ಆಧುನೀಕರಣ ಜೀವನ: ತಾಪಮಾನ ಹೆಚ್ಚಳ
ಧಾರವಾಡ: ಸದ್ಯ ಹೆಚ್ಚುತ್ತಿರುವ ಜಾಗತಿಕ ತಾಪಮಾನಕ್ಕೆ ಮಾನವನ ಅತಿಯಾದ ಆಧುನೀಕರಣ ಜೀವನವೇ ಕಾರಣ ಎಂದು ಟಾಟಾ ಮಾರ್ಕೋಪೋಲೊ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರಮೇಶ ಬಿಜಾಪೂರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಗ್ರೀನ್ ಆರ್ಮಿ ತಂಡ ಹಮ್ಮಿಕೊಂಡಿರುವ ವಿಶ್ವ ಪರಿಸರ ಸಪ್ತಾಹ 2013ರ ವನಮಹೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ತಮ್ಮ ಸಂಸ್ಥೆಯು ಪರಿಸರ ಕಾಪಾಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಅದರ ಅಂಗವಾಗಿ ಧಾರವಾಡ ನಗರದಲ್ಲಿ ಮರಗಳು ಸುರಕ್ಷಿತವಾಗಿ ಬೆಳೆಯಲು ಟ್ರೀ ಗಾರ್ಡಗಳನ್ನು ನಿರ್ಮಿಸಿ ಗ್ರೀನ್ ಆರ್ಮಿ ತಂಡಕ್ಕೆ ಕೊಡುಗೆಯ್ನಾಗಿ ನೀಡಿದೆ ಎಂದು ತಿಳಿಸಿದರು. ಇನ್ನೂ ಕೆಲವೇ ದಿನಗಳಲ್ಲಿ ನೂರಾರು ಗಿಡಗಳು ಟ್ರೀಗಾರ್ಡಗಳ ಸಮೇತ ಹಚ್ಚುವ ಹಾಗೆ ಅರಣ್ಯ ಇಲಾಖೆ ಸಹಾಯದೊಂದಿಗೆ ಯೋಜನೆಯನ್ನು ಸಂಪೂರ್ಣಗೊಳಿಸಲಿದೆ. ಅದರೊಂದಿಗೆ ಸಮಾಜದ ಸ್ವಾಸ್ಥ್ಯ ಕಾಪಾಡಿ ಅಪೌಷ್ಟಿಕತೆಯ ಕೊರತ್ನೆ ನೀಗಿಸುವಂತಹ ಮಹತ್ತರ ಯೋಜನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಂಡಿದೆ ಎಂದು ಹೇಳಿದರು.
ಅಭಿನಂದನಾರ್ಹ: ವಲಯ ಅರಣ್ಯ ಅಧಿಕಾರಿ ಎ.ಎಫ್. ಹೊಸಮನಿ ಮಾತನಾಡಿ, ಗ್ರೀನ್ ಆರ್ಮಿ ತಂಡ ಪರಿಸರ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಅನೇಕ ಕಾರ್ಯಗಳು ಅಭಿನಂದನಾರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಸದಸ್ಯ ಶಿವು ಹಿರೇಮಠ ಮಾತನಾಡಿ, ತಮ್ಮ ವಾರ್ಡಿನಲ್ಲಿ ನೆಡುತ್ತಿರುವ ಈ ಸಸಿಗಳಿಗೆ ಧಕ್ಕೆಯಾಗದಂತೆ ಕಾಪಾಡುವ ಜವಾಬ್ದಾರಿಯನ್ನು ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಸಹಕಾರದೊಂದಿಗೆ ಯಶಸ್ವಿಯಾಗಿ ನಿಭಾಯಿಸುವುದಾಗಿ ತಿಳಿಸಿದರು. ಗ್ರೀನ್ ಆರ್ಮಿ ತಂಡದ ಅಧ್ಯಕ್ಷ ಪ್ರಕಾಶ ಗೌಡರ, ಅರುಣ ಅಂಗಡಿ, ಮಧು ಖಾನಾಪೂರ, ಜಯನಗರ ನಿವಾಸಿಗಳಾದ ಸಂಜೀವ ಹಿರೇಮಠ, ದತ್ತಾತ್ರೇಯ ಕುಲಕರ್ಣಿ, ರಾಕೇಶ ಗಾಯಕವಾಡ, ಪ್ರವೀಣಕುಮಾರ, ನಸೀರ ಮುಲ್ಲಾ, ಅರಣ್ಯ ಇಲಾಖೆ ಸಿಬ್ಬಂದಿ ಟಿ.ವಿ. ಧರೆಣ್ಣವರ, ಎ.ಎಫ್. ರಾಮದುರ್ಗ, ಬಾಬು ಕೊಳಕಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

