ಕಲುಷಿತ ನೀರು ಸೇವಿಸಿ ಚಿಂಚೋಳಿಯಲ್ಲಿ 41, ಹಾನಗಲ್ಲನಲ್ಲಿ 11 ಮಂದಿ ಅಸ್ವಸ್ಥ
ಹಾನಗಲ್ಲ/ಚಿಂಚೋಳಿ: ಕಲುಷಿತ ನೀರು ಸೇವಿಸಿ ಚಿಂಚೋಳಿ ಪಟ್ಟಣದಲ್ಲಿ 41, ಹಾನಗಲ್ಲ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ 11 ಜನ ಸೇರಿದಂತೆ 52 ಮಂದಿ ಅಸ್ವಸ್ಥರಾಗಿದ್ದಾರೆ.
ಚಿಂಚೋಳಿ ಪಟ್ಟಣದ ಬಡಿದರ್ಗಾ, ಚೋಟಿ ದರ್ಗಾ, ಧನಗರಗಲ್ಲಿ, ಮೋಮಿನಪುರ, ವಡ್ಡರಗಲ್ಲಿ, ಬೋಯಿಗಲ್ಲಿ, ಜೋಶಿಗಲ್ಲಿ, ಬ್ರಾಹ್ಮಣಗಲ್ಲಿ ಕಲುಷಿತ ನೀರು ಸೇವಿಸಿ 4 ವರ್ಷದ ಮಗು ಸೇರಿ 41 ಮಂದಿ ಅಸ್ವಸ್ಥಗೊಂಡಿದ್ದಾರೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಡಾ. ಸಂಜಯ ಗೋಳೆ ತಿಳಿಸಿದ್ದಾರೆ. ಹಾನಗಲ್ಲ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ನೀರು ಸರಬರಾಜು ವಾಲ್ನಲ್ಲಿ ಕಲುಷಿತ ನೀರು ಸೇರ್ಪಡೆಗೊಂಡಿರುವುದು ಹಾಗೂ ಒಂದು ಕೊಳವೆ ಬಾವಿಯಿಂದ ರಾಡಿ ನೀರು ಸರಬರಾಜು ಆಗಿರುವುದರಿಂದ 11 ಮಂದಿ ಅಸ್ವಸ್ಥಗೊಂಡಿದ್ದಾರೆ. ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

