ಧಾರವಾಡ

ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವದಲ್ಲಿ ಸಚಿವ ಎಸ್. ಸುರೇಶಕುಮಾರ್

Published On :

ಹುಬ್ಬಳ್ಳಿ: ಸಂಸತ್ತಿನಲ್ಲಿ ಮಂಡನೆಯಾದ ಅತ್ಯಾಚಾರ ನಿಗ್ರಹ ಮಸೂದೆ ಸಮಾಜದ ಇಂದಿನ ನೈತಿಕ ಅಧಃಪತನಕ್ಕೆ ಹಿಡಿದ ಕನ್ನಡಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ, ನಗರಾಭಿವೃದ್ಧಿ ಸಚಿವ ಎಸ್. ಸುರೇಶಕುಮಾರ್ ಹೇಳಿದರು.
ಬುಧವಾರ, ರಾಜ್ಯ ಕಾನೂನು ವಿವಿಯ ಪರೀಕ್ಷಾ ವಿಭಾಗದ ಕಟ್ಟಡ ಉದ್ಘಾಟನೆ ಮತ್ತು ಸ್ವಾಮಿ ವಿವೇಕಾನಂದ ಅವರ 150ನೇ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ವೇಳೆ ಸಮಾಜದ ನೈತಿಕ ಮೌಲ್ಯಗಳು ಉನ್ನತವಾಗಿದ್ದರೆ ಇಂತಹ ಮಸೂದೆ ಅಂಗಿಕರಿಸುವ ಅಥವಾ ಜಾರಿಗೊಳಿಸುವ ಅಗತ್ಯವೇ ಸರ್ಕಾರಕ್ಕೆ ಇರುತ್ತಿರಲಿಲ್ಲ. ಸಮಾಜ ಇಂದು ಭೋಗದ ಬೆನ್ನತ್ತಿದೆ. ನೈತಿಕವಾಗಿ ಸಮಾಜ ಅಧಃಪತನಗೊಂಡ ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಅವರಂತಹ ಧೀಮಂತ ಸನ್ಯಾಸಿ ಬೇಕು ಎನ್ನುವ ಭಾವ ಎಲ್ಲೆಡೆ ಮೂಡುತ್ತಿದೆ. ಆದರೆ, ದುರ್ದೈವಶಾತ್ ಸ್ವಾಮಿ ವಿವೇಕಾನಂದರ ತತ್ವ, ಆದರ್ಶ ಪಾಲಿಸುವ ಬದಲು ಅವರನ್ನು ದೈವತ್ವಕ್ಕೆ ಏರಿಸಿ ಅವರ ತತ್ವ, ಆದರ್ಶಗಳು ದೇವರು ಮಾತ್ರ ಪಾಲಿಸುವಂತಹವು ಮನುಷ್ಯನಾದವನು ಪಾಲಿಸಲಿಕ್ಕಲ್ಲ ಎಂಬ ಮನೋಭಾವನೆ ಮೂಡಿಸಿಕೊಂಡಿದ್ದೇವೆ. ಸ್ವಾಮಿ ವಿವೇಕಾನಂದರಂತಹ ವ್ಯಕ್ತಿಗಳ ಬರುವಿಕೆಗೆ ನಾವು ಕಾಯದೇ ಅವರಿಂದ ಕಲಿಯಬೇಕಾದುದು ಏನು ಎಂದು ತಿಳಿದುಕೊಂಡು ಆ ಮಾರ್ಗದಲ್ಲಿ ಸಾಗಿದರೆ ನಿಶ್ಚಿತವಾಗಿ ಸಮಾಜದ ನೈತಿಕ ಮಟ್ಟ ಎತ್ತರಕ್ಕೆ ಏರಲು ಸಾಧ್ಯ ಎಂದರು.  ಉಪನ್ಯಾಸ ನೀಡಿದ ಬೆಳಗಾವಿ ರಾಮಕೃಷ್ಣಾಶ್ರಮದ ಯುಕ್ತಾನಂದ ಸ್ವಾಮೀಜಿ, ಸತ್ಯಕ್ಕೆ, ಸತ್ಯದ ಆದರ್ಶಗಳಿಗೆ ತಲೆ ಭಾಗದ ಸಮಾಜ ನಾಶವಾಗುತ್ತದೆ ಮತ್ತು ಅಂತಹ ಸಮಾಜ ನಾಶವಾಗುವುದು ವಿಹಿತವಾದುದ್ದು. ಸತ್ಯದ ಆದರ್ಶ ಮತ್ತು ತತ್ವಗಳು ಭೂತ, ಭವಿಷ್ಯ ಮತ್ತು ವರ್ತಮಾನದಲ್ಲಿ ಒಂದೇ ಮಟ್ಟದಲ್ಲಿದ್ದು ಆ ಮಟ್ಟವನ್ನು ಸಮಾಜ ಮುಟ್ಟುವಂತಾಗಬೇಕು. ಒಂದು ವೇಳೆ ಆ ಸತ್ಯದ ತತ್ವಾದರ್ಶ ತಲುಪಲಿಕ್ಕಾಗದ ಸಮಾಜದಲ್ಲಿ ಅನ್ಯಾಯ, ಅನೀತಿಗಳು ಮನೆ ಮಾಡುವುದು ಸಾಮಾನ್ಯ. ಅತ್ಯುನ್ನತ ಆದರ್ಶಗಳು ಮನೆ ಮಾಡಿರುವ ಸಮಾಜದಲ್ಲಿ ಸದಾಕಾಲ ಶಾಂತಿ, ಸೌಹಾರ್ದತೆ ನೆಲೆಸಿರಲು ಸಾಧ್ಯ ಎಂದರು. ಸ್ವಾಮಿ ವಿವೇಕಾನಂದ ಅವರು ಎಲ್ಲಿಯವರೆಗೆ ಸಮಾಜದ ಕೆಳಸ್ತರದಲ್ಲಿ ರಾಜಕೀಯ ಪ್ರಜ್ಞೆ ಮೂಡುವುದಿಲ್ಲವೋ ಅಲ್ಲಿಯವರೆಗೆ ಪ್ರಜಾಪ್ರಭುತ್ವ ಎನ್ನುವ ಸಿದ್ಧಾಂತ ಭ್ರಮೆ. ಸಮಾಜದ ಕಟ್ಟಕಡೆಯ ವ್ಯಕ್ತಿಯಲ್ಲೂ ರಾಜಕೀಯ ಪ್ರಜ್ಞೆ ಮೂಡಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯ ಎಂದರು.
ರಾಜ್ಯ ಕಾನೂನು ವಿವಿ ಕುಲಪತಿ ಟಿ.ಆರ್. ಸುಬ್ರಮಣ್ಯ ಪ್ರಾಸ್ತಾವಿಕ ಮಾತನಾಡಿದರು. ಕುಲಸಚಿವ ಸುಭಾಷ ಮಾಳಖೇಡ ಸ್ವಾಗತಿಸಿದರು. ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಿ.ಎಸ್. ರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.