ಧಾರವಾಡ

17ರಂದು ಉಚಿತ ನೇತ್ರ ತಪಾಸಣೆ ಶಿಬಿರ

Published On :

ಹುಬ್ಬಳ್ಳಿ: ಕ್ಷಮತಾ ಸೇವಾ ಸಂಸ್ಥೆ, ಡಾ.ಎಂ.ಎಂ. ಜೋಶಿ ಆಸ್ಪತ್ರೆ ಹಾಗೂ ಧಾರವಾಡ ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆ ಸಹಯೋಗದಲ್ಲಿ ಕಲಘಟಗಿಯಲ್ಲಿ ಅ.17ರಂದು ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ಏರ್ಪಡಿಸಿದೆ.  ಅಂದು ಬೆಳಗ್ಗೆ 10:30ರಿಂದ 1:30ರ ವರೆಗೆ ಕಲಘಟಗಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ನೇತ್ರ ತಪಾಸಣಾ ಶಿಬಿರ ನಡೆಯಲಿದೆ.  ಸಂಸದ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಡಾ.ಎಂ.ಎಂ. ಜೋಶಿ ಅವರು ಉಪಸ್ಥಿತರಿದ್ದು ತಮ್ಮ ಸಹಾಯಕ ವೈದ್ಯರೊಂದಿಗೆ ಶಿಬಿರಾರ್ಥಿಗಳ ಕಣ್ಣು ತಪಾಸಣೆ ನಡೆಸಿ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಿದ್ದಾರೆ. ಜಿಪಂ ಅಧ್ಯಕ್ಷ ಶಂಕ್ರಣ್ಣ ಅಗಡಿ ಹಾಗೂ ಬಿಜೆಪಿ ಧುರೀಣ ಸಿ.ಎಂ. ನಿಂಬಣ್ಣವರ ಭಾಗವಹಿಸುವರು. ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರನ್ನು ಅದೇ ದಿನ ಹುಬ್ಬಳ್ಳಿಗೆ ಕರೆತಂದು ಡಾ. ಜೋಶಿ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಶಿಬಿರಾರ್ಥಿಗಳು ತಮ್ಮ ಭಾವಚಿತ್ರವಿರುವ ಗುರುತಿನ ಚೀಟಿಯನ್ನ್ನು ತರಬೇಕು. ಬೆಳಗ್ಗೆ 9 ಗಂಟೆಯಿಂದ ಹೆಸರು ನೋಂದಣಿ ಆರಂಭವಾಗುವುದು ಎಂದು ಕ್ಷಮತಾ ಸೇವಾ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9448111411/8970500322ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಕೆಜೆಪಿಯಿಂದ ಬೃಹತ್ ಜನಾಂದೋಲನ
ಹುಬ್ಬಳ್ಳಿ: ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅ. 17ರಂದು ಕರ್ನಾಟಕ ಜನತಾ ಪಕ್ಷ ಬೃಹತ್ ಜನಾಂದೋಲನ ಹಮ್ಮಿಕೊಂಡಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಧರಣಿ ಮತ್ತು ಜನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗೋಖಲೆ ತಿಳಿಸಿದ್ದಾರೆ.  ಅಂದು ಬೆಳಗ್ಗೆ 10ಕ್ಕೆ ಹುಬ್ಬಳ್ಳಿ ರೇಲ್ವೆ ವಿಭಾಗೀಯ ಕಚೇರಿ ಎದುರು ಧರಣಿ ನಡೆಸಿ ಸಂಜೆ 4ಕ್ಕೆ ಮೆರವಣಿಗೆ ಮೂಲಕ ನೆಹರು ಮೈದಾನಕ್ಕೆ ತೆರಳಿ ಸಮಾವೇಶ ನಡೆಸಲಾಗುವುದು. ದೇಶದ ಆಡಳಿತ ಮತ್ತು ಅರ್ಥ ವ್ಯವಸ್ಥೆ ಹೀನಾಯ ಸ್ಥಿತಿಗೆ ತಲುಪಿದೆ. ಇದನ್ನು ತಪ್ಪಿಸಲು ಮೋದಿ ಪ್ರಧಾನಿಯಾಗುವುದು ಅಗತ್ಯ. ರಾಜ್ಯದ ಕಾಂಗ್ರೆಸ್ ಸರ್ಕಾರ ಆಂತರಿಕ ವಿರೋಧಾಭಾಸದಿಂದ ನಿಷ್ಕ್ರಿಯವಾಗಿದ್ದು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಓಲೇಕಾರ ದೂರಿದರು. ರೈತರ 25 ಸಾವಿರವರೆಗಿನ ಸಾಲ ಮನ್ನಾ ಯೋಜನೆಯಡಿ ಅಪೆಕ್ಸ್ ಬ್ಯಾಂಕ್‌ಗೆ 1,519 ಕೋಟಿ ರು. ಬಿಡುಗಡೆಯಾಗದೆ ಸಾಲ ಮನ್ನಾ ಸೌಲಭ್ಯದಿಂದ 8 ಲಕ್ಷ ರೈತ ಕುಟುಂಬಗಳು ವಂಚಿತವಾಗಿವೆ. ತಕ್ಷಣ ಈ ಹಣ ಬಿಡುಗಡೆ ಮಾಡಬೇಕು. ರಾಜ್ಯದ ರೇಲ್ವೆ ಯೋಜನೆಗೆ ರಾಜ್ಯ ಸರ್ಕಾರದ ಪಾಲು ರು. 700 ಕೋಟಿ ಬಿಡುಗಡೆ ಆಗಬೇಕಿದೆ. ಈ ಪೈಕಿ ರು. 50 ಕೋಟಿ ಬಿಡುಗಡೆಯಾಗಿದ್ದರಿಂದ ಅನೇಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತ ಬಿಡುಗಡೆಗೊಳಿಸಬೇಕು. ಬೆಳೆವಿಮೆ ತಕ್ಷಣ ರೈತರಿಗೆ ವಿತರಿಸುವ ವ್ಯವಸ್ಥೆಯಾಗಬೇಕು ಎಂದು ಜನ ಸಮಾವೇಶದಲ್ಲಿ ಆಗ್ರಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.