ಧಾರವಾಡ

ಎಂಜಿನ್ ವೈಫಲ್ಯ:ಕೆಟ್ಟು ನಿಂತ ರೈಲು

Published On :

ಕುಂದಗೋಳ: ದೆಹಲಿಯಿಂದ ಯಶವಂತಪುರಕ್ಕೆ ಹೋಗುವ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು ಗುಡಿಗೇರಿ ಬಳಿ ಎಂಜಿನ್ ವೈಫಲ್ಯದಿಂದ ಸುಮಾರು 2 ತಾಸಿಗೂ ಹೆಚ್ಚುಕಾಲ ಕೆಟ್ಟು ನಿಂತಿತ್ತು. ರಾತ್ರಿ ಸುಮಾರು 11 ಗಂಟೆ ವೇಳೆಗೆ ಈ ರೈಲು ಗುಡಿಗೇರಿ ಮೂಲಕ ಹಾಯ್ದು ಹೋಗುವಾಗ ಎಂಜಿನ್ ಕೆಟ್ಟಿದೆ. ಕೂಡಲೇ ಸಿಬ್ಬಂದಿ ಹುಬ್ಬಳ್ಳಿ ಕಚೇರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಬೇರೆ ಎಂಜಿನ್ ಕಳುಹಿಸುವರಷ್ಟರಲ್ಲಿ ಎರಡು ತಾಸು ಕಳೆದು ಹೋಗಿತ್ತು. ಬದಲಿ ಹಳಿ ಇದ್ದುದರಿಂದ ಉಳಿದ ರೈಲು ಸಂಚಾರಕ್ಕೆ ಅಡಿಯಾಗಿಲ್ಲ. ಆದರೆ ಲಕ್ಷ್ಮೇಶ್ವರ - ಹುಲಗೂರು ಮಧ್ಯೆ ಬರುವ ಸಿಗ್ನಲ್ ಗೇಟ್ ಇದ್ದುದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ರೇಲ್ವೆ ಗೇಟ್‌ನ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಉಚಿತ ಉದ್ಯೋಗ ತರಬೇತಿ
ಧಾರವಾಡ: ಕೆನರಾ ಬ್ಯಾಂಕ್, ವಿಆರ್‌ಡಿಎಂ ಟ್ರಸ್ಟ್ ಹಾಗೂ ಹಳಿಯಾಳದಲ್ಲಿರುವ ದೇಶಪಾಂಡೆ ರುಡ್‌ಸೆಟ್ ಸಂಸ್ಥೆ ಜೂನ್ ತಿಂಗಳಲ್ಲಿ ಆಸ್ತಕ ನಿರುದ್ಯೋಗಿ ಯುವಕರಿಂದ ಉಚಿತ ವಿವಿಧ ಸ್ವ-ಉದ್ಯೋಗ ತರಬೇತಿಗೆ ಅರ್ಜಿ  ಆಹ್ವಾನಿಸಿವೆ. ಜೂನ್ 14ರಿಂದ ಒಂದು ತಿಂಗಳ ಮೋಟರ್ ರಿವೈಂಡಿಗ್ ತರಬೇತಿ, ಜೂನ್ 17ರಿಂದ ಎಸಿ ಮತ್ತು ರೆಪ್ರೀಜರೇಶನ್ ತರಬೇತಿ ಹಾಗೂ 27ರಿಂದ ಮೊಬೈಲ್ ಪೋನ್ ರಿಪೇರಿ ತರಬೇತಿಗಳನ್ನು ನೀಡಲಾಗುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ತರಬೇತಿಯಲ್ಲಿ ಊಟ, ವಸತಿ ಸಂಪೂರ್ಣ ಉಚಿತವಾಗಿದ್ದು, ರಾಜ್ಯದ 18ರಿಂದ 45 ವರ್ಷದೊಳಗಿನ ಆಸಕ್ತರು ತರಬೇತಿಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ. 08284 220802 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

14ಕ್ಕೆ ಎಸ್‌ಡಿಎಂ ಡಾಕ್ಟರ್
ಧಾರವಾಡ: ಆಕಾಶವಾಣಿ ನೇರ ಪ್ರಾಯೋಜಿತ ಎಸ್‌ಡಿಎಂ ಡಾಕ್ಟರ್ ಕಾರ್ಯಕ್ರಮದಲ್ಲಿ ಎಸ್‌ಡಿಎಂ ಕಾಲೇಜಿನ ಮಾನವ ಸಂಪನ್ಮೂಲ ವಿಭಾಗದ ರೋಹಿತ್ ಪಾಟೀಲ್ ಮೇ 14ರಂದು ಸಂಜೆ 6.50ಕ್ಕೆ ವೈದ್ಯಕೀಯ ಸೇವೆಯಲ್ಲಿ ಸಿಬ್ಬಂದಿ ಪಾತ್ರ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೇಳುಗರು ತಮ್ಮ ಪ್ರಶ್ನೆಗಳನ್ನು ದೂ. 0836- 2443414, 2443415 ಅಥವಾ 2443416ಗೆ ಕರೆ ಮಾಡಿ ಕೇಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಇಂದು ಬೇಸಿಗೆ ಶಿಬಿರಸಮಾರೋಪ ಕಾರ್ಯಕ್ರಮ
ಧಾರವಾಡ: ಇಲ್ಲಿನ ಕಲಾನಿಧಿ ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ತಾಯಂದಿರ ದಿನಾಚರಣೆ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಮೇ 12ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ. ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್. ಚೆನ್ನೂರ ಉದ್ಘಾಟಿಸಲಿದ್ದು, ಕಲಾವಿದ ಪಂ. ವಾದಿರಾಜ ನಿಂಬರಗಿ, ಗೋವಿಂದ ಇಂಚೂರ ಭಾಗವಹಿಸುತ್ತಾರೆ. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.