ಸಕಾಲ ಕಾಲಮಿತಿ 21ರಿಂದ 10ಕ್ಕೆ ಇಳಿಸಲು ಚಿಂತನೆ: ಸಚಿವ ಶ್ರೀನಿವಾಸ ಪ್ರಸಾದ
ಧಾರವಾಡ: ಸಕಾಲ ಯೋಜನೆಯಡಿ ಮಾಹಿತಿ ಪಡೆಯಲು ಈಗಿರುವ 21 ದಿನಗಳ ಕಾಲಮಿತಿಯನ್ನು 10 ದಿನಕ್ಕೆ ಇಳಿಸುವ ಕುರಿತಂತೆ ಯೋಚಿಸಲಾಗುತ್ತಿದೆ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ ಹೇಳಿದ್ದಾರೆ.
ದಿ. ಡಿ.ಕೆ. ನಾಯ್ಕರ್ ಪುಣ್ಯತಿಥಿ ಅಂಗವಾಗಿ ನಗರದಲ್ಲಿ ನಡೆದ ಸಮಾರಂಭಕ್ಕೆ ಆಗಮಿಸಿದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಸಾರ್ವಜನಿಕರ ಅನುಕೂಲ ದೃಷ್ಟಿಯಿಂದ ಸಕಾಲ ಕಾಲಮಿತಿಕಡಿಮೆ ಮಾಡುವ ಕುರಿತಂತೆ ಸರ್ಕಾರ ಚಿಂತಿಸುತ್ತಿದೆ. ಶೀಘ್ರ ನಿರ್ಣಯ ಪ್ರಕಟಿಸಲಾಗುವುದು ಎಂದರು. ಅಟಲ್ಜಿ ಜನಸ್ನೇಹಿ ಕೇಂದ್ರಗಳಲ್ಲಿ ಅವ್ಯವಸ್ಥೆ ಕುರಿತು ತಮ್ಮ ಗಮನಕ್ಕೆ ಬಂದಿದೆ. ತಾವು ಕೆಲವು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಶೀಘ್ರ ಅಲ್ಲಿ ಜನರಿಗೆ ತೊಂದರೆಯಿಲ್ಲದೆ ಸೇವೆ ದೊರೆಯುವಂತೆ ಕ್ರಮ ಜರುಗಿಸಲಾಗುವುದು ಎಂದರು. ಹೊಸ ತಾಲೂಕು ರಚನೆ ವಿಷಯದಲ್ಲಿ ಸರ್ಕಾರ ಗಂಭೀರವಾಗಿದ್ದು, ನಿಶ್ಚಿತವಾಗಿಯೂ ರಚನೆಯಾಗಲಿವೆ. ಹಣಕಾಸಿನ ಅನುಕೂಲತೆ ಗಮನಿಸಿಕೊಂಡು ಅವುಗಳ ವಿಷಯದಲ್ಲಿ ಮುಂದಿನ ಹೆಜ್ಜೆ ಇಡಲಾಗುವುದು. ಸರ್ಕಾರ ರಚನೆಯಾದ ಕೂಡಲೇ ಬಡವರಿಗೆ 'ಅನ್ನಭಾಗ್ಯ'ದಂತಹ ಯೋಜನೆ ಜಾರಿ ಮಾಡಿರುವುದರಿಂದ ತಾಲೂಕು ರಚನೆ ವಿಳಂಬವಾಗಬಹುದೇ ವಿನಃ ಖಂಡಿತವಾಗಿಯೂ ರಚನೆಯಾಗುತ್ತವೆ ಎಂದು ಸಚಿವ ಶ್ರೀನಿವಾಸ ಪ್ರಸಾದ ಭರವಸೆ ವ್ಯಕ್ತಪಡಿಸಿದರು. ಆಸರೆ ಯೋಜನೆ ಕೆಲವು ಕಡೆ ಅಸ್ತವ್ಯಸ್ತವಾಗಿರುವುದು, ಅರ್ಹರಿಗೆ ಸೌಲಭ್ಯ ಸಿಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಕುರಿತಂತೆ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಈಗಾಗಲೇ ಚರ್ಚೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಆಸರೆ ಯೋಜನೆಗಳ ಪರಿಶೀಲನೆ ನಡೆಸಿ ಅಗತ್ಯ ಎನಿಸಿದಲ್ಲಿ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

