60 ದಿನದೊಳಗೆ ವಿಶನ್ ಡಾಕ್ಯುಮೆಂಟ್
ಧಾರವಾಡ: ಗೆಲವು ಸಾಧಿಸುವ ಮುಂಚೆ ಮತದಾರರಿಗೆ ಕೊಟ್ಟ ಎಲ್ಲ ಭರವಸೆ ಈಡೇರಿಸುವುದೇ ನನ್ನ ಮೊದಲ ಗುರಿ. ತಂದೆ ಚಂದ್ರಕಾಂತ ಬೆಲ್ಲದ ಅವರಂತೆ ಸಜ್ಜನ ರಾಜಕಾರಣಿ ಎನಿಸಿಕೊಳ್ಳುತ್ತೇನೆ.
ಹೀಗೆಂದವರು ಮೊದಲ ಬಾರಿಗೆ ಶಾಸಕರಾದ ಅರವಿಂದ ಬೆಲ್ಲದ.
ತಮ್ಮ ಗೆಲವಿನ ಅನೇಕ ಅಂಶಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡ ಅವರು, ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರಿಂದ ಹಿಡಿದು ಮುಖಂಡರ ವರೆಗೂ 30 ದಿನಗಳಿಂದ ಬಿಟ್ಟು ಬಿಡದೆ ಒಗ್ಗಟ್ಟಾಗಿ ಕೆಲಸ ಮಾಡಿದ ಪರಿಣಾಮ ನನಗೆ ಗೆಲವು ದೊರೆತಿದೆ. ತಂದೆಯವರ ಆಶೀರ್ವಾದ ಹಾಗೂ ಅವರು ಈ ಹಿಂದೆ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಸಹ ನನ್ನ ಗೆಲವಿಗೆ ಶ್ರೀರಕ್ಷೆಯಾಗಿವೆ. 60 ದಿನದೊಳಗೆ ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಮಾಡಬೇಕು ಎಂಬುದರ ಕುರಿತು ರಾಜಕೀಯ, ಸಾಹಿತ್ಯ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರ ಅಭಿಪ್ರಾಯ, ಸಲಹೆ ಪಡೆದು ವಿಶನ್ ಡಾಕ್ಯುಮೆಂಟ್ ಸಿದ್ಧಪಡಿಸಿ ಅಂತೆಯೇ ನಡೆದುಕೊಳ್ಳುತ್ತೇನೆ ಎಂದರು ಅರವಿಂದ. ಈ ಮೊದಲು ಸ್ಲಂಗಳು ಕಾಂಗ್ರೆಸ್ಸಿನ ವೋಟ್ ಬ್ಯಾಂಕ್‌ಗಳಾಗಿದ್ದವು. ಆದರೀಗ ಸ್ಲಂ ಸೇರಿದಂತೆ ಕ್ಷೇತ್ರದ ಜನತೆ ರಾಜಕೀಯ ಹಿತದೃಷ್ಠಿಯಿಂದ ಯುವಕರನ್ನು ಬೆಂಬಲಿಸುತ್ತಿದ್ದು, ತಮ್ಮ ಗೆಲವೇ ಇದಕ್ಕೆ ಒಳ್ಳೆಯ ಉದಾಹರಣೆ. ಸಾಕಷ್ಟು ಸ್ಲಂ ಪ್ರದೇಶಗಳು ಸೇರಿದಂತೆ ವಿವಿಧೆಡೆ ತಾವು ಪ್ರಚಾರಕ್ಕೆ ಬರುವುದು ಬೇಡ ನಾವು ನಿಮಗೆ ಮತ ನೀಡುತ್ತೇವೆಂದು ಭರವಸೆ ನೀಡಿದ್ದ ಜನತೆ ನನ್ನ ಕೈ ಬಿಡಲಿಲ್ಲ. ಉತ್ತಮ ಅಂತರದಿಂದ ಗೆಲವು ನೀಡಿದ್ದಾರೆ. ಆದರೆ, ರಾಜ್ಯದಲ್ಲೂ ಬಿಜೆಪಿಗೆ ತುಸು ಬೆಂಬಲ ನೀಡಬೇಕಿತ್ತು ಎನ್ನುವ ಮುಖಭಾವದಲ್ಲಿ ಮಾತನಾಡಿದರು ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್, ಕೆಜೆಪಿ ಹಾಗೂ ಬಿಜೆಪಿ ಬಂಡುಕೋರ ಅಭ್ಯರ್ಥಿಗಳಿಂದ ತಮ್ಮ ಗೆಲವಿಗೆ ಯಾವುದೇ ತೊಂದರೆ ಆಗಲಿಲ್ಲ. ಈ ತೊಂದರೆಯನ್ನು ನಾನೂ ನಿರೀಕ್ಷೆ ಮಾಡಿರಲಿಲ್ಲ. ರಾಜಕೀಯ ಬೇಡ ಎಂದಿದ್ದರೂ ತಂದೆ. ಆದರೂ ನಾನು ಪ್ರವೇಶಿಸಿದ್ದು, ಮೊದಲ ಬಾರಿ ಶಾಸಕನಾದರೂ ಮೂರ್ಕಾಲ್ಕು ಬಾರಿ ತಂದೆಯವರ ಚುನಾವಣೆ ಕಂಡಿದ್ದೇನೆ. ಈ ಚುನಾವಣೆಯಲ್ಲಿ ನನ್ನ ಗೆಲವು ನಿಶ್ಚಿತವಾಗಿತ್ತು. ಹಾಗೆಯೇ ಆಗಿದೆ. ಕ್ಷೇತ್ರದ ಎಲ್ಲ ಮತದಾರರಿಗೆ ಈ ಮೂಲಕ ಅಭಿನಂದನೆಗಳನ್ನು ಸಹ ಸಲ್ಲಿಸುತ್ತೇನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

