ಧಾರವಾಡ

ನಾಳೆ ಬೇಕರಿ ತರಬೇತಿ

Published On :

ಧಾರವಾಡ: ಕೃಷಿ ವಿವಿ ವಿಸ್ತರಣಾ ನಿರ್ದೇಶನಾಲಯದ ಬೇಕರಿ ತರಬೇತಿ ಕೇಂದ್ರದಲ್ಲಿ ಜು. 17ರಿಂದ 15 ದಿನಗಳ ಬೇಕರಿ ತರಬೇತಿ ಆಯೋಜಿಸಲಾಗಿದೆ.  ತರಬೇತಿ 10 ಜನರಿಗೆ ಸೀಮಿತ. ಮೊದಲು ಬಂದವರಿಗೆ ಆದ್ಯತೆ. ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ತರಬೇತಿ ನಡೆಯಲಿದೆ. ಮಾಹಿತಿಗೆ ಮುಖ್ಯಸ್ಥರು, ಬೇಕರಿ ತರಬೇತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾಲಯ, ಧಾರವಾಡ (ದೂ.ಸಂ. 2448512 ವಿಸ್ತರಣೆ: 282 ಅಥವಾ 2447494)ಗೆ ಸಂಪರ್ಕಿಸಬಹುದು. ಬೇಕರಿ ತರಬೇತಿ ಕೇಂದ್ರದಲ್ಲಿ ಸ್ವಂತ ಉದ್ಯೋಗ ಹೊಂದಲು, ವಿವಿಧ ಬಗೆಯ ಬೇಕರಿ ಪದಾರ್ಥಗಳ ತಯಾರಿಕೆ ಬಗ್ಗೆ ಒಂದು ದಿನ, ಒಂದು ವಾರ, ಎರಡು ವಾರ, ಒಂದು ತಿಂಗಳ ತರಬೇತಿಗಳನ್ನು ಈ ವರ್ಷದಾದ್ಯಂತ ಹಮ್ಮಿಕೊಳ್ಳಲಾಗುವುದು. ಆಸಕ್ತರು ತಮಗೆ ಇಚ್ಛೆಯುಳ್ಳ ತರಬೇತಿಗೆ ಮೊದಲೇ ನೋಂದಣಿ ಮಾಡಿಸಿಕೊಳ್ಳಲು ಹಾಗೂ ಮಾಹಿತಿಗಾಗಿ ಬೇಕರಿ ತರಬೇತಿ ಮುಖ್ಯಸ್ಥರನ್ನು ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚು ಬೋಗಿ ಅಳವಡಿಕೆ
ಹುಬ್ಬಳ್ಳಿ: ಹೈದ್ರಾಬಾದ್-ಬಿಜಾಪುರ ಮತ್ತು ಬಿಜಾಪುರ-ಬೋಲಾರಾಮ್ ಪ್ಯಾಸೆಂಜರ್ ರೈಲುಗಳಿಗೆ ತಾತ್ಕಾಲಿಕವಾಗಿ  ಎರಡು ಹೆಚ್ಚುವರಿ ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್‌ಗಳನ್ನು ಆಳವಡಿಸಲಾಗಿದೆ ಎಂದು ನೈಋತ್ಯ ರೇಲ್ವೆ ಪ್ರಕಟಣೆ ತಿಳಿಸಿದೆ. ಜು. 16ರಿಂದ 18ರ ವರೆಗೆ ಸಂಚರಿಸುವ ಬಿಜಾಪುರ-ಬೊಲಾರಾಮ್ ಪ್ಯಾಸೆಂಜರ್ ರೈಲಿಗೆ ಹೆಚ್ಚುವರಿ ಎರಡು ಬೋಗಿಗಳನ್ನು ಅಳವಡಿಸಲಾಗಿದೆ. ಯಶವಂತಪುರ-ಅಹ್ಮದಾಬಾದ್ ರೈಲಿಗೆ 23 ಬೋಗಿಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಎರಡು ಎಸಿ 2 ಟೈರ್ ಬೋಗಿಗಳು, ಮೂರು ಎಸಿ 3 ಟೈರ್ ಬೋಗಿಗಳು, 12 ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್‌ಗಳು ಮತ್ತು ಮೂರು ಸಾಮಾನ್ಯ ಬೋಗಿಗಳು ಸೇರಿದಂತೆ ಲಗ್ಗೇಜ್ ಬೋಗಿಗಳನ್ನು ಅಳವಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.