ಕಲ್ಲಿನಿಂದ ಜಜ್ಜಿ ಮಹಿಳೆ ಕೊಲೆ: ಪ್ರಕರಣ ದಾಖಲು
ಹುಬ್ಬಳ್ಳಿ: ಗಂಡನಿಂದ ಬೇರೆಯಾಗಿ ಕಳೆದ 11 ವರ್ಷಗಳಿಂದ ಪ್ರಿಯಕರನ ಜತೆಗೆ ವಾಸವಾಗಿದ್ದ ಮಹಿಳೆಯನ್ನು ಆಕೆಯ ಪ್ರಿಯಕರನೇ ಕಲ್ಲಿನಿಂದ ಜಜ್ಜಿ ಕೊಲೆ ಗೈದಿರುವ ಘಟನೆ ಬುಧವಾರ ಬೆಳಗಿನ ಜಾವ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದಿದೆ. ಹುಲಿಗೆಮ್ಮ ಪರಶುರಾಮ ಗೊಲ್ಲರ (36) ಹತ್ಯೆಗೀಡಾದ ಮಹಿಳೆ. ಈಕೆಯನ್ನು ವಿಜಯ ಸದಾಶಿ ಹುರಳಿ ಕೊಲೆಗೈದು ಪರಾರಿಯಾಗಿದ್ದಾನೆ. ಎರಡು ಮಕ್ಕಳ ತಾಯಿಯಾಗಿರುವ ಹುಲಿಗೆಮ್ಮ ಗಂಡನಿಂದ ಬೇರೆಯಾಗಿ ವಿಜಯನೊಂದಿಗೆ ವಾಸವಾಗಿದ್ದಳು. ಕೆಲ ದಿನಗಳಿಂದ ವಿಜಯ ಮತ್ತು ಹುಲಿಗೆಮ್ಮ ನಡುವೆ ಕಿತ್ತಾಟ ನಡೆಯುತ್ತಿತ್ತು. ಬುಧವಾರ ಬೆಳಗ್ಗೆ 2.30ರ ಸುಮಾರಿಗೆ ಕುಡಿದ ಮತ್ತಿನಲ್ಲಿ ವಿಜಯ ಭಾರವಾದ ಕಲ್ಲನ್ನು ಎತ್ತಿ ಹುಲಿಗೆಮ್ಮಳ ಮೇಲೆ ಬಿಸಾಕಿದ್ದಾನೆ. ಹುಲಿಗೆಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಹುಲಿಗೆಮ್ಮ ತನ್ನ ಮೊದಲ ಗಂಡನ ಜತೆ ಮತ್ತೆ ಸಂಬಂಧ ಬೆಳೆಸಿದ್ದಾಳೆಂಬ ಸಂಶಯದಿಂದ ವಿಜಯ ಈ ಕೃತ್ಯವೆಸಗಿದ್ದಾನೆಂದು ತಿಳಿದು ಬಂದಿದೆ. ಹುಲಿಗೆಮ್ಮ ಸಂಬಂಧಿ ಗುರಪ್ಪ ನೀಡಿರುವ ದೂರಿನ ಪ್ರಕಾರ ಬೆಂಡಿಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.
ಬೀದಿಯಲ್ಲಿ ಕತ್ತರಿಸಿದ ಕಾಲು ಪತ್ತೆ
ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ವಿನಾಯಕ ನಗರದ ಜನ ನಿಬಿಡ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಕತ್ತರಿಸಿದ ಕಾಲು ಪತ್ತೆಯಾಗಿದ್ದರಿಂದ ಸುತ್ತಲಿನ ಪರಿಸರದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಗ್ಯಾಂಗರಿನ್ ಅಥವಾ ಯಾವುದೋ ಗಂಭೀರ ಕಾಯಿಲೆಗೆ ಒಳಗಾಗಿದ್ದ ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿ ಪೊದೆಯಲ್ಲಿ ಹೂಳಿದ್ದ ಕಾಲನ್ನು ನಾಯಿಗಳು ಹೊರತೆಗೆದು ಬಿಸಾಡಿರಬಹುದು ಎಂದು ಶಂಕಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ ಇನ್ನಿತರ ಅಧಿಕಾರಿಗಳು ಸಾರ್ವಜನಿಕರು ಅನವಶ್ಯಕವಾಗಿ ಹೆದರುವ ಅಗತ್ಯವಿಲ್ಲ ಎಂದರು. ನಂತರ ಹೆಚ್ಚಿನ ತನಿಖೆಗೆ ಕತ್ತರಿಸಲ್ಪಟ್ಟ ಕಾಲಿನ ಡಿಎನ್ಎ ಪರೀಕ್ಷೆಗೆ ಕಿಮ್ಸ್ಗೆ ಕಳುಹಿಸಲಾಯಿತು.
ರಾಮಕೃಷ್ಣಪ್ಪ ನೀಲಣ್ಣವರ
ಹುಬ್ಬಳ್ಳಿ: ಮಾಜಿ ಯೋಧ, ಹಳೇ ಹುಬ್ಬಳ್ಳಿಯ ಸಿದ್ಧಾರೂಢ ನಗರದ ನಿವಾಸಿ ರಾಮಕೃಷ್ಣಪ್ಪ ತಿಪ್ಪಣ್ಣ ನೀಲಣ್ಣವರ (80) ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು-ಬಳಗವಿದೆ. ದಿ. ರಾಮಕೃಷ್ಣಪ್ಪ ಅವರ ಅವರ ಕಣ್ಣುಗಳನ್ನ್ನು ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಗಿದೆ ಎಂದು ಅವರ ಪುತ್ರ ಸತೀಶ ನೀಲಣ್ಣವರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

