ಪತ್ರಿಕಾ ಛಾಯಾಗ್ರಾಹಕನ ಬ್ಯಾಗ್ ಕಳ್ಳತನ
ಧಾರವಾಡ: ಧಾರವಾಡದ ರೈಲು ನಿಲ್ದಾಣದಲ್ಲಿ ಬೆಂಗಳೂರಿಗೆ ಹೊರಡಲು ನಿಂತಿದ್ದ ಇಂಟರ್ಸಿಟಿ ರೈಲಿನಲ್ಲಿ ಪತ್ರಿಕಾ ಛಾಯಾಗ್ರಾಹಕರೊಬ್ಬರ ಬ್ಯಾಗ್ ಕಳ್ಳತನವಾದ ಘಟನೆ ಮಂಗಳವಾರ ನಸುಕಿನ ವೇಳೆ ನಡೆದಿದೆ.
ಕೆಲಸದ ನಿಮಿತ್ತ ಬೆಳಿಗ್ಗೆ 5.15ರ ಸುಮಾರಿಗೆ ಬೆಂಗಳೂರಿಗೆ ಹೊರಟಿದ್ದ ಕನ್ನಡಪ್ರಭ ಪತ್ರಿಕೆಯ ಛಾಯಾಗ್ರಾಹಕ ಬಸವರಾಜ ಅಳಗವಾಡಿ ಬ್ಯಾಗ್ ಕಳ್ಳತನವಾಗಿದ್ದು, ಅದರಲ್ಲಿ ಒಂದು ಲಕ್ಷ ರುಪಾಯಿ ನಗದು, ರು. 17 ಸಾವಿರ ಮೊತ್ತದ ಪೋಟೋ ಫ್ಲಾಷ್ ಹಾಗೂ ಬಟ್ಟೆ ಇತ್ತು. ರೈಲಿನಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಕ್ರಾಸಿಂಗ್ಗೆ ಇನ್ನೊಂದು ರೈಲು ಬಂದಾಗ ಕ್ಷಣ ಮಾತ್ರದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ತಕ್ಷಣ ರೈಲಿನಲ್ಲಿ ಹುಡುಕಾಡಿದರೂ ಬ್ಯಾಗ್ ಬಗ್ಗೆ ಸುಳಿವು ದೊರೆಯಲಿಲ್ಲ. ಕೊನೆಗೆ ಹುಬ್ಬಳ್ಳಿಗೆ ತೆರಳಿ ರೇಲ್ವೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಸಿಸಿ ಕ್ಯಾಮೆರಾ ಬೇಕು: ರೈಲು ನಿಲ್ದಾಣದಲ್ಲಿ ಇತ್ತೀಚಿಗೆ ಕಳ್ಳತನ ಮತ್ತು ಪ್ರಯಾಣಿಕರನ್ನು ವಂಚಿಸುವ ದಂಧೆ ವಿಪರೀತವಾಗಿ ನಡೆಯುತ್ತಿದ್ದರೂ ಇಲಾಖೆಯ ಪೊಲೀಸರು ಗಮನ ಹರಿಸುತ್ತಿಲ್ಲ. ಅದರಲ್ಲೂ ಧಾರವಾಡದಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲ. ಹಣವಿದ್ದ ಬ್ಯಾಗ್ ಕಳ್ಳತನವಾಗಿದೆ ಎಂದು ರೇಲ್ವೆ ಪೊಲೀಸ್ ಪೇದೆ ಹತ್ತಿರ ಹೇಳಿಕೊಂಡರೆ, ಆತ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಹುಬ್ಬಳ್ಳಿಗೆ ಹೋಗಿ ದೂರು ಕೊಡಿ ನೋಡೋಣ ಎನ್ನುವ ರೀತಿಯಲ್ಲಿ ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ. ಧಾರವಾಡ ಜಿಲ್ಲಾ ಕೇಂದ್ರವಾದರೂ ಇಲ್ಲೊಂದು ದೂರು ಸ್ವೀಕರಿಸುವ ಅಥವಾ ನಾಲ್ಕೈದು ಜನ ಪೊಲೀಸರು ಇರುವ ಚೌಕಿ ಇಲ್ಲ. ಹೀಗಾಗಿ, ನಿತ್ಯ ರೇಲ್ವೆ ನಿಲ್ದಾಣದಲ್ಲಿ ಕಳ್ಳತನವಾಗುತ್ತಿದೆ. ಸಣ್ಣ ಪುಟ್ಟ ಕಳ್ಳತನ, ದುಷ್ಕೃತ್ಯಗಳಿಗೆ ಹುಬ್ಬಳ್ಳಿಗೆ ಹೋಗಿ ದೂರು ನೀಡಬೇಕಿರುವುದರಿಂದ ಬಹಳಷ್ಟು ಪ್ರಯಾಣಿಕರು ಸುಮ್ಮನಾಗುತ್ತಿದ್ದಾರೆ. ರಾತ್ರಿ ವೇಳೆ ಅಥವಾ ನಸುಕಿನ ವೇಳೆ ಪ್ರಯಾಣಿಕರು ಸುರಕ್ಷತೆಯಿಂದ ಪ್ರಯಾಣ ಮಾಡಬೇಕಾದರೆ ಧಾರವಾಡದ ನಿಲ್ದಾಣದಲ್ಲಿ ಸುರಕ್ಷತೆಯ ಕ್ರಮ ವಹಿಸಬೇಕು. ಅಲ್ಲದೇ, ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಕಳ್ಳತನಗಳಿಗೆ ಕಡಿವಾಣ ಹಾಕಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

