ಸೋಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ 108 ನೃತ್ಯಗಳ ನೃತ್ಯ ಬಿಲ್ವಾರ್ಚನೆ
ಕನ್ನಡಪ್ರಭ ವಾರ್ತೆ ಧಾರವಾಡ ಮಾ.8-
ಐತಿಹಾಸಿಕ ಹಿನ್ನೆಲೆಯುಳ್ಳ ಇಲ್ಲಿನ ಸೋಮೇಶ್ವರ ದೇವಸ್ಥಾನದಲ್ಲಿ ಮಾ.10 ರಂದು ಮಹಾಶಿವರಾತ್ರಿ ನಿಮಿತ್ತ ಇಬ್ಬರು ವಿದ್ಯಾರ್ಥಿನಿಯರು ಭರತನಾಟ್ಯದ ಮೂಲಕ 108 ನೃತ್ಯಗಳನ್ನು ನೃತ್ಯ ಬಿಲ್ವಾರ್ಚನೆ ರೂಪದಲ್ಲಿ ಪ್ರದರ್ಶಿಸುವ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.
ಪಿಯುಸಿ ದ್ವಿತೀಯ ವರ್ಷದಲ್ಲಿ ಓದುತ್ತಿರುವ ಇಲ್ಲಿನ ಆರ್.ಎಂ. ಸಮತಾ ಹಾಗೂ 9ನೇ ತರಗತಿಯಲ್ಲಿನ ಸೃಷ್ಟಿ ಕುಲಕರ್ಣಿ, ವಿದೂಷಿ ನಾಗರತ್ನ ಹಡಗಲಿ ಮಾರ್ಗದರ್ಶನದಲ್ಲಿ ಈ ಸಾಧನೆಗೆ ಸಿದ್ಧವಾಗಿದ್ದು, ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿಶೇಷ ಸಮಾರಂಭ ಕುರಿತು ಮಾಹಿತಿ ನೀಡಿದರು.
ಬೆಳಗ್ಗೆ 7ರಿಂದ ರಾತ್ರಿ 11ರ ವರೆಗಿನ ಅವಧಿಯಲ್ಲಿ 3 ಹಂತದಲ್ಲಿ (ಬೆಳಗ್ಗೆ 7ರಿಂದ 12, ಮಧ್ಯಾಹ್ನ 3ರಿಂದ 7, ಸಂಜೆ 7.30ರಿಂದ 11ರ ವರೆಗೆ) ನೃತ್ಯ ಬಿಲ್ವಾರ್ಚನೆ ನಡೆಯಲಿದ್ದು, ಮೊದಲಿನ ಐದು ಗಂಟೆಗಳ ಅವಧಿಯಲ್ಲಿ 48 ನೃತ್ಯಗಳು ನಂತರದ 60 ನೃತ್ಯಗಳನ್ನು ಎರಡು ಹಂತದಲ್ಲಿ ಈ ಇಬ್ಬರು ಕಲಾವಿದರು ಪ್ರದರ್ಶಿಸಲಿದ್ದಾರೆಂದು ನೃತ್ಯಗುರು ನಾಗರತ್ನ ಹಡಗಲಿ ತಿಳಿಸಿದರು.
ಸ್ತೋತ್ರ, ವಚನಗಳು, ದಾಸರ ಪದಗಳು ಸೇರಿದಂತೆ ಶಿವನ ತಾಂಡವ ನೃತ್ಯ, ಕೃಷ್ಣ ದೇವರ ಸ್ಮರಣೆ ಹೀಗೆ 108 ನೃತ್ಯ ಪ್ರದರ್ಶಿಸಲಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

