ಧಾರವಾಡ

ಸತತ ಮಳೆ: ಕೃಷಿ ಕಾರ್ಯ ಚುರುಕು

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 25
ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆ ಚಿಗುರೊಡೆದಿದ್ದು, ಗೊಬ್ಬರ ಎರಚುವ ಕಾಯಕದಲ್ಲಿ ರೈತರು ನಿರತರಾಗಿದ್ದಾರೆ.
ಸತತ ಸುರಿಯುತ್ತಿರುವ ಮಳೆಗೆ ಚಿಗುರೊಡೆದ ಬೆಳೆ ಮಧ್ಯದ ಕಸ ತೆಗೆಯುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಬಿತ್ತನೆ ಖರೀದಿಯಲ್ಲಿ ರೈತರು ತೊಡಗಿದ್ದಾರೆ. ಜಿಲ್ಲೆಯ 2,08,900 ಹೆಕ್ಟೇರ್ ಕೃಷಿ ಜಮೀನಿನಲ್ಲಿ ಈ ಬಾರಿ 1.72 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆಯಾಗಿದೆ. ಒಟ್ಟು ಕೃಷಿ ಜಮೀನಿನ ಶೇ. 82ರಷ್ಟು ಬಿತ್ತನೆ ಈ ವರ್ಷ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಕಾಲಕ್ಕೆ ಸರಿಯಾಗಿ ಮಳೆ ಸುರಿಯುತ್ತಿದ್ದರಿಂದ ರೈತರು ಉತ್ತಮ ಬೆಳೆ ಬರಬಹುದೆಂಬ ಭರವಸೆಯನ್ನಿಟ್ಟುಕೊಂಡಿದ್ದಾರೆ.
ಗೊಬ್ಬರ ಖರೀದಿ ಚುರುಕು: ಬೆಳೆಗಳಿಗೆ ಬೇಕಾಗಿರುವ ವಿವಿಧ ಗೊಬ್ಬರಗಳ ಶೇಖರಣೆ ಕೃಷಿ ಇಲಾಖೆಯಲ್ಲಿ ಸಾಕಷ್ಟಿರುವುದರಿಂದ ಗೊಬ್ಬರ ಖರೀದಿಯಲ್ಲಿ ಯಾವುದೇ ಅಡಚಣೆಯಾಗದಿರುವ ಆಶಾಭಾವ ರೈತರದ್ದು.
ಮಳೆ ಬಿಡುವು ನೀಡದೇ ಇದ್ದಿದ್ದರಿಂದ ಇದುವರೆಗೆ ರೈತರು ಗೊಬ್ಬರ ಎರಚುವ ಕೆಲಸ ಮಾಡಿದ್ದಿಲ್ಲ. ಆದರೆ, ಇದೀಗ ಮಳೆ ರಭಸ ಒಂದಿಷ್ಟು ಕಡಿಮೆಯಾಗಿದ್ದರಿಂದ ರೈತರು ಗೊಬ್ಬರ ಖರೀದಿಸುವ ಕಾರ್ಯಕ್ಕೆ ಚುರುಕು ನೀಡಿದ್ದಾರೆ. ಒಂದೆರೆಡು ದಿನ ಮಳೆ ಬಿಡುವು ಕೊಟ್ಟಲ್ಲಿ, ಗೊಬ್ಬರ ಎರಚುವ ಕಾರ್ಯ ಪೂರ್ಣಗೊಳಿಸಲು ರೈತರು ಪೂರ್ವ ಸಿದ್ಧತೆ ನಡೆಸಿದ್ದಾರೆ.
