16ರಂದು ರಾಜ್ಯಮಟ್ಟದ ಚಿಂತನಾ ಸಮಾವೇಶ
ಧಾರವಾಡ: ಇಲ್ಲಿನ ಚಿಲಿಪಿಲಿ ಗುಬ್ಬಚ್ಚಿಗೂಡು ಬಳಗವು ಮಕ್ಕಳ ಸಾಹಿತ್ಯ-ಮರು ಚಿಂತನ ಎಂಬ ವಿಷಯ ಕುರಿತು ವಿದ್ಯಾವರ್ದಕ ಸಂಘದ ಸಭಾಭವನದಲ್ಲಿ ಮೇ 16 ರಂದು ರಾಜ್ಯಮಟ್ಟದ ಚಿಂತನಾ ಸಮಾವೇಶ ಹಮ್ಮಿಕೊಂಡಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿದ್ಯಾವರ್ದಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ, ಪ್ರಸ್ತುತ ಪ್ರಾಥಮಿಕ ಶಿಕ್ಷಣ ಪುಸ್ತಕಗಳನ್ನು ಬರೆಯಲು ನಮ್ಮ ಹಿರಿಯ ಸಾಹಿತಿಗಳು ಹಾಗೂ ಯುವ ಬರಹಗಾರರು ಹಿಂದೆ ಸರಿಯುತ್ತಿದ್ದಾರೆ. ಪ್ರಾಥಮಿಕ ಮಕ್ಕಳ ಬಗೆಗೆ ಗಂಭೀರ ಚಿಂತನೆ ನಡೆಯುತ್ತಿಲ್ಲ. ಉಳಿದೆಲ್ಲ ರಾಜ್ಯಗಳಲ್ಲಿ ಮಕ್ಕಳ ಕುರಿತಾದ ಅನೇಕ ಚಿಂತನಾ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ರಾಜ್ಯದಲ್ಲಿ ಮಾತ್ರ ಮಕ್ಕಳ ಬಗೆಗಿನ ಚಿಂತನೆಗಳು ನಡೆಯುತ್ತಿಲ್ಲ. ಹೀಗಾಗಿ ಮಕ್ಕಳು ಅಂಕಗಳ ಕಡೆ ತಮ್ಮನ್ನು ಕೇಂದ್ರಿಕರಿಸುತ್ತಾರೆ ಎಂದು ತಿಳಿಸಿದರು. ಹಿರಿಯ ಸಾಹಿತಿಗಳು ಹಾಗೂ ಯುವ ಬರಹಗಾರರೂ ಪ್ರಾಥಮಿಕ ಶಿಕ್ಷಣಕ್ಕೆ ಸಾಹಿತ್ಯ ರಚನೆ ಮಾಡಿದರೆ, ಎಲ್ಲಿ ನಾವು ಚಿಕ್ಕವರಾಗಿ ಬಿಡುತ್ತೇವೆ ಎಂಬ ಮನೋಭಾವನೆಯಿಂದ ಮಕ್ಕಳ ಸಾಹಿತ್ಯ ರಚನೆಗೆ ಮುಂದಾಗುತ್ತಿಲ್ಲ. ಇದರಿಂದಾಗಿ ಜಾಗತೀಕರಣದ ಪ್ರಭಾವ ಮಕ್ಕಳ ಮೇಲೆ ಬೀರುತ್ತಿದೆ. ಅದರಿಂದ ಹೊರಬರಲು ಮಕ್ಕಳಲ್ಲಿ ಚಿಂತನಾ ಕಾರ್ಯಕ್ಕೆ ಚಾಲನೆ ದೊರೆಯಬೇಕಿದೆ. ಮಕ್ಕಳು ಪಠ್ಯಕ್ಕೆ ಮಾತ್ರ ಸೀಮಿತವಲ್ಲ ಎಂಬುದನ್ನು ಎತ್ತಿ ತೋರಬೇಕಿದೆ. ಅಲ್ಲದೇ ಮಕ್ಕಳ ಸಾಹಿತ್ಯ ರಚನೆಗೆ ಹಾಗೂ ಮಕ್ಕಳ ಸಾಹಿತಿಗೆ ಇದುವರೆಗೆ ಯಾವುದೇ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗ ಲಭಿಸಿಲ್ಲ ಎಂಬುವುದು ವಿಷಾದನೀಯ ಎಂದರು. ಮೇ 16 ರಂದು ನಡೆಯುವ ಈ ರಾಜ್ಯಮಟ್ಟದ ಚಿಂತನಾ ಸಮಾವೇಶಕ್ಕೆ ಕವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ ಚಾಲನೆ ನೀಡಲಿದ್ದಾರೆ. ಸಾಗರದ ಡಾ. ನಾ ಡಿಸೋಜ ಆಶಯ ಮಾತುಗಳನ್ನಾಡಲಿದ್ದು, ನಿಲಯ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ಸಮಾವೇಶದಲ್ಲಿ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ - ಬಿರುಕು ಮತ್ತು ಬಿಕ್ಕಟ್ಟುಗಳು, ಸಮಕಾಲಿನ ಮಕ್ಕಳ ಸಾಹಿತ್ಯ ಒಂದು ಪಕ್ಷಿ ನೋಟ ಹಾಗೂ ಮಕ್ಕಳ ಸಾಹಿತ್ಯ ಹೊಸ ಸಾಧ್ಯತೆಗಳು ಎಂಬ ವಿಷಯಗಳ ಬಗ್ಗೆ ಚಿಂತನೆ ನಡೆಸಲಾಗುವುದು. ಮೇ 14 ರೊಳಗಾಗಿ ಆಸಕ್ತರು ಹೆಸರನ್ನು ನೋಂದಾಯಿಬೇಕು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

