'ನಂದನದ ನೋಟ ಸಾಧನಕೇರಿ' ಬಿಡುಗಡೆ
ಧಾರವಾಡ: ಇಲ್ಲಿನ ಸಾಹಿತ್ಯಿಕ ಸಂಘಟನೆಯಾದ ಅನ್ವೇಷಣ ಕೂಟವು ಇತ್ತೀಚೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬೆಂಗಳೂರಿನ ಡಾ. ವಸಂತ ಕುಲಕರ್ಣಿ ಅವರ ನಂದನದ ನೋಟ-ಸಾಧನಕೇರಿ ಮತ್ತು ವೈದ್ಯ ಶಾಸ್ತ್ರದ ಮೇಲಿನ ನಿಮ್ಮ ದೇಹಾರೋಗ್ಯ-ನಮ್ಮ ಪರಿಹಾರೋಪಾಯಗಳು ಎಂಬ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಶ್ರೀನಿವಾಸ ವಾಡಪ್ಪಿ ನಂದನದ ನೋಟ-ಸಾಧನಕೇರಿ ಕೃತಿಯನ್ನು ಮತ್ತು ಅತಿಥಿ ಡಾ. ಆನಂದ ಪಾಂಡುರಂಗಿ ನಿಮ್ಮ ದೇಹಾರೋಗ್ಯ-ನಮ್ಮ ಪರಿಹಾರೋಪಾಯಗಳು ಕೃತಿ ಪರಿಚಯಿಸಿದರು. ಕೃತಿಕಾರ ವಸಂತ ಕುಲಕರ್ಣಿ ಮಾತನಾಡಿದರು. ಡಾ. ಸಿ.ವಿ.ವೇಣುಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ಯಾಮಸುಂದರ ಬಿದರಕುಂದಿ, ಪ್ರೊ. ದುಷ್ಯಂತ ನಾಡಗೌಡ, ಪ್ರೊ. ಪಿ.ಆರ್. ಜೋಶಿ, ಮೋಹನ ನಾಗಮ್ಮನವರ, ಪ್ರೊ.ಅರ್.ಬಿ. ಚಿಲುಮಿ, ನಿಂಗಣ್ಣ ಕುಂಟಿ, ರಾಮಚಂದ್ರ ಧೋಂಗಡೆ, ಎ.ಜಿ. ಸಬರದ, ಎಸ್.ಆರ್. ಭಟ್ಕಳ, ಜಿ.ಬಿ. ಹೊಂಬಳ, ವಸಂತವಾಯಿ, ಪ್ರೊ. ದೀಪಕ್ ಆಲೂರ, ಸತೀಶ ಪೊಲೀಸ್ಗೌಡರ, ಹ.ವೆಂ. ಕಾಖಂಡಿಕಿ, ಮುರುಳಿ ಕುಲಕರ್ಣಿ, ಸುರಭಿ ಕುಲಕರ್ಣಿ, ನರಸಿಂಹ ಪರಾಂಜಪೆ, ಎಸ್.ಎಂ. ದೇಶಪಾಂಡೆ ಮುಂತಾದವರು ಇದ್ದರು.
ಪಿಯುಸಿ ಪೂರಕ ಪರೀಕ್ಷೆ ಪ್ರವೇಶ ಪತ್ರ ಪಡೆಯಿರಿ: ಡಿಡಿಪಿಐ
ಧಾರವಾಡ: ಜುಲೈ 3ರಂದು ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಸಂಬಂಧಿತ ಕಾಲೇಜುಗಳ ಪ್ರಾಚಾರ್ಯರು ತಕ್ಷಣವೇ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ತೆಗೆದುಕೊಂಡು ಹೋಗಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರವೀಂದ್ರ ರಿತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

