ಧಾರವಾಡ

ವ್ಯಾಜ್ಯ ಪರಿಹಾರ ಕೇಂದ್ರದ ಮೂಲಕ ಬಾಕಿ ಪ್ರಕರಣ ಇತ್ಯರ್ಥಗೊಳಿಸಿ: ನ್ಯಾ. ಕೆ. ಶ್ರೀಧರರಾವ್

Published On :

ಧಾರವಾಡ: ಸಾರ್ವಜನಿಕ ಉಪಯುಕ್ತ ಸೇವೆಗೆ ಸಂಬಂಧಿಸಿನ್ಯಾಯಾಲಯದಲ್ಲಿ ದಾಖಲಾದ ವಿವಾದಗಳನ್ನು ತ್ವರಿತ ಇತ್ಯರ್ಥಪಡಿಸಲು ನ್ಯಾಯವಾದಿಗಳು ಪರ್ಯಾಯ ವ್ಯಾಜ್ಯ ಪರಿಹಾರ ಕೇಂದ್ರದ ಮೂಲಕ ಕಕ್ಷಿದಾರರಿಗೆ ನ್ಯಾಯ ಕೊಡಿಸಿ ಎಂದು ನ್ಯಾ. ಕೆ. ಶ್ರೀಧರರಾವ್ ಹೇಳಿದರು.
ಇಲ್ಲಿನ ಸಿವಿಲ್ ನ್ಯಾಯಾಲಯ ಸಂಕೀರ್ಣದಲ್ಲಿ ಮಂಗಳವಾರ ರು. 2.30 ಕೋಟಿಯಲ್ಲಿ ನಿರ್ಮಿಸಿದ ಪರ್ಯಾಯ ವ್ಯಾಜ್ಯ ವಿಲೇವಾರಿ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಟ್ಟಡ ಉದ್ಘಾಟಿಸಿದ ಅವರು, ಆರ್ಥಿಕವಾಗಿ ಸಂಕಷ್ಟದಲ್ಲಿರುವ, ಶೋಷಿತರಿಗೆ ನ್ಯಾಯದಾನಕ್ಕಾಗಿ ಪ್ರಾಧಿಕಾರವು ಕಾನೂನು ಅರಿವು ಸಲಹೆ ಹಾಗೂ ನ್ಯಾಯ ದೊರಕಿಸುವ ಕೆಲಸಗಳನ್ನು ವ್ಯಾಪಕವಾಗಿ ಕೈಗೊಳ್ಳಲಾಗುತ್ತಿದೆ. ಈ ಉದ್ದೇಶಕ್ಕಾಗಿ ಲೋಕ ಅದಾಲತ್, ಮಧ್ಯಸ್ಥಿಕೆ ಕೇಂದ್ರ, ರಾಜಿ ಸಂಧಾನ, ಪರ್ಯಾಯ ವ್ಯಾಜ್ಯ ಪರಿಹಾರ ಕೇಂದ್ರಗಳಲ್ಲಿ ಪ್ಯಾರಾ ಲೀಗಲ್ ವಾಲಂಟಿಯರ್ ಹಾಗೂ ಪ್ರೌಢಶಾಲೆಗಳಲ್ಲಿ ಕಾನೂನು ಸಾಕ್ಷರತಾ ಕೂಟಗಳ ಮೂಲಕ ನ್ಯಾಯ ದೊರಕಿಸಲು ಯತ್ನಿಸಲಾಗುತ್ತಿದೆ. ಪ್ರತಿಜಿಲ್ಲೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲು ಹಿರಿಯ ಶ್ರೇಣಿ 30 ಸಿವಿಲ್ ನ್ಯಾಯಾಧೀಶರನ್ನು ನೇಮಿಸಲು ಸರ್ಕಾರ ಮಂಜೂರಾತಿ ನೀಡಿದೆ ಎಂದರು.
ನ್ಯಾ. ಮೋಹನ ಶಾಂತನಗೌಡರ ಅಧ್ಯಕ್ಷತೆ ವಹಿಸಿದ್ದರು. ಡಿಸಿ ಸಮೀರ್ ಶುಕ್ಲ, ವಿಶ್ವನಾಥ ಅಂಗಡಿ, ವಿ.ಡಿ. ಕಾಮರೆಡ್ಡಿ, ವೆಂಕಟೇಶ ಕುಲಕರ್ಣಿ, ಬಿ.ಎಸ್. ಸಂಗಟಿ, ಪ್ರಫುಲ್ಲಾ ನಾಯಕ, ಆನಂದಕುಮಾರ ಮಗದುಮ್ಮ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.