ರೈಲು ಅಪಘಾತಗಳಲ್ಲಿ ಇಳಿಮುಖ: ಚೌಧರಿ
ಹುಬ್ಬಳ್ಳಿ: ರೈಲು ಅಪಘಾತಗಳು 2003-04ರಲ್ಲಿ ಒಟ್ಟು 239ಗಳಷ್ಟಾಗಿದ್ದು, 2012-13ರಲ್ಲಿ 68 ರೈಲುಗಳು ಅಪಘಾತಕ್ಕೀಡಾಗುವ ಮೂಲಕ ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ ಎಂದು ಕೇಂದ್ರ ರಾಜ್ಯ ಸಚಿವ ಅಧೀರ ಚೌಧರಿ ಹೇಳಿದ್ದಾರೆ.
ಧಾರವಾಡ ಸಂಸದ ಪ್ರಹ್ಲಾದ ಜೋಶಿ ಅವರು ಇತ್ತೀಚೆಗೆ ಸಂಸತ್ನಲ್ಲಿ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಚಿವ ಚೌಧರಿ, ಪ್ರಸ್ತುತ ವರ್ಷದಲ್ಲಿ ಈವರೆಗೆ ವರದಿಯಾದ ಅಪಘಾತಗಳ ಸಂಖ್ಯೆ ಕೇವಲ 40 ಎಂದು ತಿಳಿಸಿದರು. ರೈಲು ಕಂಬಿಗಳ ಅತಿಕ್ರಮಣ ಮಾಡುವಾಗ, ಮಾನವರಹಿತ ಲೆವಲ್ ಕ್ರಾಸಿಂಗ್ ಬಳಿ ಆಗುವ ಅವಘಡಗಳನ್ನು ಹೊರತುಪಡಿಸಿದಲ್ಲಿ ರೈಲು ಓಡಾಟಗಳಿಗೆ ಸಂಬಂಧಿಸಿದ ಅಂದರೆ ರೈಲುಗಳ ಡಿಕ್ಕಿ, ರೈಲಿನಲ್ಲಿ ಬೆಂಕಿ ಮತ್ತಿತರ ಅಪಘಾತಗಳಲ್ಲಿ ಬಹಳಷ್ಟು ಇಳಿಮುಖ ಕಾಣಲಾಗಿದೆಯೆಂದು ಸಚಿವರು ತಿಳಿಸಿದರು. ಇತ್ತೀಚಿನ ವರ್ಷಗಳಲ್ಲಿ ರೇಲ್ವೆ ಆಡಳಿತ ರೈಲು ಪ್ರಯಾಣಿಕರ ಭದ್ರತೆ, ಸುರಕ್ಷತೆಗೆ ಆದ್ಯತಾ ಕ್ರಮಗಳು, ಅಪಘಾತ ತಡೆ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ. ಅವುಗಳಲ್ಲಿ ಹಳೇ ಉಪಕರಣಗಳ ಬದಲಾವಣೆ, ರೈಲು ಕಂಬಿಗಳ ತಾಂತ್ರಿಕತೆ ಸುಧಾರಣೆ, ರೊಲಿಂಗ್ ಸ್ಟಾಕ್ ಸುಧಾರಣೆ, ಸಿಗ್ನಲ್ ವ್ಯವಸ್ಥೆಯಲ್ಲಿ ಹೊಸ ತಾಂತ್ರಿಕತೆ, ರೇಲ್ವೆ ಮಾರ್ಗಗಳ ಸಕಾಲದಲ್ಲಿ ಪರಿವೀಕ್ಷಣೆ, ಸಿಬ್ಬಂದಿಗೆ ಸೂಕ್ತ ತರಬೇತಿಯಂಥ ಕ್ರಮಗಳು ಮಹತ್ವದ್ದಾಗಿವೆ. ಸ್ವಯಂ ಚಾಲಿತ ಕ್ರಮಗಳನ್ವಯ ಸಂಭವಿಸಬಹುದಾದ ಅಪಘಾತಗಳ ತಡೆಗೆ ಬ್ಲಾಕ್ ಪ್ರೂವಿಂಗ್ ಆಕ್ಸೆಲ್ ಕೌಂಟರ್ಸ್, ಆಕ್ಸೆಲರಿ ವಾರ್ನಿಂಗ್ ಸಿಸ್ಟಮ್, ವಿಜಿಲನ್ಸ ಕಂಟ್ರೋಲ್ ಡಿವೈಸ್, ಟ್ರೇನ್ ಪ್ರೊಟೆಕ್ಸನ್ ವಾರ್ನಿಂಗ್ ಸಿಸ್ಟಮ್, ಅಂಟಿಕೋಲಿಶನ್ ಡಿವೈಸ್ ಕೂಡ ಒಳಗೊಂಡಿವೆಯೆಂದು ರೇಲ್ವೆ ರಾಜ್ಯ ಸಚಿವರು ಸಂಸದ ಜೋಶಿವರ ಪ್ರಶ್ನೆಗೆ ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

