ರಿಕ್ರಿಯೇಷನ್ ಕ್ಲಬ್ ವಿವಾದ: ದೂರು
ಹುಬ್ಬಳ್ಳಿ: ರಿಕ್ರಿಯೇಷನ್ ಕ್ಲಬ್ನ ಪದಾಧಿಕಾರಿಗಳಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ ಜೋಶಿ ವಿರುದ್ಧ ಕನ್ನಡಪರ ಮಹಾಮಂಡಳ ಅಧ್ಯಕ್ಷ ಡಿ. ಗೋವಿಂದರಾವ್ ಅವರು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮತ್ತು ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದಾರೆ. ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿರುವ ಮೋಜು-ಮಸ್ತಿಗೆ ಈ ಕ್ಲಬ್ನ್ನು ತೆರೆಯಲಾಗಿದೆ. ಮೋಜು ಮಸ್ತಿ ಮಾಡುವುದಕ್ಕೆ ಎಂದು ರಿಕ್ರಿಯೆಷನ್ ಕ್ಲಬ್ ಸ್ಥಾಪಿಸಲಾಗಿದ್ದು, ಒಟ್ಟು ರು. 40 ಕೋಟಿಗಳನ್ನು ಸದಸ್ಯತ್ವದ ಶುಲ್ಕ ಎಂದು ಸ್ವೀಕರಿಸಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ತಿಂಗಳ ಒಳಗೆ ಕ್ಲಬ್ನ ಪದಾಧಿಕಾರಿ ಹುದ್ದೆಗೆ ರಾಜಿನಾಮೆ ನೀಡದಿದ್ದಲ್ಲಿ ದೆಹಲಿಯಲ್ಲಿರುವ ಎಲ್.ಕೆ. ಅಡ್ವಾಣಿ ಅವರ ನಿವಾಸದ ಎದುರು ಕನ್ನಡಪರ ಮಹಾಮಂಡಳದ ಕಾರ್ಯಕರ್ತರು ಪ್ರತಿಭಟನೆ ಮಾಡಲಿದ್ದಾರೆ ಎಂದು ಗೋವಿಂದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹತ್ತಿ ಮೂಟೆ ಹೇರಿದ್ದ ಲಾರಿಗೆ ಬೆಂಕಿ
ಧಾರವಾಡ: ಹತ್ತಿ ಮೂಟೆ ಹೇರಿಕೊಂಡು ಹೊರಟಿದ್ದ ಲಾರಿಗೆ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹತ್ತಿಕೊಂಡ ಘಟನೆ ಇಲ್ಲಿನ ಯಾದವಾಡ ರಸ್ತೆಯ ಪತ್ರೆಪ್ಪಜ್ಜನ ಮಠದ ಬಳಿ ಸೋಮವಾರ ನಡೆದಿದೆ. ಚಿತ್ರದುರ್ಗದಿಂದ ತಾಲೂಕಿನ ಅಮ್ಮಿನಬಾವಿಯ ಆನಂದ್ ಟ್ರೇಡರ್ಸ್ಗೆ ಈ ರಸ್ತೆ ಮೂಲಕ ಹಾದು ಹೋಗುತ್ತಿದ್ದ ಲಾರಿಯ ಹತ್ತಿ ಮೂಟೆಗೆ ವಿದ್ಯುತ್ ತಂತಿಯಿಂದ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತ್ತು. ಕೂಡಲೇ ಹಳೇ ಎಪಿಎಂಸಿ ಬಳಿ ಇತ್ತೀಚೆಗೆ ಸ್ಥಾಪನೆಯಾಗಿರುವ ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿದ ಫಲವಾಗಿ ಘಟನೆಯಲ್ಲಿ ಅಪಾರ ಹಾನಿಯಾಗಿಲ್ಲ. ರು. 5 ಸಾವಿರ ಮೌಲ್ಯದ ಹತ್ತಿ ಸುಟ್ಟಿದ್ದು, ಲಾರಿಗೆ ಹಾನಿಯಾಗಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿ ಬಿ.ವಿ. ಹಿರೇಮಠ ಪತ್ರಿಕೆಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

