ಕಣ್ಮನ ಸೆಳೆದ ಫಲ-ಪುಷ್ಪ ಪ್ರದರ್ಶನ
ಹುಬ್ಬಳ್ಳಿ: ತೋಟಗಾರಿಕೆ ಇಲಾಖೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತು ಹಾಫ್ಕಾಮ್ಸ್ನಿಂದ ಇಲ್ಲಿನ ಇಂದಿರಾ ಗಾಜಿನ ಮನೆ ಉದ್ಯಾನದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ತರಹೇವಾರಿ ಹೂವು ಹಣ್ಣುಗಳದ್ದೇ ಸಾಮ್ರಾಜ್ಯ.
ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆಯೇ ಎದುರಾಗುವ ವಿವಿಧ ತರಕಾರಿಗಳಿಂದ ಮಾಡಿದ ಮಹಿಳೆಯ ಪ್ರತಿರೂಪ, ಅದರ ಜೊತೆಗೆ ಹೊರಾಂಗಣದಲ್ಲಿ ಒಪ್ಪವಾಗಿ ಜೋಡಿಸಿಟ್ಟ ವಿವಿಧ ಜಾತಿಯ ಅರ್ಕಿಡ್, ಸಸ್ಯಗಳು ಹೂಕುಂಡಗಳು, ಒಳಾಂಗಣದಲ್ಲಿ ನಿರ್ಮಿಸಿದ ಉದ್ಯಾನ, ಅಲ್ಲೊಂದು ಸಣ್ಣ ನೀರಿನ ಝರಿ.
ಹೀಗೆ ಮನೆ ಎದುರು ಇಂತಹದ್ದೊಂದು ಉದ್ಯಾನ ಇದ್ದರೆ ಎನ್ನುವ ಆಶಯದೊಂದಿಗೆ ಸಸ್ಯ ಲೋಕಕ್ಕೆ ಕರೆದೊಯ್ಯುತ್ತದೆ. ಇನ್ನೊಂದು ಬದಿಯಲ್ಲಿದ್ದುದು ತರಕಾರಿಗಳ ಸಾಮ್ರಾಜ್ಯ. ಬಣ್ಣ ಬಣ್ಣದ ದೊಣ್ಣೆ ಮೆಣಸಿನಕಾಯಿಯಿಂದ ಹಿಡಿದು ಬೊಗಸೆ ತುಂಬುವ ಸೀಬೆ, ವಿದೇಶಿ ಹಣ್ಣುಗಳು, ಇನ್ನೊಂದು ಸಾಲಿನಲ್ಲಿ ಚಿಕ್ಕು, ಅತಿ ಖಾರದ ಗಿಡ್ಡ ಮೆಣಸಿನಕಾಯಿಂದ ಹಿಡಿದು ಸಪ್ಪೆ ಮೆಣಸಿನಕಾಯಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಅ.2ರಿಂದ 4ರ ವರೆಗೆ ನಡೆಯಲಿರುವ ಫಲಫುಷ್ಪ ಪ್ರದರ್ಶನದಲ್ಲಿ ಧಾರವಾಡ ಜಿಲ್ಲೆಯ ರೈತರು, ತೋಟಗಾರಿಕೆ, ತರಕಾರಿ ಬೆಳೆಗಳನ್ನು ಪ್ರದರ್ಶಕ್ಕೆ ಇರಿಸಿದ್ದರೆ, ಉದ್ಯಾನ ಬೆಳೆಸುವ ಹವ್ಯಾಸ ಬೆಳೆಸಿಕೊಂಡು ನಗರವಾಸಿಗಳಿಂದ ಅರ್ಕಿಡ್ಗಳು, ವಿವಿಧ ರೀತಿಯ ಸಸ್ಯಗಳು, ಹೂವುಗಳನ್ನು ಪ್ರದರ್ಶನಕ್ಕೆ ಇರಿಸಿ ತಮ್ಮ ಅಭಿರುಚಿಯನ್ನು ತೋರ್ಪಡಿಸಿದ್ದರು. ಬುಧವಾರ ಸಂಜೆ 5ಕ್ಕೆ ಸಂಸದ ಪ್ರಹ್ಲಾದ ಜೋಶಿ, ಮಾಜಿ ಸಚಿವ ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಫಲಫುಷ್ಪ ಪ್ರದರ್ಶನ ಉದ್ಘಾಟಿಸಿದರು.
ಯುವತಿಯರ ದಂಡು: ತೋಟಗಾರಿಕೆ ಇಲಾಖೆ ಮತ್ತಿತರ ಇಲಾಖೆಗಳ ಆಶ್ರಯದಲ್ಲಿ ನಡೆದ ಫಲಫುಷ್ಪ ಪ್ರದರ್ಶನಕ್ಕೆ ಯುವತಿಯರ ದಂಡೇ ನೆರೆದಿತ್ತು. ಕತ್ತರಿಸಿದ ಹೂಗಳ ವಿಭಾಗದಲ್ಲಿ ಸಾಲಾಗಿ ಹೂವಿನ ಅಂದ ನೋಡುತ್ತಿದ್ದ ಯುವತಿಯರ ಕಣ್ಣಲ್ಲಿ ಹೂವಿನ ಅಂದಕ್ಕೆ ಮಾರು ಹೋದ ಭಾವ ಎದ್ದು ಕಾಣುತ್ತಿತ್ತು. ಇಂದಿರಾ ಗಾಜಿನ ಮನೆಗೆ ಉದ್ಯಾನಕ್ಕೆ ವಿಹಾರಕ್ಕೆ ಎಂದು ಆಗಮಿಸಿದ್ದ ನಾಗರಿಕರು ಕೂಡ ವಿವಿಧ ಮಾದರಿಯ ತರಕಾರಿ, ಸಸ್ಯಗಳನ್ನು ನೋಡಿ ಖುಷಿಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

