ಧಾರವಾಡ

ಪುತ್ಥಳಿಯ ಕನ್ನಡಕ ಬೀಳಿಸಿದ ನಾಯಕರು

Published On :

ಹುಬ್ಬಳ್ಳಿ: ಫೋಟೋಗೆ ಫೋಜ್ ಕೊಡುವ ಧಾವಂತದಲ್ಲಿ ಕಾಂಗ್ರೆಸ್ ಮುಖಂಡರು ಹುಬ್ಬಳ್ಳಿ ಕಿಮ್ಸ್ ಆವರಣದಲ್ಲಿರುವ ಗಾಂಧಿ ಪುತ್ಥಳಿಯ ಕನ್ನಡಕ ಬೀಳಿಸಿದ ಘಟನೆ ನಡೆದಿದೆ.
ಹೊಸ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹುಬ್ಬಳ್ಳಿಗೆ ಬುಧವಾರ ಆಗಮಿಸಿದ್ದರು. ಗಾಂಧಿ ಜಯಂತಿಯ ನಿಮಿತ್ತ ಅವರು ಕಿಮ್ಸ್ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಆಗಮಿಸಿದರು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರ ದಂಡೇ ಅಲ್ಲಿ ನೆರೆದಿತ್ತು. ಖರ್ಗೆಯವರು ಪುತ್ಥಳಿಯತ್ತ ಹತ್ತಿರ ಬಂದಿದ್ದೇ ತಡ, ಖರ್ಗೆಯವರನ್ನು ಹಿಂದಿಕ್ಕಿ ಕೆಲ ಮುಖಂಡರು ಪುತ್ಥಳಿಯ ಸ್ಟೇರ್‌ಕೇಸ್ ಹತ್ತಿ ನಿಂತರು. ಹೀಗೋ ಹಾಗೋ ಖರ್ಗೆಯವರು ಸ್ಟೇರ್ ಕೇಸ್ ಹತ್ತಿ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಮುಂದಾದರು. ಅಕ್ಕಪಕ್ಕದಲ್ಲಿದ್ದ ಕೆಲ ಮುಖಂಡರು ಮಾಧ್ಯಮ ಛಾಯಾಗ್ರಾಹಕರು ಕ್ಲಿಕ್ಕಿಸುತ್ತಿದ್ದ ಫೋಟೋದಲ್ಲಿ ಕಾಣಿಸಿಕೊಳ್ಳಲು ಖರ್ಗೆಯವರನ್ನು ದೂಡುತ್ತಿದ್ದರು. ಈ ದೂಡಾಟದಲ್ಲಿಯೇ ಮಾಲಾರ್ಪಣೆ ಮಾಡುತ್ತಿರುವಾಗ ಗಾಂಧಿ ಪುತ್ಥಳಿಗಿದ್ದ ಕನ್ನಡಕ ಕಳಚಿ ಬಿತ್ತು. ಇದನ್ನು ಗಮನಿಸಿದ ಮಾಧ್ಯಮದವರು ಮಾಲಾರ್ಪಣೆ ಮಾಡುತ್ತಿದ್ದ ಮುಖಂಡರ ಗಮನ ಸೆಳೆದಾಗ ತಡಬಡಾಯಿಸಿ ಬಿದ್ದ ಕನ್ನಡಕ ಮತ್ತೆ ಹಾಕಿದರು. ಈ ಅಚಾತುರ್ಯಕ್ಕೆ ನೆರೆದಿದ್ದ ಕೆಲವರು ಆಕ್ರೋಶ ಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.