ಕಾರ್‌ದಲ್ಲಿ ಅಮಿತಾಬ ಬಚ್ಚನ್ ಅವರ ಪಾತ್ರಕ್ಕೆ ಹೊಂದುವಂತೆ ಉಪೇಂದ್ರ ಅವರಿಗೆ ವಸ್ತ್ರ ವಿನ್ಯಾಸ ಮಾಡಲಾಗಿದ್ದು, ಇದು ಮೂರು ತಲೆಮಾರಿನ ಅಧಿಕಾರಕ್ಕೆ ನಡೆಯುವ ಸಂಘರ್ಷದ ಕಥೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಮುನಿಂದ್ರ ಮತ್ತು ರಾಜಶೇಖರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.