ಧಾರವಾಡ

ಔಷಧ ವ್ಯಾಪಾರಸ್ಥರಿಂದ ಬಂದ್‌ಗೆ ಬೆಂಬಲ

Published On :

ಧಾರವಾಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಔಷಧ ವ್ಯಾಪರಸ್ಥರು ಕರೆ ನೀಡಿದ್ದ ಒಂದು ದಿನದ ಸಾಂಕೇತಿಕ ವ್ಯಾಪರ್ ಬಂದ್‌ಗೆ ಇಲ್ಲಿನ ಔಷಧಿ ವ್ಯಾಪಾರಸ್ಥರು ಶುಕ್ರವಾರ ವ್ಯಾಪಾರ ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದರು. 20 ವರ್ಷಗಳ ಹಿಂದೆ ನಿಗದಿಪಡಿಸಿರುವ ಔಷಧ ವ್ಯಾಪಾರಸ್ಥರ ಲಾಭಾಂಶ ಕಡಿತಗೊಳಿಸುವ ಕಾಯ್ದೆ 2013ರಲ್ಲಿ ತಿದ್ದುಪಡಿಗೆ ಸೂಚಿಸಲಾಗಿರುವ ಲಾಭಾಂಶ ಕಡಿತಗೊಳಿಸಲಾರದೆ ಈಗಿದ್ದ ಪ್ರಕಾರವೇ ಮುಂದುವರಿಸಬೇಕು. ದೇಶದ 25 ಲಕ್ಷ ಕುಟುಂಬಗಳು ಔಷಧ ವಹಿವಾಟನ್ನು ಮುಂದುವರೆಸಿದ್ದು, ಅವುಗಳಲ್ಲಿರುವ ವಿದೇಶಿ ಹಣ ಹೂಡಿಕೆ ಮುಕ್ತಗೊಳಿಸಬೇಕು. ಅಲ್ಲದೇ, ಔಷಧ ಹಾಗೂ ಕಾಂತಿವರ್ಧಕ ಕಾಯ್ದೆ 1940ರ ಕಲಂ 19 ಉಲ್ಲಂಘನೆಗೆ ಔಷಧ ಮಾರಾಟಗಾರ ತಾನೂ ದಾಸ್ತಾನು ಮಾಡಿದ ದಾಖಲೆ ಹೊಂದಿರುವುದನ್ನು ಪರಿಶೀಲಿಸಿ ಆರೋಪಿಯನ್ನಾಗಿ ಮಾಡುವ ಬದಲು ಆತನು ತಪ್ಪಿತಸ್ಥ ಎಂಬುದು ಪುರಾವೆ ಆಗುವವರೆಗೆ ಶಿಕ್ಷಾರ್ಹ ಕಲಂ ಜಾರಿ ತರಬೇಕೆಂದು ಒತ್ತಾಯಿಸಿದರು. ಸಿದ್ದಿ ಮೆಡಿಕಲ್ಸ್, ಆರ್ಯದುರ್ಗಾ ಮೆಡಿಕಲ್ಸ್, ವಿಜಯಕುಮಾರ ಕಿಲ್ಲೆದ್, ದೀಪಕ್ ಶೆಟ್ಟಿ, ಅರುಣ ಬೆಟಗೇರಿ, ರಾಜೇಂದ್ರ ಮೀರಜಕರ, ಶಿವನಗೌಡ, ಪ್ರಸಾದ ದೇಶಪಾಂಡೆ, ರಾಮಚಂದ್ರ ದೇಶಪಾಂಡೆ, ಪ್ರಕಾಶ ಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.