ಧಾರವಾಡ

ಕೆವಿಜಿ: ಠೇವಣಿ ಬಡ್ಡಿ ದರ ಹೆಚ್ಚಳ

Published On :

ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ತನ್ನ ಠೇವಣಿ ಮೇಲಿನ ಬಡ್ಡಿದರವನ್ನು ಸ್ಪರ್ಧಾತ್ಮಕವಾಗಿ ಪರಿಷ್ಕರಿಸಿದ್ದು, ಹೊಸ ಬಡ್ಡಿ ದರ ಡಿ. 14ರಿಂದ ಪೂರ್ವಾನ್ವಯಗೊಳ್ಳಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಶೋಕ ರೆಡ್ದಿ ತಿಳಿಸಿದ್ದಾರೆ.
ಬಡ್ಡಿದರದ ಪರಿಷ್ಕರಣೆಯಿಂದಾಗಿ (1 ವರ್ಷ ಮೇಲ್ಪಟ್ಟು 3 ವರ್ಷಗಳ ಒಳಗಡೆ) ಹಿರಿಯ ನಾಗರಿಕರು ಸಾಮಾನ್ಯರಿಗಿಂತ ಶೇ. 1ರ ಹೆಚ್ಚಿನ ಬಡ್ಡಿದರ ಪಡೆಯಲಿದ್ದು ಅವರಿಗೀಗ ಗರಿಷ್ಠ ಶೇ. 10.10ರಷ್ಟು ಅನ್ವಯವಾಗಲಿದೆ. ಹಾಗೆಯೇ ಹಿರಿಯ ನಾಗರಿಕರಲ್ಲದವರ ಠೇವಣಿಗಳಿಗೆ ಗರಿಷ್ಠ ಶೇ. 9.10ರಷ್ಟು ದೊರೆಯಲಿದೆ.
 15 ದಿನಗಳಿಂದ 29 ದಿನಗಳ ವರೆಗೆ ಶೇ. 5, 30 ದಿನಗಳಿಂದ 45 ದಿನಗಳವರೆಗೆ ಶೇ. 6, 46 ದಿನಗಳಿಂದ 90 ದಿನಗಳ ವರೆಗೆ ಶೇ. 7.75, 91 ದಿನಗಳಿಂದ 120 ದಿನಗಳ ವರೆಗೆ ಶೇ. 8.75, 121ದಿನಗಳಿಂದ 180 ದಿನಗಳ ವರೆಗೆ ಶೇ. 8, 181 ದಿನಗಳಿಂದ 264 ದಿನಗಳ ವರೆಗೆ ಶೇ. 9, 1 ವರ್ಷ ಮೇಲ್ಪಟ್ಟು ಮೂರು ವರ್ಷಗಳ ಒಳಗಡೆ ಶೇ. 9.10 ನೀಡುವುದಾಗಿ ತಿಳಿಸಿದೆ. ಸಾರ್ವಜನಿಕರ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರ ಕಷ್ಟದ ಗಳಿಕೆಗೆ ಉತ್ತಮ ಪ್ರತಿಫಲ ನೀಡುವ ದೃಷ್ಟಿಯಿಂದ ಠೇವಣಿ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವ ನಿರ್ಣಯ ಕೈಗೊಳ್ಳಲಾಯಿತು ಎಂದು ಬ್ಯಾಂಕ್ ಅಧ್ಯಕ್ಷ ಅಶೋಕ ರೆಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.