ಧಾರವಾಡ

ಹುಬ್ಬಳ್ಳಿ: ಕಿಮ್ಸ್ ರಕ್ತ ಭಂಡಾರಕ್ಕೆ ಪ್ರಶಸ್ತಿ

Published On :

ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ರಕ್ತ ಭಂಡಾರಕ್ಕೆ ಬೆಳಗಾವಿ ವಿಭಾಗ ಮಟ್ಟದ ಉತ್ತಮ ರಕ್ತಭಂಡಾರ ಎಂಬ ಪ್ರಶಸ್ತಿ ಲಭಿಸಿದೆ.
ರಕ್ತದಾನ ಕುರಿತು ಜಾಗೃತಿ ಮೂಡಿಸುವ ಹಾಗೂ ರಕ್ತ ಭಂಡಾರಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿವರ್ಷ ಈ ಪ್ರಶಸ್ತಿ ನೀಡುತ್ತಾ ಬಂದಿದೆ. ಸರ್ಕಾರಿ ರಕ್ತ ಭಂಡಾರ ವಿಭಾಗದಲ್ಲಿ ಕಿಮ್ಸ್‌ಗೆ ಅತ್ಯುತ್ತಮ ರಕ್ತ ಭಂಡಾರ ಎಂಬ ಪ್ರಶಸ್ತಿ ಬಂದರೆ, ಖಾಸಗಿ ವಿಭಾಗದಲ್ಲಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯ ರಕ್ತ ಭಂಡಾರಕ್ಕೆ ಪ್ರಶಸ್ತಿ ಲಭಿಸಿದೆ. ಇದೇ ವೇಳೆ ರಕ್ತದಾನ ಜಾಗೃತಿ ಹಾಗೂ ಶಿಬಿರ ಕೈಗೊಳ್ಳುವ ಅತ್ಯುತ್ತಮ ಎನ್‌ಜಿಓಗಳ ಪೈಕಿ ಹುಬ್ಬಳ್ಳಿಯ ಹಿತೈಶಿ ಫೌಂಡೇಶನ್‌ಗೆ ಪ್ರಶಸ್ತಿ ಲಭಿಸಿದೆ. ಹೆಚ್ಚೆಚ್ಚು ರಕ್ತದಾನ ಶಿಬಿರ, ರಕ್ತದಾನ ಮಾಡಲು ಪ್ರೋತ್ಸಾಹಿಸುವ ಕಾರ್ಯ, ಉತ್ತಮ ರೀತಿಯಲ್ಲಿ ರಕ್ತ ಕಾಯ್ದಿರಿಸುವ ಕಾರ್ಯಕ್ಕೆ ಈ ಪ್ರಶಸ್ತಿ ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳ ಪೈಕಿ ಹುಬ್ಬಳ್ಳಿಯ ಕಿಮ್ಸ್ ರಕ್ತ ಭಂಡಾರ ಬೆಳಗಾವಿ ವಿಭಾಗ ಮಟ್ಟದಲ್ಲಿ ಆಯ್ಕೆಗೊಂಡಿರುವುದು ವಿಶೇಷ. ಕಿಮ್ಸ್ ರಕ್ತ ವಿಭಾಗದಲ್ಲಿ ನ್ಯೂನತೆಗಳಿವೆ ಎನ್ನುವ ದೂರಿತ್ತು. ಆದರೀಗ ಎಲ್ಲ ನ್ಯೂನತೆಗಳು ದೂರಾಗಿದೆ. ಪರಿಣಾಮ ಕಿಮ್ಸ್‌ರಕ್ತ ಭಂಡಾರಕ್ಕೆ ಪ್ರಶಸ್ತಿಯೂ ಲಭಿಸಿದೆ. ಕಿಮ್ಸ್ ರಕ್ತ ಭಂಡಾರಕ್ಕೆ ಪ್ರಶಸ್ತಿ ಲಭಿಸಿರುವುದು ಸಂತತ ತಂದಿದೆ. ರಕ್ತ ಭಂಡಾರ ಬೆಳಗಾವಿ ವಿಭಾಗದಲ್ಲಷ್ಟೇ ಅಲ್ಲ ಭವಿಷ್ಯದಲ್ಲಿ ರಾಜ್ಯಕ್ಕೆ ಉತ್ತಮ ರಕ್ತ ಭಂಡಾರ ಎನ್ನುವ ಹೆಸರು ಪಡೆದುಕೊಳ್ಳಲಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಶಿಬಿರ ಹಮ್ಮಿಕೊಳ್ಳುವ ಮೂಲಕ ಕಿಮ್ಸ್ ರಕ್ತ ಭಂಡಾರವನ್ನು ಶತಪ್ರತಿಶತ ಪರಿಪೂರ್ಣ ಭಂಡಾರವನ್ನಾಗಿ ಮಾಡಲಾಗುವುದು ಎಂದು ವಿಭಾಗದ ಮುಖ್ಯಸ್ಥೆ ಡಾ. ಸುಜಾತಾ ಗಿರಿಯನ್ ತಿಳಿಸಿದರು. ರಾಷ್ಟ್ರೀಯ ರಕ್ತದಾನ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು. 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.