ಸುದ್ದಿ ಸಂಕ್ಷೇಪ
ನಾಳೆ ಹುಲಿಗಳ ದಿನಾಚರಣೆ
ಹುಬ್ಬಳ್ಳಿ: ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಹಾಗೂ ನಗರದ ಗ್ರೀನ್ ಆರ್ಮಿ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಹುಲಿಗಳ ದಿನಾಚರಣೆ ಜು. 29ರಂದು ಮಧ್ಯಾಹ್ನ 3ಕ್ಕೆ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಉಪನ್ಯಾಸ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿರಸಿಯ ಅರಣ್ಯ ಮಹಾವಿದ್ಯಾಲಯದ ವನ್ಯಜೀವಿನ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಶ್ರೀಧರ ಭಟ್ಟ ಅತಿಥಿಯಾಗಿ ಪಾಲ್ಗೊಳ್ಳುವರು. ಉತ್ತರ ಕನ್ನಡ ಜಿಲ್ಲೆಯ ವನ್ಯಜೀವಿ ತಜ್ಞ ರಾಮಚಂದ್ರ ಹೆಗಡೆ, ಹುಲಿಗಳು, ಅವುಗಳ ಜೀವವಿಧಾನ ಹಾಗೂ ಸಂರಕ್ಷಣೆ ಕುರಿತು ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ ಹುಲಿಗಳ ಕಿರುಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿ.ಎಚ್. ಅರಳಿ ಅಧ್ಯಕ್ಷತೆ ವಹಿಸುವರು.
ಬಸ್ನಲ್ಲಿ ಪರ್ಸ್ ಕಳ್ಳತನ
ಹುಬ್ಬಳ್ಳಿ: ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಬ್ಯಾಂಕ್ ಉದ್ಯೋಗಿಯೋರ್ವಳ ಪರ್ಸ್ ಕದ್ದ ಕಳ್ಳರು ಅದರಲ್ಲಿದ್ದ ರು. 2 ಸಾವಿರ ಜೊತೆಗೆ ಎಟಿಎಂ ಕಾರ್ಡ್ನಲ್ಲಿದ್ದ ರು. 3900 ಡ್ರಾ ಮಾಡಿಕೊಂಡ ಘಟನೆ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನವನಗರದ ಕೆನರಾ ಬ್ಯಾಂಕಿನ ಉದ್ಯೋಗಿ ಮಧುರಾ ಜೋಶಿ ಎಂಬುವವರೇ ಹಣ ಕಳೆದುಕೊಂಡವರು. ಶುಕ್ರವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಸ್ನಲ್ಲಿ ಹೊರಟಿದ್ದ ಸಂದರ್ಭದಲ್ಲಿ ಪರ್ಸ್ ಕದ್ದೊಯ್ದಿದ್ದಾರೆ. ಪರ್ಸ್ನಲ್ಲಿ ಹಣದ ಜೊತೆ ಎಟಿಎಂ ಕಾರ್ಡ್ ಸಹ ಇತ್ತು. ಕಾರ್ಡ್ನಲ್ಲಿನ ಹಾಳೆಯಲ್ಲಿ ಎಟಿಎಂ ಪಾಸವರ್ಡ್ ಸಹ ಬರೆದಿದ್ದರಿಂದ ಎಟಿಎಂಗೆ ಹೋಗಿ ಕಳ್ಳರು ಹಣ ಡ್ರಾ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

