ಧಾರವಾಡ

ಜೇನುಹುಳು ದಾಳಿ: ಮಕ್ಕಳು ಆಸ್ಪತ್ರೆಗೆ ದಾಖಲು

Published On :

ಕುಂದಗೋಳ: ತಾಲೂಕಿನ ಹಿರೇನರ್ತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಇಂದು ಮಧ್ಯಾಹ್ನ ಊಟದ ಸಮಯದಲ್ಲಿ ತೊಗರಿ ಜೇನುಹುಳುಗಳು ಶಾಲಾ ವಿದ್ಯಾರ್ಥಿಗಳಿಗೆ ಕಚ್ಚಿದ ಪರಿಣಾಮ, ವಿದ್ಯಾರ್ಥಿಗಳು ಅಳುತ್ತ ಮನೆಗೆ ಹೋಗಿ ತಮ್ಮ ತಮ್ಮ ಪಾಲಕರಿಗೆ ತಿಳಿಸಿದ ನಂತರ ಪಾಲಕರು ಗಾಬರಿಯಿಂದ ಸಿಕ್ಕೆಲ್ಲ ವಾಹನಗಳನ್ನು ತೆಗೆದುಕೊಂಡು ಕುಂದಗೋಳದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಿದರು.
ಘಟನೆ ವಿವರ
ಹಂಚಿನ ಹೊದಿಕೆ ಹೊಂದಿದ್ದ ಶಾಲೆಯ ಕೊಠಡಿಯೊಂದರಲ್ಲಿ ತೊಗರಿ ಜೇನುಹುಳು ತನ್ನ ಗೂಡಿಟ್ಟುಕೊಂಡಿದ್ದು, ಇದುವರೆಗೂ ಯಾರಿಗೂ ಏನೂ ಮಾಡದ ಈ ಹುಳುಗಳು ಸೋಮವಾರ ಮಧ್ಯಾಹ್ನ ಶಾಲಾ ಆವರಣದಲ್ಲಿ ಮಕ್ಕಳು ಊಟ ಮಾಡುತ್ತಿರುವಾಗ ಮಂಗಗಳ ಕಿತಾಪತಿಯಿಂದ ಹುಳುಗಳು ಶಾಲಾ ಮಕ್ಕಳಿಗೆ ಹಿಗ್ಗಾಮುಗ್ಗಾ ಕಡಿದಿದ್ದು, ಗಾಬರಿಗೊಂಡ ಮಕ್ಕಳು ತಮ್ಮ ತಮ್ಮ ಪಠ್ಯಪುಸ್ತಕ-ಸಾಮಗ್ರಿಗಳನ್ನು ಸ್ಥಳದಲ್ಲಿಯೇ ಬಿಟ್ಟು, ಅಳುತ್ತ ಓಡೋಡಿ ಮನೆಗೆ ಹೋದ ನಂತರ ಪಾಲಕರು ಮಕ್ಕಳ ಆಕ್ರಂದನವನ್ನು ಗಾಬರಿಯಿಂದ ನೋಡಿ, ಅವರ ಮುಖ, ಕಾಲು, ಕೈ-ಕಿವಿಗಳು ಊತಗೊಂಡದ್ದನ್ನು ಕಂಡು ಸಮೀಪದ ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ಕರೆತಂದು ಲಗುಬಗೆಯಿಂದ ಚಿಕಿತ್ಸೆ ಕೊಡಿಸಿದರು. ಈ ಘಟನಾ ವಿಷಯ ಕುರಿತಂತೆ ಬಿಇಒ ಮಂಜುಳಾ ಪಾಟೀಲ ಮಾತನಾಡಿ, ಈ ವಿಷಯ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಯಾವ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ಮರುಪ್ರಶ್ನಿಸಿ ನಿರ್ಲಕ್ಷತನದ ಪರಮಾವಧಿ ಮೆರೆದರು.
ಜೇನುಹುಳು ಕಡಿತದ ಕುರಿತು ಪಾಲಕರು ಗಾಬರಿಯಾಗುವಂತಪರಿಸ್ಥಿತಿ ಉಂಟಾಗಿಲ್ಲ. ಮಕ್ಕಳಿಗೆ ಸರಿಯಾದ ಚಿಕಿತ್ಸೆ ನೀಡಿದ್ದು, ಮಕ್ಕಳು ಸೂಕ್ತ ಸಮಯಕ್ಕೆ ಗುಣಮುಖರಾಗಿದ್ದಾರೆ. ಶೀಘ್ರ ಆಸ್ಪತ್ರೆಯಿಂದ ತಮ್ಮ ತಮ್ಮ ಮನೆಗಳಿಗೆ ಕಳುಹಿಸಿ ಕೊಡಲಾಗುವುದು
- ಡಾ. ಎಂ. ಮಾರುತಿ,
ಸಕಾರಿ ಆಸ್ಪತ್ರೆ, ಕುಂದಗೋಳ
ನಾವು ಮನ್ಯಾಗಿದ್ದಿವ್ರಿ, ನನ್ ಮೊಮ್ಮಗಳು ಅಳಕೊಂತ ಮನಿಗೆ ಓಡಿಬಂದಳ್ರಿ. ಏನಾತಂತ ಕೇಳಿದ್ರ, ಜೇನುಳಾ ಕಡಿದಾವು ಅಂತ ಹೇಳಿದ್ಲರ್ರಿ. ಅಕಿ ಮುಖ-ಕಿವಿ-ತಲ್ಯಾಗ ಹುಳಾ ಕಡದ ಬಾವು ಬಂದತ್ರಿ. ಅದಕ್ಕ ದೌಡ ಇಲ್ಲಿಗೆ ಬಂದ ಡಾಕ್ಟರಿಗೆ ತೋರಸಾಕತ್ತೇನ್ರಿ.
- ನಾಗಮ್ಮ ಬಾಗವಾಡ,
ಶಾಲಾ ಬಾಲಕಿಯ ಪಾಲಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.