ಪತ್ನಿ ಪೀಡಕ ಯೋಗಗುರುವಿನ ಬಂಧನ
ಹುಬ್ಬಳ್ಳಿ: ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ನಗರದ ಯೋಗಗುರುವೊಬ್ಬನನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಮಂಜುನಾಥ ನಗರದ ಚೇತನಾ ಕಾಲನಿ ನಿವಾಸಿ, ಬೈಲಪ್ಪನವರ ನಗರದ ಧನ್ವಂತರಿ ಯೋಗ ಹಾಗೂ ಮಸಾಜ್ ಕೇಂದ್ರದ ಮಾಲೀಕ ಗಿರೀಶ ನಾರಾಯಣ ಕಬಾಡೆ ಎಂಬುವನೇ ಬಂಧಿತ. ಗಿರೀಶ ಕಬಾಡೆಯ ಪತ್ನಿ ಮೇಘಾ (ಆದಿತಿ) 22-02-2013ರಂದು ನೀಡಿದ ದೂರಿನ ಮೇರೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ನೀಲಮ್ಮ ಚಲವಾದಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
22-12-2011ರಂದು ಗಿರೀಶನೊಂದಿಗೆ ವಿವಾಹವಾಗಿದ್ದ ಮೇಫಾ, ಒಂದು ವರ್ಷಕ್ಕೂ ಹೆಚ್ಚು ಸಂಸಾರ ನಡೆಸಿದ್ದರು. ಪತಿಯ ವಿಕೃತ ಹೆಚ್ಚಾಗುತ್ತಲೇ ಸಾಗಿದ್ದರೂ ಸಹಿಸಿಕೊಂಡಿದ್ದಳು. ಕೆಲ ತಿಂಗಳುಗಳಿಂದ ಪಾನಮತ್ತನಾಗಿ ಆಗಮಿಸುತ್ತಿದ್ದ ಗಿರೀಶ ಪತ್ನಿಯನ್ನೂ ಸಾರಾಯಿ ಸೇವಿಸುವಂತೆ ಪೀಡಿಸುತ್ತಿದ್ದ ಎಂದು ಠಾಣೆಯಲ್ಲಿ ನೀಡಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ಚಲವಾದಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಗಿರೀಶ, ಜಿಲ್ಲಾ ಸತ್ರ ನ್ಯಾಯಾಲಯದಿಂದ ಜಾಮೀನು ಪಡೆಯಲು ಯತ್ನಿಸಿದ್ದಾನಾದರೂ ಸಫಲನಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