ಇಳುವರಿಯ ನಿರೀಕ್ಷೆ: ಕಳೆದ ವರ್ಷ ಸಮರ್ಪಕ ಮಳೆ ಬಾರದ ಕಾರಣ ಹೆಚ್ಚಿನ ಇಳುವರಿಯಾಗಿರಲಿಲ್ಲ. ಆದರೆ, ಈ ಬಾರಿ ಸಮಯಕ್ಕೆ ಸರಿಯಾಗಿ ಮಳೆಯಾಗಿರುವುದರಿಂದ ಹೆಚ್ಚಿನ ಇಳುವರಿಯ ಹೊಂದುವ ಆಶಯದ ಗೂಡನ್ನು ರೈತರು ಕಟ್ಟಿಕೊಂಡಿದ್ದಾರೆ. ಜಿಲ್ಲೆಯ ರೈತರು ತಮ್ಮ ಜಮೀನುಗಳಲ್ಲಿ ಗೋವಿನಜೋಳ, ಹತ್ತಿ, ಬತ್ತ, ಸೋಯಾಬಿನ್, ಕಬ್ಬು ಹಾಗೂ ಹಲವು ರೀತಿಯ ತರಕಾರಿಗಳನ್ನು  ಬೆಳೆದಿದ್ದು, ಉತ್ತಮ ಇಳುವರ್ನಿ ಹೊಂದುವುದರ ಮೂಲಕ ಹೆಚ್ಚಿನ ಲಾಭ ಗಳಿಸುವ ಗುರಿ ಹೊಂದಿದ್ದಾರೆ.
ಗೊಬ್ಬರ ಬೆಲೆ ಏರಿಕೆ: ರಸಗೊಬ್ಬರದ ಬೆಲೆ ಸ್ವಲ್ಪ ಮಟ್ಟಿನ ಏರಿಕೆಯಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಇನ್ನ್ನೊಂದೆಡೆ ಕೃಷಿ ಕಾರ್ಮಿಕರು ಹೆಚ್ಚಿನ ಬೆಲ್ನೆ ನಿಗದಿ ಮಾಡಿರುವುದರಿಂದ ಅವರನ್ನ್ನು ಸಮಜಾಯಿಸಿ ತಮ್ಮ ಜಮೀನುಗಳಿಗೆ ಕರೆತರುವುದು ಒಂದು ರೀತಿಯ ತಲೆನೋವಾಗಿ ಪರಿಣಮಿಸಿದೆ.
ಕಳೆದೆರಡ್ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಮಳೆ ಸುರಿಯುತ್ತಿದ್ದು, ತಾವು ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಬರಲೆಂಬ ಪ್ರಾರ್ಥನೆ ರೈತರದ್ದು. ಈ ಪ್ರಾರ್ಥನೆ ಈಡೇರಬಹುದೆಂಬ ಆಶಯದಿಂದ ರೈತರು ಸಾಲ ಮಾಡಿ ಗೊಬ್ಬರ ಖರೀದಿಸುತ್ತಿದ್ದಾರೆ. ಬೆಳೆಗಳಿಗೆ ಉತ್ತಮ ಬೆಲೆ ಬಂದಲ್ಲಿ ಕಳೆದ ಎರಡ್ಮೂರು ವರ್ಷ ಮಾಡಿದ್ದ ಸಾಲ ತೀರಿಸಬಹುದೆಂಬ ಲೆಕ್ಕಾಚಾರ ರೈತರದ್ದು. ಜೊತೆಗೆ ಕಳೆದೆರಡು ವರ್ಷಗಳಿಂದ ಆಹಾರ ಧಾನ್ಯಗಳ ಬೆಲೆ ಏರಿಯಾಗುತ್ತಿದ್ದು, ಈ ಸಾರಿ ಉತ್ತಮ ಮಳೆಯಾದ ಕಾರಣ ಅಗತ್ಯ ಆಹಾರ ಬೆಲೆಗಳು ಕೂಡ ಕ್ರಮೇಣ ಕಡಿಮೆಯಾಗಬಹುದೆಂಬ ಆಸೆ ಜನಸಾಮಾನ್ಯರಲ್ಲಿ ಮೂಡಿರುವುದು ಸಹಜ.
- ವರದಿ: ಕೃಷ್ಣ ಹಾದಿಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.