ಧಾರವಾಡ

ಅನಗತ್ಯ ವೆಚ್ಚಕ್ಕೆ ಕಡಿವಾಣ ಅಗತ್ಯ

Published On :

ಧಾರವಾಡ: ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳು ರಂಗಭೂಮಿ ಉಪ ಉತ್ಪನ್ನಗಳಾದ ಮಕ್ಕಳ ರಂಗಭೂಮಿ, ಶಿಕ್ಷಕರಿಗೆ ರಂಗ ತರಬೇತಿ ಮತ್ತಿತರೆ ಅನಗತ್ಯ ಚಟುವಟಿಕೆಗೆ ಹಣ ವೆಚ್ಚ ಮಾಡುತ್ತಿದೆ. ಈ ಕುರಿತು ಗಂಭೀರ ಚಿಂತನೆ ನಡೆಯಬೇಕೆಂದು ಹಿರಿಯ ರಂಗಕರ್ಮಿ ಡಾ. ಪ್ರಕಾಶ ಗರುಡ ಹೇಳಿದರು.
ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ನಡೆಯುತ್ತಿರುವ 8ನೇ ಸಾಹಿತ್ಯ ಸಮ್ಮೇಳನದಲ್ಲಿ ನಾನು ಮತ್ತು ಧಾರವಾಡ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬದಲಾಗುತ್ತಿರುವ ಸಂದರ್ಭದಲ್ಲಿ ವೃತ್ತಿ ಮತ್ತು ಹವ್ಯಾಸಿ ಬೆಸುಗೆ ಎನ್ನುವ ಭ್ರಮೆಯಲ್ಲಿ ಹೊಸ ರಂಗಭೂಮಿಯನ್ನು ಕಟ್ಟುವ ಪ್ರಯತ್ನ ಮಾಡುತ್ತಿದ್ದೇವೆ. ನಾಟಕ ಶ್ರೇಷ್ಠವಾಗುವುದು ತಾಲೀಮಿನಲ್ಲಿ. ಇಂದು ರಂಗಭೂಮಿಗೆ ಬರುತ್ತಿರುವ ಯುವಕರಲ್ಲಿ ಅವಸರವಿದೆ. ಪೂರಕ ವ್ಯವಸ್ಥೆ ಇಲ್ಲ. ವೃತ್ತಿಪರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದ ಅವರು ರಂಗಭೂಮಿ ಕುರಿತು ಧಾರವಾಡ ಸಹ ಅನೇಕ ಕೊಡುಗೆಗಳನ್ನು ನೀಡಿದೆ. ಅದ್ಭುತ ರಂಗಕರ್ಮಿಗಳು ಧಾರವಾಡದಲ್ಲಿ ಈಗಲೂ ಇದ್ದಾರೆ. ಅವರನ್ನು ಗುರುತಿಸುವ ಕಾರ್ಯವಾಗಬೇಕಿದೆ ಎಂದರು. ಹೋರಾಟಗಾರ ಡಾ. ಸಿದ್ದನಗೌಡ ಪಾಟೀಲ ಮಾತನಾಡಿ, ಧಾರವಾಡದಲ್ಲಿ ನೆಲೆಸಿ ಇಲ್ಲಿನ ವಾತಾವರಣ ಸೇವಿಸುವುದೇ ಒಂದು ಸಂಸ್ಕೃತಿಯ ಅನುಭವ ತರುತ್ತದೆ. ಮಲೆನಾಡು, ಬಯಲ ಸೀಮೆಯ ವಿಶಿಷ್ಠ ಭೌಗೋಳಿಕ ಹಿನ್ನೆಲೆ ಹೊಂದಿದ್ದ ಧಾರವಾಡ ಕಪ್ಪು ಹಾಗೂ ಕೆಂಪು ಮಣ್ಣಿನ ಮಿಶ್ರಿತ. ನರಗುಂದ, ಗೋಕಾಕ ಚಳವಳಿಗಳನ್ನು ನಮ್ಮನ್ನೆಲ್ಲಾ ಪ್ರಚೋದಿಸಿ ಮಾನಸಿಕ ಗಟ್ಟಿತನಕ್ಕೆ ಬೇರಾಗಿ ನಿಂತವು. ಧಾರವಾಡ ಬರೀ ಹೋರಾಟಕ್ಕೆ ಮಾತ್ರ ಸೀಮಿತವಾಗದೆ ವೈಚಾರಿಕ ಚಿಂತನೆಗೆ ದಾರಿ ಮಾಡಿಕೊಟ್ಟಿದೆ ಎಂದರು. ಹಿರಿಯ ಚಿತ್ರ ಕಲಾವಿದ ಬಿ. ಮಾರುತಿ ಮಾತನಾಡಿ, ನಾನು ಕಲಾವಿದನಾಗಿ ರೂಪಗೊಳ್ಳಲು ಧಾರವಾಡದ ವಾತಾವರಣವೇ ಕಾರಣ. ನಾನಿಲ್ಲಿ ಬಂದಾಗ ಹಲವು ಕಲಾ ಶಾಲೆಗಳಿದ್ದವು. ಹಿರಿಯ ಕಲಾವಿದರು ಚಿತ್ರಕಲೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೆಲ್ಲ ನನಗೆ ಪ್ರೇರಣೆ ಎಂದರು.
ಸಾಹಿತಿ ಮೋಹನ ನಾಗಮ್ಮನವರ, ಧಾರವಾಡ ದಾರಿ ತೋರಿಸ್ತು ಅಂತಾರೆ, ಹಾಗೆಯೇ ಅನೇಕರ ಜೀವನಕ್ಕೆ ಧಾರವಾಡ ದಾರಿ ತೋರಿಸಿದೆ. ಅವರಿಂದ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಕಲಾವಿದರ ಕಲೆಗಳ ಅನಾವರಣಕ್ಕೆ ಈ ಊರು ವೇದಿಕೆ ಒದಗಿಸಿದೆ. ಮೃತ ಶರೀರಕ್ಕೂ ಧಾರವಾಡ ಇಷ್ಟ ಎಂದರೂ ತಪ್ಪಲ್ಲ. ಇಲ್ಲಿ ಕಲೆ ಅಷ್ಟೊಂದು ಜೀವಂತ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಪತ್ರಕರ್ತರ ಜಗದೀಶ ಕೊಪ್ಪ , ಧಾರವಾಡದ ನೆಲ-ಜಲ, ಸಂಸ್ಕೃತಿ ತುಂಬಾ ಇಷ್ಟವಾಗಿದೆ. ಈ ಕುರಿತು ಎಷ್ಟು ಬರೆದರೂ ಸಮಾಧಾನವಿಲ್ಲ. ಈ ವಾತಾವರಣ ನನ್ನ ಭೌದ್ಧಿಕತೆ ಹೆಚ್ಚಿಸಿದೆ. ಇಲ್ಲಿ ಬಹುಮುಖಿ ಸಂಸ್ಕೃತಿ ಇದ್ದು, ಕಲಾವಿದರು, ಲೇಖಕರು, ಸಂಗೀತಾರರನ್ನು ಪೋಷಿಸಿದ ಜಾಗವಿದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.