ಹತ್ತು ವರ್ಷಗಳಲ್ಲಿ ಬದಲಾದ ಮಾಧ್ಯಮ ಕ್ಷೇತ್ರ: ಗಂಗಾಧರ ಮೊದಲಿಯಾರ್
ಧಾರವಾಡ: ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಚಿತ್ರಣವನ್ನು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ತೋರಿಸುವ ಮಾಧ್ಯಮದಲ್ಲಿ ಕಳೆದ ಹತ್ತು ವರ್ಷಗಳಿಂದ ಅನೇಕ ಬದಲಾವಣೆಗಳಾಗಿವೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಹೇಳಿದರು.
ವಿದ್ಯಾವರ್ಧಕ ಸಂಘದಲ್ಲಿ ಸಾಕಾರ ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನದ ವತಿಯಿಂದ ಭಾನುವಾರ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಸೃಜನಾತ್ಮಕ ಕಲೆಗಳ ಹಾಗೂ ಮಾಧ್ಯಮಗಳ ಪಾತ್ರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಜನರ ಮುಂದಿಡುವ ಮಾಧ್ಯಮ ಕ್ಷೇತ್ರವು ಸಹ ಇಂದು ಭ್ರಷ್ಟಾಚಾರದಲ್ಲಿ ಮುಳುಗಿರುವ ಕುರಿತು ಚರ್ಚ ನಡೆಯುತ್ತಿದೆ. ನೇರವಾಗಿ ಭ್ರಷ್ಟಾಚಾರ ಮಾಡದಿದ್ದರೂ ಸಹ ಒಂದು ಆದರ್ಶಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಮಾಧ್ಯಮಗಳು ಕೆಲಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯಕ್ಕೂ ಮತ್ತು ಪತ್ರಿಕೆಗಳಿಗೂ ಅಪಾರ ನಂಟಿದೆ. ಸಾಹಿತ್ಯ ಬಲ್ಲವರು ಪತ್ರಿಕೆಗಳಿಗೆ ಈ ಹಿಂದೆ ಬರುತ್ತಿದ್ದರು. ಆದರೆ, ಇಂದು ಕಾಲ ಬದಲಾಗಿದ್ದು, ಪತ್ರಿಕೆಗಳು ಯುವ ಸಮುದಾಯದ ಮನಮೊಲಿಸಲು ನಾನಾ ರೀತಿಯ ಸಾಹಸ ಮಾಡುತ್ತಿವೆ ಎಂದರು.
ಕುಚಿಪುಡಿ ಕಲಾವಿದೆ ವೈಜಯಂತಿ ಕಾಶಿ ಮಾತನಾಡಿ, ನೃತ್ಯ ಕಲೆಯಲ್ಲಿ ಅಗಾಧ ಶಕ್ತಿ ಇದ್ದು, ಮನುಷ್ಯನ ಮನಸ್ಸನ್ನು ಬದಲಾವಣೆ ಮಾಡುವ ಕಾರ್ಯ ನೃತ್ಯ ಮಾಡುತ್ತದೆ. ಕಲಾವಿದರು ಕೇವಲ ನೃತ್ಯ ಮಾಡುವುದಿಲ್ಲ. ಬದಲಿಗೆ ಹಾಡು, ತಾಳ, ವಾದ್ಯಗಳನ್ನು ಅನುಭವಿಸಿ ನೃತ್ಯ ಮಾಡುತ್ತಾರೆ. ನೃತ್ಯದಿಂದ ಎದುರಿನ ಮನಸ್ಸುಗಳನ್ನು ಹಾಗೂ ಅವರ ಭಾವನೆಗಳನ್ನು ತಿಳಿದುಕೊಳ್ಳಬಹುದಾಗಿದ್ದು, ಕಲೆಗಳಿಂದ ಸ್ವಸ್ಥ ಸಮಾಜ ನಿರ್ಮಾಣ ಮಾಡಬಹುದಾಗಿದೆ ಎಂದರು.
ಭಾರತೀಯ ಪತ್ರಕರ್ತರ ಒಕ್ಕೂಟದ ಉಪಾಧ್ಯಕ್ಷ ಬಿ. ವಿ. ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ, ಡಾ. ಶುಭದಾ ಇದ್ದರು. ನಂತರ ಮುಕ್ತ ಸಂವಾದ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

