ಧಾರವಾಡ

ಧಾರವಾಡ ಜಿಲ್ಲಾ ಉತ್ಸವ: ಅಬ್ಬರ ಸಂಗೀತ, ಅಶ್ಲೀಲ ನೃತ್ಯಕ್ಕೆ ಖಂಡನೆ

Published On :

ಧಾರವಾಡ: ಧಾರವಾಡ ಉತ್ಸವದ ಮುಖ್ಯ ವೇದಿಕೆಯಲ್ಲಿ ಮೂರೂ ದಿನ ಕಲಾವಿದೆಯರಿಂದ ಅಶ್ಲೀಲ ಹಾಗೂ ಮಾದಕ ನೃತ್ಯ ಹಾಗೂ ಅಬ್ಬರದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿರುವ ಜಿಲ್ಲಾಡಳಿತದ ಕ್ರಮ ನಗರದ ಸಂಸ್ಕೃತಿ ಪ್ರೇಮಿ ನಾಗರಿಕರು ತಲೆತಗ್ಗಿಸುವಂತೆ ಮಾಡಿದೆ ಎಂದು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಆರೋಪಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವೇದಿಕೆ, ಜಿಲ್ಲಾಡಳಿತ, ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಂತಹ ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಗಳು ಕೋಟ್ಯಾಂತರ ರುಪಾಯಿ ಜನರ ತೆರಿಗೆ ಹಣವನ್ನು ವೆಚ್ಚ ಮಾಡಿ ಆಯೋಜಿಸಿದ ಉತ್ಸವ, ನಿಜವಾದ ಅರ್ಥದಲ್ಲಿ ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಕಲಾ ಉತ್ಸವವಾಗಬೇಕಿತ್ತು. ಆದರೆ, ಬರೀ ಅಬ್ಬರದ ಸಂಗೀತದ ಮಧ್ಯೆ ಅಶ್ಲೀಲ ಹಾಡು ಹಾಗೂ ನರ್ತನ ಸೇರಿಕೊಂಡು ಪ್ರೇಕ್ಷಕರಲ್ಲಿ ಮುಜುಗರವುಂಟು ಮಾಡಿದೆ. ಈ ಮೂಲಕ ಜಿಲ್ಲಾಡಳಿತವು ಅಪರಾಧಿ ಸ್ಥಾನದಲ್ಲಿ ನಿಂತುಕೊಂಡಿದೆ ಎಂದು ಸಂಘಟನೆಯು ವಿಷಾದ ವ್ಯಕ್ತಪಡಿಸಿದೆ.
ಕಲಾವಿದರ ಹಾಗೂ ಕಲಾತಂಡಗಳ ಆಯ್ಕೆ ಮಾಡಲೆಂದೇ ಉಪಸಮಿತಿಗಳನ್ನು ಜಿಲ್ಲಾಡಳಿತ ನೇಮಕ ಮಾಡಿತ್ತು. ಅಂತಹ ಉಪಸಮಿತಿಗಳ ಮೇಲ್ವಿಚಾರಣೆ ಮಾಡಲೆಂದೇ ಸಾಂಸ್ಕೃತಿಕ ಉಪಸಮಿತಿ ಎಂಬ ಇನ್ನೊಂದು ಸಮಿತಿ ಮಾಡಿದ್ದರು. ಅವರೆಲ್ಲರ ಪರಿಶೀಲನೆಯ ಬಳಿಕವೂ ಇಂತಹ ಅಶ್ಲೀಲ ಕಾರ್ಯಕ್ರಮಗಳಿಗೆ ಅವಕಾಶ ಸಿಕ್ಕಿತೇ ಅಥವಾ ಒಂದೊಮ್ಮೆ ಜಿಲ್ಲಾಡಳಿತವೇನಾದರೂ ನೇರವಾಗಿ ಈ ಬಗ್ಗೆ ನಿರ್ಧಾರ ಕೈಗೊಂಡಿತೇ ಎಂಬುದನ್ನು ನಾಗರಿಕರ ಮುಂದಿಡಬೇಕು.
ಸಾಂಸ್ಕೃತಿಕ ರಾಜಧಾನಿ ಧಾರವಾಡದಲ್ಲಿ ನಡೆದ ಈ ಉತ್ಸವ ನಗರದ ಘನತೆಗೆ ಕಪ್ಪುಚುಕ್ಕೆ. ಇಂತಹ ಅಶ್ಲೀಲ, ಅನೈತಿಕ, ಅಸಭ್ಯತೆ ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಯಾರೇ ಸಂಘಟಿಸಿದರೂ ಅವುಗಳನ್ನು ವಿರೋಧಿಸಲು ಸಾರ್ವಜನಿಕರು ಮುಂದೆ ಬರಬೇಕು ಎಂದು ಧಾರವಾಡದ ನಾಗರಿಕರಲ್ಲಿ ಅವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಎಚ್.ಜಿ. ದೇಸಾಯಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.