ಸ್ತ್ರೀಶಕ್ತಿ ಗುಂಪುಗಳಿಂದ ಕಸ ಸಂಗ್ರಹಣೆ: ಜಿಲ್ಲಾಧಿಕಾರಿ
ಕನ್ನಡಪ್ರಭ ವಾರ್ತೆ, ಗದಗ, ಜೂ. 12
ಗದಗ-ಬೆಟಗೇರಿ ಅವಳಿ ನಗರದ 14 ವಾರ್ಡ್ಗಳಲ್ಲಿ ಸ್ತ್ರೀಶಕ್ತಿ ಗುಂಪುಗಳ ಮೂಲಕ ಮನೆ ಮನೆಯ ಕಸ ಸಂಗ್ರಹಣೆಗೆ ಪ್ರಾಮುಖ್ಯ ನೀಡಲಾಗಿದ್ದು, ಮೂಲಭೂತ ಸಮರ್ಪಕ ಸೇವೆಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಟಿ. ಅಂಜನ್ಕುಮಾರ ಹೇಳಿದರು.
ಅವರು ಬುಧವಾರ ನಗರಸಭೆಯ ಆವರಣದಲ್ಲಿ ಸ್ತ್ರೀಶಕ್ತಿ ಗುಂಪುಗಳಿಗೆ ಕಸ ಸಂಗ್ರಹಣೆಗೆ ಬೇಕಾದ ತಳ್ಳುಗಾಡಿ ಹಾಗೂ ಇನ್ನಿತರ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಸದ್ಯ ನಗರಸಭೆಯಲ್ಲಿ 205 ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ನಗರದ 35 ವಿಭಾಗಗಳಿಗೆ ಸಮರ್ಪಕ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಕಾರಣ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಮೂಲಕ 54 ಸೇವೆಯಲ್ಲಿನ ಹೊರಗುತ್ತಿಗೆಯನ್ನು ಪಡೆದುಕೊಂಡು ಅವಳಿ ನಗರದ ಆಯ್ದ 14 ವಾರ್ಡ್ಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ತ್ಯಾಜ್ಯ ವಸ್ತುಗಳ ವಿಲೇವಾರಿ ಹಾಗೂ ಅವಳಿ ನಗರದಲ್ಲಿರುವ ದೊಡ್ಡ ನಾಲಾಗಳ ಸ್ವಚ್ಛ ಮತ್ತು ಹಂದಿಗಳ ನಿಯಂತ್ರಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ಈ ಕುರಿತು ಸದ್ಯದಲ್ಲಿಯೆ ಹಂದಿ ಸಾಕಾಣಿಕೆದಾರರೊಂದಿಗೆ ಚರ್ಚಿಸಿ ಅವರ ಸಹಯೋಗದೊಂದಿಗೆ ಹಂದಿಗಳ ನಿಯಂತ್ರಣ ಕಾರ್ಯ ಕೈಗೊಳ್ಳಲಾಗುವುದು.
ಮೂಲಭೂತ ಸೌಲಭ್ಯಗಳಾದ ಘನತ್ಯಾಜ್ಯ ವಸ್ತು ನಿರ್ವಹಣೆ, ಬೀದಿದೀಪ, ಚರಂಡಿಗಳ ಸ್ವಚ್ಛ ಹಾಗೂ ಸೊಳ್ಳೆ ನಿಯಂತ್ರಣ ಮತ್ತು ಕುಡಿವ ನೀರಿಗೆ ಆದ್ಯತೆಯ ಮೇರೆಗೆ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳ ತಂಡವನ್ನು ಚುರುಕುಗೊಳಿಸಲಾಗಿದ್ದು, ಈಗಾಗಲೇ ಪ್ರತಿ 12 ದಿನಗಳಿಗೊಮ್ಮೆ ನೀರು ಕೊಡುವ ವ್ಯವಸ್ಥೆ ಜಾರಿಯಾಗಿದ್ದು, ನೀರು ಪೂರೈಕೆಯಲ್ಲಿ ಸುಧಾರಣೆ ಕಂಡುಬಂದಿದೆ. ಜೂನ್ 14ರ ನಂತರ ಪ್ರತಿ 8 ದಿನಗಳಿಗೊಮ್ಮೆ ನೀರು ಕೊಡುವ ಕಾರ್ಯ ಜರುಗಲಿದೆ.
