ಧಾರವಾಡ

ಕಂದಕಕ್ಕೆ ಬಿದ್ದ ಬಸ್: ಐವರ ಸಾವು

Published On :

ಧಾರವಾಡ: ಮುಂಬೈನಿಂದ ಚೆನ್ನೈಗೆ ಹೊರಟಿದ್ದ ನ್ಯಾಷನಲ್ ಟೂರಿಸ್ಟ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಶುಕ್ರವಾರ ನಸುಕಿನ ವೇಳೆ ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದು, ಒಬ್ಬ ಮಹಿಳೆ ಸೇರಿದಂತೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 28 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಇಲ್ಲಿಗೆ ಸಮೀಪದ ಬೈಪಾಸ್ ರಸ್ತೆಯ ಇಟಿಗಟ್ಟಿ ಕ್ರಾಸ್ ಬಳಿ ಶುಕ್ರವಾರ 5.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಹರ್ಯಾಣದ ವಿಜಯಬಹಾದ್ದೂರ ದೇವನಾರಾಯಣ ಮೌರ್ಯ (50) ಹಾಗೂ ಅವರ ಪತ್ನಿ ಮೀನಾಬಾಯಿ(45), ಉತ್ತರ ಪ್ರದೇಶದ ಮನೋರಂಜನ ನಂದಾ (35), ಆಂಧ್ರಪ್ರದೇಶದ ಗೋಪಿನಾಥ ಮೂಫಾ (40) ಮೃತಪಟ್ಟಿದ್ದು, ಮತ್ತೊಬ್ಬರ ಹೆಸರು-ವಿಳಾಸ ತಿಳಿದು ಬಂದಿಲ್ಲ. ಗಾಯಗೊಂಡ ಪ್ರಯಾಣಿಕರು ಹುಬ್ಬಳ್ಳಿ ಕಿಮ್ಸ್ ಹಾಗೂ ಧಾರವಾಡದ ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ವಾಹನವೊಂದನ್ನು ದಾಟಿ ಮುಂದೆ ಹೋಗುವ ರಭಸದಲ್ಲಿ ಈ ಘಟನೆ ನಡೆದಿದ್ದು, ಬಸ್ಸಿನ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣವೆಂದು ಊಹಿಸಲಾಗಿದೆ.

ಚಾಲಕನಿಗೆ ನಿದ್ದೆ ಮಂಪರು: ಸುಮಾರು 20ರಿಂದ 30 ಅಡಿ ಮೇಲಿಂದ ಕೆಳಗೆ ಬಸ್ಸು ಉರುಳಿ ಬಿದ್ದಿದ್ದರಿಂದ ಪೂರ್ತಿ ನಜ್ಜುಗುಜ್ಜಾಗಿದೆ. ನಿದ್ದೆಯ ಮಂಪರಿನಲ್ಲಿದ್ದ ಪ್ರಯಾಣಿಕರು ತಮಗೆ ಏನಾಗಿದೆ ಎಂದು ಗೊತ್ತಾಗುವ ಮುಂಚೆಯೇ ಅವಘಡ ಸಂಭವಿಸಿತ್ತು. ಬಸ್ಸಿನ ಸೀಟುಗಳ ಬುಡಕ್ಕೆ ಸಿಲುಕಿದ್ದ ಕೆಲವು ಪ್ರಯಾಣಿಕರನ್ನು ನಮ್ಮನ್ನು ಬದುಕಿಸಿ ಎಂದು ಕೂಗುತ್ತಿದ್ದರು. ಪ್ರಪಾತದಿಂದ ಬಸ್ಸು ಉರುಳಿ ಬಿದ್ದರೂ ಅಚ್ಚರಿ ಎನ್ನುವಂತೆ ಬಸ್ಸಿನಲ್ಲಿದ್ದ ಮೂರು ಮಕ್ಕಳು ಮಾತ್ರ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಚಾಲಕ ಹಾಗೂ ಕ್ಲೀನರ್ ಇಬ್ಬರು ಪರಾರಿಯಾಗಿದ್ದಾರೆ. ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಡಿವೈಎಸ್ಪಿ ರಾಜು ಬನಹಟ್ಟಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.