ಧಾರವಾಡ

ಕೀರ್ತಿ, ಹಣಕ್ಕೆ ಬಳಕೆಯಾಗುತ್ತಿರುವ ಸಂಗೀತ: ಕವಿ ನಿಸ್ಸಾರ್ ಅಹಮ್ಮದ್ ವಿಷಾದ

Published On :

ಧಾರವಾಡ: ಸುಗಮ ಸಂಗೀತಕ್ಕೆ ತನ್ನದೇ ಆದ ಗಾಂಭಿರ್ಯತೆ, ಪಾವಿತ್ರ್ಯ ಇದೆ. ಇಷ್ಟು ದಿನ ಆತ್ಮಸಂತೋಷಕ್ಕೆ ಬಳಕೆಯಾಗುತ್ತಿದ್ದ ಸಂಗೀತ, ಪ್ರಸ್ತುತ ಕೀರ್ತಿ ಹಾಗೂ ಹಣಕ್ಕಾಗಿ ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದು ಹಿರಿಯ ಕವಿ ಕೆ.ಎಸ್. ನಿಸ್ಸಾರ್ ಅಹಮ್ಮದ್ ಹೇಳಿದರು.
ಇತ್ತೀಚಿನ ಗಾಯಕರಲ್ಲಿ ಸೃಜನಶೀಲತೆ ಮರೆಯಾಗುತ್ತಿದ್ದು, ಇದರಿಂದ ಸುಗಮ ಸಂಗೀತ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಎಲ್ಲಿ ನೋಡಿದರೂ ಸಂಗೀತದ ಏಕತಾನತೆ ಎದ್ದು ಕಾಣುತ್ತಿದೆ. ಸುಗಮ ಸಂಗೀತವನ್ನು ಇಂದು ಕೇಳಿ, ನಾಳೆ ಮರೆಯುವ ಪ್ರವೃತ್ತಿ ಹುಟ್ಟಿದೆ. ಸುಗಮ ಸಂಗೀತವನ್ನು ವೈಚಾರಿಕತೆಯ ನೆಲಗಟ್ಟಿನ ಮೇಲೆ ನಿಲ್ಲಿಸಬೇಕಾಗಿದೆ ಎಂದರು. ಸುಗಮ ಸಂಗೀತ ಪರಿಷತ್ತು ನಗರದ ಸೃಜನಾ ರಂಗ ಮಂದಿರದಲ್ಲಿ ಏರ್ಪಡಿಸಿರುವ ಎರಡು ದಿನಗಳ ರಾಜ್ಯಮಟ್ಟದ 10ನೇ ಸುಗಮ ಸಂಗೀತ ಸಮ್ಮೇಳನ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಿರುತೆರೆ ಚಲನಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಮ್, ಸಂಗೀತ ಪರಂಪರೆಯ ಮುಂದುವರಿಕೆಗೆ ಇಂದಿನ ವಿನೂತನ ಸಿನಿಮಾ ಹಾಡುಗಳು ಅಡ್ಡಗಾಲು ಹಾಕುತ್ತಿವೆ ಎಂದರು. ಹಿರಿಯ ಗಾಯಕಿ ಅನುರಾಧಾ ಧಾರೇಶ್ವರ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಸುಗಮ ಸಂಗೀತ ಪರಿಷತ್‌ನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ ಮಾತನಾಡಿದರು. 'ಗೀತಸಂಗಮ' ಸಂಗೀತ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.