2ನೇ ಹಂತದ ಕುಡಿವ ನೀರಿನ ಯೋಜನೆಯ ಟೆಂಡರ್ನಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಟೆಂಡರ್ ಕಾರ್ಯ ಶೀಘ್ರದಲ್ಲಿ ಪ್ರಾರಂಭವಾಗಲಿದೆ.ಈ ಕಾರ್ಯದ ಪ್ರಗತಿಯಿಂದ ಪ್ರತಿದಿನ ನಗರಕ್ಕೆ 50 ಎಂ.ಎಲ್.ಡಿ. ನೀರು ಪೂರೈಕೆಯಾಗಲಿದ್ದು, 24್ಢ7 ನೀರು ಪೂರೈಕೆ ಸಾಧ್ಯವಾಗಲಿದೆ. ನಗರಸಭೆಯ ಆರ್ಥಿಕ ಸಂಪನ್ಮೂಲ ವೃದ್ಧಿಗೊಳಿಸಲು ಬೇಕಾದ ತುರ್ತುಕ್ರಮ ಕೈಗೊಂಡಿದ್ದು, ಸುಮಾರು 2 ಕೋಟಿ 90 ಲಕ್ಷ ರು. ಆಸ್ತಿಕರ ಬಾಕಿ ಉಳಿದಿರುವುದು. 3 ಕರ ವಸೂಲಿ ತಂಡಗಳನ್ನು ರಚಿಸಿದ್ದು, ಪ್ರತಿತಿಂಗಳು ರು. 50 ಲಕ್ಷ ವಸೂಲಿ ಗುರಿ ಹೊಂದಲಾಗಿದೆ. ಜಿಲ್ಲಾಡಳಿತದ ಈ ಕಾರ್ಯಕ್ಕೆ ನಗರದ ನಾಗರಿಕರು ಸಹಕರಿಸಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಇಸ್ಲಾವುದ್ದೀನ ಗದ್ಯಾಳ, ನಗರಸಭೆಯ ಪೌರಾಯುಕ್ತ ಎಂ.ಬಿ.ನಡುಮನಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎ.ಎಚ್.ದೊಡ್ಡಮನಿ ಸೇರಿದಂತೆ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ಮನಸೋಇಚ್ಛೆ ಕೆಲಸ ಬೇಡ
ಮೂಲಭೂತ ಸೌಲಭ್ಯ ಕಲ್ಪಿಸಲು ಅವಳಿ ನಗರದಲ್ಲಿ ಕೈಗೊಂಡ ಕಾರ್ಯಗಳ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ಬೇಕಾದ ಮಾಹಿತಿಯಿಲ್ಲದೇ ಪಾಲ್ಗೊಂಡಿದ್ದ ನಗರಸಭೆಯ ಸಿಬ್ಬಂದಿಯೋರ್ವರ ಮೇಲೆ ಜಿಲ್ಲಾಧಿಕಾರಿ ಅಂಜನ್ಕುಮಾರ ಹರಿಹಾಯ್ದ ಘಟನೆ ಜರುಗಿತು. ಸಮರ್ಪಕ ಮಾಹಿತಿ ಇಲ್ಲದೇ ಯಾಕ್ರೀ ಬಂದಿದ್ದೀರಾ.... ಮನಸೋ ಇಚ್ಛೆ ಕೆಲಸ ಮಾಡ್ಬೇಡಿ...ಕೆಲ್ಸ ಮಾಡ್ದೆ ಇದ್ದಲ್ಲಿ ಮನೆಗೆ ಕಳಿಸ್ತೀನಿ.. ಬೇಜವಾಬ್ದಾರಿಯ ವರ್ತನೆ ಸಹಿಸುವುದು ಬೇಡ ಎಂದು ಎಚ್ಚರಿಕೆ ನೀಡಿದ್ದು ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

