ಕಬ್ಬು ಬಿತ್ತುವ ಯಂತ್ರ ಸಂಶೋಧನೆ
ಅಣ್ಣಿಗೇರಿ: ಕಬ್ಬು ಬಿತ್ತುವ ಯಂತ್ರವನ್ನು ಕೃಷಿ ವಿಜ್ಞಾನಿ ಎ.ಐ. ನಡಕಟ್ಟಿ ಸಂಶೋಧನೆ ಮಾಡಿದ್ದಾರೆ. ಅಂದಾಜು 1.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಯಂತ್ರ ಇದಾಗಿದೆ. ಒಂದು ಕೂರಿಗೆ ಕಬ್ಬು ಬಿತ್ತನೆಗೆ ಇಂದಿನ ರೈತರು ರು. 40 ಸಾವಿರ ಖರ್ಚು ಮಾಡಬೇಕು, ಆದರೆ ಇವರ ಅವಿಷ್ಕಾರದ ಯಂತ್ರದಿಂದ ಒಂದು ಕೂರಿಗೆ ಕಬ್ಬು ಬಿತ್ತನೆಗೆ ಕೇವಲ ರು. 2 ಸಾವಿರ ಖರ್ಚು ಮಾತ್ರ ಬರುತ್ತದೆ.
ಯಂತ್ರ ಉಪಯೋಗಿಸುವ ವಿಧಾನ: ಕಬ್ಬಿನ ತುಂಡುಗಳು ಎಳೂವರೆಗಿಂತ ಕಡಿಮೆ ಮತ್ತು ಉದ್ದವಾಗಿರಬಾರದು. ಕಬ್ಬಿನ ಹೆಡ್ಡಿನಲ್ಲಿ ತುಂಡುಗಳನ್ನು ಡಬ್ಬಿಗೆ ಸಮಾನಾಂತರವಾಗಿ ತುಂಬಬೇಕು. ಡಬ್ಬಿಯಲ್ಲಿ 8 ರಿಂದ 10 ಕಬ್ಬಿನ ತುಂಡುಗಳನ್ನು ಒಂದೊಂದೇ ಹೊಂದಿಸಬೇಕು. ತುಂಡುಗಳು ಡೊಂಕಾಗಿದ್ದರೆ ಹೆಡ್ಡಿನಲ್ಲಿ ಸಿಕ್ಕಿಕೊಳ್ಳುತ್ತವೆ. ತುಂಡುಗಳು ಅತಿ ಸಣ್ಣ ಮತ್ತು ಅತಿ ದಪ್ಪವಾಗಿರಬಾರದು. ಟ್ರ್ಯಾಕ್ಟರ್ ವೇಗ ಹೆಚ್ಚು ಕಡಿಮೆ ಮಾಡಬಾರದು. ಕಬ್ಬು ಸಮಾನಾಗಿ ಕಟ್ಟು ಮಾಡುವ ಯಂತ್ರ ಬಳಸಬಹುದು.
ಪಟ್ಟಣದ ಕೃಷಿ ವಿಜ್ಞಾನಿ ಎ.ಐ. ನಡಕಟ್ಟಿ ರೈತರಿಗೆ ಖರ್ಚು ಕಡಿಮೆ ಮಾಡುವ ಕೃಷಿ ಉಪಕರಣಗಳ ಸಂಶೋಧಕ. ವಿಶ್ವಶಾಂತಿ ಅಗ್ರಿಕಲ್ಚರಲ್ ರಿಸರ್ಚ್ ಮತ್ತು ಇಂಡಸ್ಟ್ರಿಯಲ್ ಡೆವೆಲೆಪ್ಮೆಂಟ್ ಸೆಂಟರ್ ರೂವಾರಿ. ಅಬ್ದುಲ್ ಖಾದಿರ ನಡಕಟ್ಟಿ ಅವರ ಶೋಧನೆಗಳೆಲ್ಲ ತೀರ ಸರಳ ಹಾಗೂ ಕಡಿಮೆ ವೆಚ್ಚದ್ದಾಗಿವೆ. ಎಲ್ಲ ಮಾದರಿಗಳೂ ಪ್ರಚಲಿತ ಸದ್ಬಳಕೆಗೆ ಯೋಗ್ಯವಾಗಿವೆ. ಆದರೆ ಇವರ ಸಂಶೋಧನೆಗಳನ್ನು ರೈತರಗೆ ತಲುಪಿಸುವಲ್ಲಿ ಸರ್ಕಾರವಾಗಲಿ, ಖಾಸಗಿ ಸಂಸ್ಥೆಗಳಾಗಲೀ ಮುಂದೆ ಬಂದಿಲ್ಲ. ಗುಜರಾತ್ ಸರ್ಕಾರದ ಸಂಸ್ಥೆಯೊಂದು ಸಾಮಾನ್ಯರ ಸಂಶೋಧನೆಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡುತ್ತಿದೆ. ಅಂಥ ವ್ಯವಸ್ಥೆ ಕರ್ನಾಟಕ ಸರ್ಕಾರವೂ ಮಾಡುವ ಅವಶ್ಯಕತೆ ಇದೆ.
ರಾಷ್ಟಪತಿ ಅಬ್ದುಲ್ ಕಲಾಂ ನಡಕಟ್ಟಿ ಅವರ ಸಂಶೋಧನೆಗಳ ಬಗ್ಗೆ ಅಧ್ಯಯನ ಮಾಡಲು ಸೂಚಿಸಿರುವುದರಿಂದ ರಾಯಚೂರು ಕೃಷಿ ಕಾಲೇಜಿನ ಎಂ. ಅನಂತಚಾರಿ, ಹಾಗೂ ಎಸ್.ಎಸ್. ಕುಮಾಟೆ ಇತ್ತೀಚೆಗೆ ನಡಕಟ್ಟಿನ ಅವರ ವಿಶ್ವಶಾಂತಿ ರಿಸರ್ಚ್ ಸೆಂಟರ್ಗೆ ಭೇಟಿ ನೀಡಿದ್ದರು. ಅಲ್ಲದೆ, ಅವರ ಸಂಶೋಧನೆಗಳ ಕುರಿತು ಅಧ್ಯಯನ ಮಾಡಿದ್ದಾರೆ. ರಾಜ್ಯ ಸರ್ಕಾರ ನಡಕಟ್ಟಿನ ಸಂಶೋಧನೆಗಳನ್ನು ಅಭಿವೃದ್ಧಿಪಡಿಸಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ ರೈತರಿಗೆ ನೆರವಾಗಬೇಕಿದೆ.
ಕಬ್ಬು ಬಿತ್ತುವ ಹೊಸ ಯಂತ್ರ ರೈತರ ಪಾಲಿಗೆ ಕಾಮಧೇನು. ಕಡಿಮೆ ಖರ್ಚಿನಲ್ಲಿ ಕಬ್ಬು ಬಿತ್ತನೆಗೆ ರೈತರು ಮುಂದಾಗಬೇಕು. ಕೃಷಿ ವಿಜ್ಞಾನಿಗೆ ಇನ್ನೂ ಹೆಚ್ಚಿನ ಸಂಶೋಧನೆಗೆ ರೈತ ಬಾಂಧವರು, ಸರ್ಕಾರ ಸ್ಫೂರ್ತಿ ತುಂಬಬೇಕಾಗಿದೆ. ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಈಶ್ವರಪ್ಪ ಉಳ್ಳಾಗಡ್ಡಿ, ಎ.ಪಿ. ಗುರಿಕಾರ, ರೈತರು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

