ಧಾರವಾಡ

ಸುದ್ದಿ ಸಂಕ್ಷೇಪ

Published On :

ಇಂದು ಪ್ರತಿಭಾ ಪುರಸ್ಕಾರ
ಗದಗ: ಮಾರ್ಚ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಬೆಟಗೇರಿಯ 1 ರಿಂದ 10 ವಾರ್ಡ್‌ಗಳ ಪಂಚಮಸಾಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಜು. 7ರ ಸಂಜೆ 6.30ಕ್ಕೆ ಬೆಟಗೇರಿಯ ಉಸಗಿನಗಟ್ಟಿ ಓಣಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಕೂಡಲ ಸಂಗಮದ ಪಂಚಮಸಾಲಿಯ ಜಯ ಬಸವಮೃತ್ಯುಂಜಯ ಶ್ರೀ ಸಾನ್ನಿಧ್ಯ ವಹಿಸುವರು. ಸಚಿವ ಎಚ್.ಕೆ. ಪಾಟೀಲ ಪ್ರಶಸ್ತಿ ಪ್ರದಾನ ಮಾಡುವರು ಎಂದು ಘಟಕಾಧ್ಯಕ್ಷ ಕಲ್ಯಾಣಪ್ಪ ಹೋಳಿ, ಕಾರ್ಯದರ್ಶಿ ಮಹೇಶ ಕರಿಬಿಷ್ಟಿ ತಿಳಿಸಿದ್ದಾರೆ.
ಇಂದು ಕಾರ್ಯಾಗಾರ
ಗದಗ: ಬಸವದಳದ 1025ನೇ ಶರಣ ಸಂಗಮ, ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ 133ನೇ ಜಯಂತಿ ನಿಮಿತ್ತ ಬಸವ (ಲಿಂಗಾಯತ) ಧರ್ಮದ ಸಂಸ್ಕಾರಗಳ ಕುರಿತು ಕಾರ್ಯಾಗಾರವನ್ನು ಜು. 7ರ ಸಂಜೆ 6ಕ್ಕೆ ನಗರದ ಶಿವಾನಂದ ನಗರದ ಕಳಸಾಪುರ ರಸ್ತೆ ಬಸವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಗದಗ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಬಸವದಳದ ಅಧ್ಯಕ್ಷ ಎಂ.ಬಿ. ಲಿಂಗದಾಳ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿ.ಬಿ. ಹಳ್ಯಾಳ, ಗಿರಿಜಮ್ಮ ಧರ್ಮರಡ್ಡಿ, ಉಪನ್ಯಾಸಕರಾಗಿ ಎಂ.ಎ. ಹಂಚಿನಾಳ, ಎ.ಬಿ. ಬರಗುಂಡಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.