ನಾಳೆಯಿಂದ ಮಕ್ಕಳ ಸಹಾಯವಾಣಿ ಸಪ್ತಾಹ
ಹುಬ್ಬಳ್ಳಿ: ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್ ವತಿಯಿಂದ ಧಾರವಾಡ ಜಿಲ್ಲೆಯಲ್ಲಿ ನ. 15ರಿಂದ 20ರ ವರೆಗೆ 'ಮಕ್ಕಳ ಸಹಾಯವಾಣಿ (1098)' ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಮಕ್ಕಳ ರಕ್ಷಣೆ ಕುರಿತು ಮಾಹಿತಿ ನೀಡುವುದು ಈ ಸಪ್ತಾಹದ ಪ್ರಮುಖ ಉದ್ದೇಶ ಎಂದು ಫೌಂಡೇಶನ್ ಜಿಲ್ಲಾ ಸಂಯೋಜಕ ಬಸವರಾಜ ಬಗಡಗೇರಿ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಕಷ್ಟದಲ್ಲಿರುವ ಮಕ್ಕಳಿಗೆ ಫೌಂಡೇಶನ್ ಬೆಂಬಲ ಹಾಗೂ ಸಹಾಯ ಮಾಡುತ್ತ ಬಂದಿದೆ. ನ. 15ರಂದು ಬೆಳಗ್ಗೆ 10ಕ್ಕೆ ನಗರದ ಹಳೇ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಗ್ರಾಮೀಣ ಹಾಗೂ ಶಹರ ಮಟ್ಟದ ಜನತೆಗೆ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಜೊತೆಗೆ ಮಕ್ಕಳ ಸಹಾಯವಾಣಿ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಮಕ್ಕಳ ಸಹಾಯವಾಣಿ (1098) ಮೂಲಕ 2012ರ ಏಪ್ರಿಲ್‌ನಿಂದ 2013ರ ಅಕ್ಟೋಬರ್ ವರೆಗೆ ಧಾರವಾಡ ಜಿಲ್ಲೆಯ 553 ಮಕ್ಕಳಿಗೆ ಸಹಾಯ ಮಾಡಲಾಗಿದೆ. ಇವರಲ್ಲಿ 24 ಮಕ್ಕಳು ಮನೆಯಿಂದ ಕಳೆದುಕೊಂಡವರು, ಇಬ್ಬರು ಮಾದಕ ವ್ಯಸನಿಗಳು, ಇಬ್ಬರು ಬಾಲ ಕಾರ್ಮಿಕರು, ಒಬ್ಬ ಮಕ್ಕಳ ಸಾಗಾಣಿಕೆಯಿಂದ, ಮೂವರು ಅಸಹಜ ಮಕ್ಕಳು, ನಾಲ್ವರು ಮಾನಸಿಕ ಹಾಗೂ ದೈಹಿಕ ವಿಕಲಚೇತನರು, ಮೂವರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು, ಬಾಲ್ಯ ವಿವಾಹಕ್ಕೊಳಗಾಗುತ್ತಿದ್ದ 16 ಮಕ್ಕಳು ಸೇರಿದ್ದಾರೆ. ಅಧಿಕ ಬಡತನ ಇರುವ ಕಲಘಟಗಿ ತಾಲೂಕಿನಲ್ಲಿ ಬಾಲ್ಯ ವಿವಾಹಕ್ಕೊಳಗಾಗುತ್ತಿರುವ ಹೆಚ್ಚಿನ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಹೇಳಿದರು. ಸಪ್ತಾಹ ಅಂಗವಾಗಿ ಜಿಲ್ಲಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮಕ್ಕಳ ಹಕ್ಕುಗಳ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುವುದು ಎಂದರು. ಬಿ.ವೈ. ಪಾಟೀಲ, ಎನ್.ಬಿ. ಹೊಸಮನಿ ಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

