ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ಧಾರವಾಡ: ಎಸ್ಡಿಎಂ ಮಾನಸಿಕ ಆರೋಗ್ಯ ವಿಭಾಗ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಎಸ್ ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ಕೃತಕ ಕಾಲು ಜೋಡನಾ ವಿಭಾಗದ ನಿರ್ದೇಶಕರಾದ ಪದ್ಮಲತಾ ನಿರಂಜನಕುಮಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಎಸ್ಡಿಎಂ ವತಿಯಿಂದ ಅ. 10ರಿಂದ 16ರ ವರೆಗೆ ಧಾರವಾಡದ ಆಕಾಶವಾಣಿಯಲ್ಲಿ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ ವಯಸ್ಕರಲ್ಲಿ ಆಗುವ ಜೈವಿಕ ಮತ್ತು ಬೌದ್ಧಿಕ ಬದಲಾವಣೆಗಳು, ವೃದ್ದಾಪ್ಯದಲ್ಲಿ ಆಗುವ ಮಾನಸಿಕ ಸಾಮಾಜಿಕ ಬದಲಾವಣೆಗಳು, ವಯಸ್ಕರಲ್ಲಿ ಕಾಣುವ ಮಾನಸಿಕರ ಕಾಯಿಲೆ ವಿಷಯಗಳ ಮೇಲೆ ನುರಿತ ತಜ್ಞರಿಂದ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಯೋಜನೆ ಮಾಡಲಾಗಿದೆ ಎಂದರು. ಮಾನಸಿಕ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ ಅಭಯ ಮಟಕರ, ಡಾ ಜೆ.ವಿ. ಚೌಟಿ, ಡಾ ಎ.ಕೆ. ಹಂದಿಗೊಳ, ಡಾ ಡೇವಿಡ್ ಕೊಲ ಇದ್ದರು.
--
ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಮನವಿ
ಕಲಘಟಗಿ: ತಾಲೂಕಿನಲ್ಲಿ ಹೆಚ್ಚುತ್ತಿರುವ ಅಕ್ರಮ ಮದ್ಯ ತಯಾರಿಕೆ, ಮಾರಾಟ, ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ತಡೆಯಬೇಕು ಎಂದು ವಿವಿಧ ಮಹಿಳಾ ಸಂಘಟನೆಗಳು ಮಂಗಳವಾರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿ, ತಹಸೀಲ್ದಾರ್ಗೆ ಮನವಿ ನೀಡಿದರು. ಮಹಿಳಾ ಸಾಮೂಖ್ಯ ಸಂಸ್ಥೆ ಜಿಲ್ಲಾ ಸಂಯೋಜಕಿ ಸಂತಾನಿ ಮೆತಮ್, ಸಂಪನ್ಮೂಲ ವ್ಯಕ್ತಿ ಚಂದ್ರಕಲಾ, ಪದ್ಮಜಾ ಪಾಟೀಲ, ಯಲ್ಲವ್ವ ನವಲೂರ ಮೀನಾಕ್ಷಿ ವಯ್ಲೆಟ್, ರಾಜಬಿ ದೊಡ್ಡಮನಿ, ಉಕ ರಕ್ಷಣಾ ವೇದಿಕೆಯ ಅನಿಲ ಪಮ್ಮಾರ, ಕೆ.ಬಿ. ಗುಡಿಹಾಳ, ಜಿ.ಬಿ. ನೇಕಾರ, ತಾಲೂಕು ನೌಕರರ ಸಂಘದ ಅಧ್ಯಕ್ಷ ಐ.ಜಿ. ಜವಳಿ, ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಕ ರಕ್ಷಣಾ ವೇದಿಕೆ, ತಾಲೂಕಿನ 20ಕ್ಕೂ ಹೆಚ್ಚು ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳೆಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

