ಬೆಳೆಗೆ ಸರ್ಕಾರ ಸೂಕ್ತ ಧಾರಣಿ ನೀಡಬೇಕು: ಬಾಪುಗೌಡ ಪಾಟೀಲ
ಕನ್ನಡಪ್ರಭ ವಾರ್ತೆ, ಕುಂದಗೋಳ, ನ. 18
ಸಹಕಾರಿ ಸಂಘ ಸಂಸ್ಥೆಗಳು ರೈತರಿಗೆ ಅನುಕೂಲವಾಗಿವೆ. ಆದರೆ, ರೈತರು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ದೊರೆಯುತ್ತಿಲ್ಲ. ಫಸಲಿನ ಲಾಭ ಕೇವಲ ದಲ್ಲಾಳಿಗಳ ಪಾಲಾಗುತ್ತಿದ್ದು, ಇದನ್ನು ಸಂಘ ಸಂಸ್ಥೆಗಳು ರೈತರ ಬೆಳೆಗಳನ್ನು ಖರೀದಿಸಿ ಸೂಕ್ತ ಧಾರಣಿ ನೀಡಬೇಕೆಂದು ಜಿಲ್ಲಾ ಸಹಾಕಾರಿ ಯೂನಿಯನ್ ಅಧ್ಯಕ್ಷ ಬಾಪುಗೌಡ ಪಾಟೀಲ ಒತ್ತಾಯಿಸಿದರು.
ಅವರು ಪಟ್ಟಣದ ಹರಭಟ್ಟ ಕಾಲೇಜಿನ ನೌಕರರ ಪತ್ತಿನ ಸಂಘದ ಸಭಾ ಭವನದಲ್ಲಿ ರಾಜ್ಯ ಸಹಕಾರಿ ಮಂಡಳಿ ಬೆಂಗಳೂರು ಹಾಗೂ ಜಿಲ್ಲಾ ಸಹಕಾರಿ ಯೂನಿಯನ್, ಕೆಸಿಸಿ ಬ್ಯಾಂಕ್ ಧಾರವಾಡ ಮತ್ತು ಸಹಕಾರಿ ಇಲಾಖೆ ಹರಭಟ್ಟ ಜೂನಿಯರ್ ಕಾಲೇಜು ನೌಕರರ ಪತ್ತಿನ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಸರ್ಕಾರಿ ಸಪ್ತಾಹ ದಿನಾಚರಣೆ ಅಂಗವಾಗಿ ಸಹಕಾರ ಮಾರಾಟ ಸಂಸ್ಕರಣ ಮತ್ತು ಗ್ರಾಹಕ ದಿನ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಉಮೇಶ್ ಹೆಬಸೂರ್, ಶಂಕ್ರಪ್ಪ ಶಿವಳ್ಳಿ, ಡಿ.ಆರ್. ವೆಂಕಟರಾಮ್ ಮಾತನಾಡಿದರು. ಬಿ.ಎಸ್. ವರೂರ ಅಧ್ಯಕ್ಷತೆ ವಹಿಸಿದ್ದರು. ನೂತನ ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಉಮೇಶ ಹೆಬಸೂರ, ಪ್ರತಾಪ್ ಚೌಹಾಣ್, ಮಲ್ಲಿಕಾರ್ಜುನ್ ಹೊರಕೇರಿ, ಬಾಪುಗೌಡ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಅರವಿಂದ ಕಟಗಿ, ಬಿ.ಎಂ. ಮುಂದಿನಮನಿ, ಶಂಕರಗೌಡ ಮುದಿಗೌಡ್ರ, ಐ.ಎಸ್. ಪಾಟೀಲ, ಮುದಕಣ್ಣ ಕುನ್ನೂರ, ನಿಂಗಪ್ಪ ಬಿಳೇಬಾಳ, ಬಸವರಾಜ ಬಾಳಿಕಾಯಿ ಉಪಸ್ಥಿತರಿದ್ದರು. ಪಿ.ಪಿ. ಗಾಯಕವಾಡ ಪ್ರಾಸ್ತಾವಿಕ ಮಾತನಾಡಿದರು.
ಸುಮಾ ರಣೂತೂರ ಪ್ರಾರ್ಥಿಸಿದರು. ಎಚ್.ಟಿ. ದೊಡಮನಿ ಸ್ವಾಗತಿಸಿದರು. ಬಿ.ಪಿ. ಕಲಾರಿ ನಿರೂಪಿಸಿದರು. ಜೆ.ಎಸ್. ಗೌಡಪ್ಪಗೌಡ್ರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

