ಧಾರವಾಡ

ಬೈಕ್ ಮಾರಾಟ ಯತ್ನ: ಬಂಧನ

Published On :

ಹುಬ್ಬಳ್ಳಿ:  ಕಳ್ಳತನ ಮಾಡಿದ್ದ ಬೈಕ್ ಹಾಗೂ ಚಿನ್ನಾಭರಣ ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರನ್ನು ಕೇಶ್ವಾಪುರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
  ಬಂಧಿತರನ್ನು ಹಳೇಹುಬ್ಬಳ್ಳಿ ನಿವಾಸಿಗಳಾದ ಸಾಧೀಕ ಈಸಾಕ ಪಂತೋಜಿ ಹಾಗೂ ಮೈನುದ್ದಿನ ಹಯಾತ್‌ಖಾನ ಧಾರವಾಡ ಎಂದು ಗುರುತಿಸಲಾಗಿದೆ. ಆರೋಪಿಗಳಿಬ್ಬರೂ ತಾವು ಕದ್ದಿದ್ದ ಹೀರೋ ಹೊಂಡಾ ಫ್ಯಾಷನ್ ಬೈಕ್ (ಕೆಎ 25 ಡಬ್ಲೂ3579)್ನ ಹಾಗೂ ರು. 95 ಸಾವಿರ ಮೌಲ್ಯದ ಬೆಲೆಯ ಬಂಗಾರದ ಆಭರಣಗಳನ್ನು ಮಾರಾಟ ಮಾಡುವ ಉದ್ದೇಶದಿಂದ ನಗರದ ಗದಗ ರಸ್ತೆಯ ಮದರಥೇರೆಸಾ ಕ್ರಾಸ್ ಬಳಿ ನಿಂತಾಗ ಪೊಲೀಸರು ಬಂಧಿಸಿದ್ದಾರೆ.
ವರದಕ್ಷಿಣೆ ಕಿರುಕುಳ: ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಮಹಿಳೆಯೊಬ್ಬಳು ನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾಳೆ. ಹಳೇಹುಬ್ಬಳ್ಳಿ ಮಾಳಾಪುರ ಹಳೇ ಪ್ಲಾಟನ ನಿವಾಸಿ ಶಕೀರಾಬಾನು ಅಬ್ದುಲ್‌ಕಾದರ ಮಾಣಿಕ ಎಂಬಾಕೆಯೇ ತನ್ನ ಪತಿ ಅಬ್ದುಲ್‌ಖಾದರನ ವಿರುದ್ಧ ವರದಕ್ಷಿಣೆ ಕಿರುಕುಳದ ಬಗ್ಗೆ ದೂರು ನೀಡಿದ್ದಾಳೆ.  ಈಕೆ ಮದುವೆ ನಂತರ ಧಾರವಾಡದಲ್ಲಿನ ಪತಿ ಅಬ್ದುಲ್‌ಖಾದರ ಮನೆಗೆ ಹೋದಾಗ ವರದಕ್ಷಿಣೆ ಕಡಿಮೆ ತಂದಿರುವುದಾಗಿ ಕಿರುಕುಳ ನೀಡುತ್ತಿದ್ದ ಹಾಗೂ ಪರಪುರುಷರೊಂದಿಗೆ ತನ್ನ ವ್ಯಕ್ತಿತ್ವವನ್ನು ಶಂಕೆಯಿಂದ ನೋಡುತ್ತಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ: ಅವಳಿ ನಗರದಲ್ಲಿ ಭಾನುವಾರ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ 1,153 ಪ್ರಕರಣ ದಾಖಲಿಸಿದ್ದು, ಒಟ್ಟು 1,54,100 ದಂಡ ವಸೂಲಿ ಮಾಡಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.