ವಿದ್ಯಾರ್ಥಿಗೆ ಅಕ್ಷರ ಜ್ಞಾನ ಬೇಕು
ಕನ್ನಡಪ್ರಭ ವಾರ್ತೆ, ಕೊಪ್ಪಳ, ಜ. 25
ವಿದ್ಯಾರ್ಥಿ ಎಂಬ ಮಠಕ್ಕೆ ಅಕ್ಷರವೆಂಬ ನೀರುಣಿಸಿದಾಗ ಜ್ಞಾನವೆಂಬ ನವೀನ ಹೂವುಗಳು ಅರಳಿ ನಿಲ್ಲುತ್ತವೆ. ಆಗ ವಿದ್ಯಾರ್ಥಿಗಳ ಬಾಳು ಉಜ್ವಲವಾಗಿರಲು ಸಾಧ್ಯವಾಗುತ್ತದೆ ಎಂದು ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿಗಳು ನುಡಿದರು.
ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 116ನೇ ಜನ್ಮ ದಿನಾಚರಣೆ ಹಾಗೂ ಶಾಲಾ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದರು.
ತಾಯಿ ಗರ್ಭದಿಂದ ಜನಿಸುವ ಮಗುವಿನ ಹೃದಯ ಎಷ್ಟು ಸ್ವಚ್ಛವಾಗಿರುತ್ತದೆಯೋ ಅದೇ ರೀತಿ ಮಕ್ಕಳು ಶಾಲೆಗೆ ಸೇರುವ ಮುನ್ನ ಅಷ್ಟೆ ಸ್ವಚ್ಛಂದವಾಗಿರುತ್ತದೆ. ಆ ವೇಳೆ ಮಕ್ಕಳಿಗೆ ಉತ್ತಮ ಜ್ಞಾನ ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಜಿಲ್ಲಾಧ್ಯಕ್ಷ ರಾಘವೇಂದ್ರ ಪಾನಘಂಟಿ, ಮುಖಂಡರಾದ ಸುರೇಶ ಭೂಮರಡ್ಡಿ, ಕೆ.ಎಮ್. ಸಯ್ಯದ್, ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ, ಮಲ್ಲಪ್ಪ ದೊಡ್ಡವೀರಪ್ಪ ಕವಲೂರು, ಪತ್ರೆಪ್ಪ ಪಲ್ಲೇದ, ಅಶೋಕ ಬಜಾರಮಠ, ಖಾಸಿಂಅಲಿ ಹುಡೇದ, ಸೋಮಪ್ಪ ಗೆಜ್ಜಿ, ಗೌಷ್ ಪಾಷಾ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ನೇತಾಜಿ ಸುಭಾಸ ಚಂದ್ರ ಬೋಸ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು. ಅಬ್ಬಾಸ್‌ಅಲಿ ಸದ್ಗುರು ತಾತನವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಶಾಲೆ ಮುಖ್ಯೋಪಾಧ್ಯಾಯ ರೇಣುಕಾ ಅತ್ತನೂರು, ಮಕ್ಕಳ ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಾರುತಿ ಕೆ.ಹೆಚ್ ನಿರೂಪಿಸಿದರು. ಕೊಟ್ರೇಶ ಕಾತರಕಿ ಸ್ವಾಗತಿಸಿದರು. ಆಶಾ ದೊಡ್ಡಮನಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

