ವೈಜ್ಞಾನಿಕ ಪ್ರತಿಭೆ ಹೊರ ತನ್ನಿ
ಧಾರವಾಡ: ಮಕ್ಕಳಲ್ಲಿ ಹುದಗಿರುವ ವೈಜ್ಞಾನಿಕ ಅನ್ವೇಷಣೆಯ ಪ್ರತಿಭೆಯನ್ನು ಹೊರ ತರುವ ಮೂಲಕ ಬಾಲ ವಿಜ್ಞಾನಿಗಳನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕಿದೆ ಎಂದು ಶಿಕ್ಷಣ ಇಲಾಖೆ ಅಪರ ಆಯುಕ್ತ ಎ.ಎನ್. ಪಾಟೀಲ ಹೇಳಿದರು.
ಶಿಕ್ಷಣ ಇಲಾಖೆಯು ಇಲ್ಲಿನ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ನಾಲ್ಕು ದಿನಗಳ ಇನ್ಸ್ಪೈರ್ ಅವಾರ್ಡ್- 2013 ಜಿಲ್ಲಾ ಮಟ್ಟದ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜ್ಞಾನದ ಭಾಗವೇ ಆಗಿರುವ ಖಗೋಳ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಅನೇಕ ಸಂಗತಿಗಳನ್ನು ಮಕ್ಕಳು ಪ್ರಯೋಗಕ್ಕೆ ಅಳವಡಿಸಿಕೊಳ್ಳುವ ಮೂಲಕ ಅಲ್ಲಿಯ ವಿಜ್ಞಾನದ ಮೂಲ ಆಶಯದ ಹೊಸ ಅಂಶಗಳನ್ನು ನಿಖರವಾಗಿ ಅರಿಯಲು ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ಈ ಅವಾರ್ಡ್ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಈ ರೀತಿಯ ವೈಜ್ಞಾನಿಕ ಚಿಂತನೆ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕವಾಗಿ ಅನಾವರಣವಾಗುತ್ತದೆ ಎಂದರು.
ಜಿಪಂನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ. ಬಾಲಣ್ಣವರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳು ವಿಜ್ಞಾನದತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಹೊಸ ಹೊಸ ಸಂಶೋಧನೆಗಳನ್ನು ಕೈಗೊಳ್ಳಲು ಈ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿಗಳ ಪ್ರದರ್ಶನ ಪ್ರೇರಣೆ ನೀಡುತ್ತಿವೆ ಎಂದರು.
ಸಿಸ್ಲೆಪ್- ಕರ್ನಾಟಕ ಸಂಸ್ಥೆ ನಿರ್ದೇಶಕ ಆರ್.ಟಿ. ದೇಸಾಯಿ, ಕವಿವಿ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಜೆ.ಎಸ್. ಭಟ್, ಕರ್ನಾಟಕ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಗಿರಿಯಪ್ಪನವರ, ಉಪನ್ಯಾಸಕಿ ಗಾಯತ್ರಿ ಹುದ್ದಾರ, ಎಂ.ಎಫ್. ಕುಂದಗೋಳ, ಡಾ. ಗುರುನಾಥ ಹೂಗಾರ, ಎಂ.ಕೆ. ಮರಿಗೌಡ್ರ, ಜಯಶ್ರೀ ಕಾರೇಕರ, ಉಮಾದೇವಿ ಬಸಾಪುರ, ಅಕ್ಕಮಹಾದೇವಿ ಹೂಗಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಬಿ. ಬಿಂಗೇರಿ, ಗಿರೀಶ ಪದಕಿ, ಎಸ್.ಎಸ್. ಕೆಳದಿಮಠ, ಆರ್.ಎಸ್. ಮುಳ್ಳೂರ, ಪಾರ್ವತಿ ವಸ್ತ್ರದ, ಗಾಯತ್ರಿ ಕಾಮಕರ, ಎಚ್.ಎನ್. ಗೋಪಾಲಕೃಷ್ಣ, ಗುರುಮೂರ್ತಿ ಯರಗಂಬಳಿಮಠ, ಆರ್.ಎಚ್. ಶಿವಳ್ಳಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

