ಧಾರವಾಡ

ಕಟಗಿಯವರ ಆದರ್ಶ ಯುವಕರಿಗೆ ದಾರಿದೀಪ

Published On :

ಕುಂದಗೋಳ: ಸರಳ ಸಜ್ಜನಿಕೆಯ ಮಾಜಿ ಸಚಿವ ಎಂ.ಎಸ್. ಕಟಗಿಯವರ ಮಾನವೀಯ ಮೌಲ್ಯ, ಆದರ್ಶ ಇಂದಿನ ಯುವಜನತೆಗೆ ದಾರಿದೀಪವಾಗಲಿ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ಶ್ರೀರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು. ಅವರು ಮಾದೇವಪ್ಪನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಂಧೀಜಿಯವರ ತತ್ವಾದರ್ಶಗಳನ್ನು ಹೊತ್ತ ಕಟಗಿಯವರು ಧರ್ಮ, ಸಂಸ್ಕೃತಿ, ಪರಂಪರೆಗೆ ಹೆಚ್ಚಿನ ಒಲವು ತೋರುತ್ತಿದ್ದರು. ನಮ್ಮ ನಿಕಟ ಸಂಪರ್ಕದಲ್ಲಿದ್ದ ಇವರ ಅಗಲಿಕೆಯಿಂದ ನೋವುಂಟಾಗಿದೆ. ಎಂ.ಎಸ್. ಕಟಗಿಯವರ ಆತ್ಮಕ್ಕೆ ಜಗದ್ಗುರು ಶ್ರೀರೇಣುಕಾ ಪಂಚಾಚಾರ್ಯರು ಶಾಂತಿಯನ್ನಿತ್ತು, ಅವರ ಕುಟುಂಬ ವರ್ಗಕ್ಕೆ ದುಃಖ  ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದರು. ಶ್ರೀ ಶಿಥಿಕಂಟೇಶ್ವರ ಶಿವಾಚಾರ್ಯ ಶ್ರೀ, ಶ್ರೀಬಸವೇಶ್ವರಶ್ರೀ , ಕಲ್ಯಾಣಪುರ ಶ್ರೀಬಸಯ್ಯಜ್ಜನವರು, ಈಶ್ವರಯ್ಯ ನಾವಳ್ಳಿಮಠ, ಟಿ.ಎಸ್. ಗೌಡಪ್ಪನವರ, ಯಲ್ಲಪ್ಪ ಕೊಪ್ಪದ, ಸಿ. ನಾಯ್ಕ, ಶಿವಪ್ಪ ಬರದೆಲ್ಲಿ, ಬಿ.ಸಿ. ಪಾಟೀಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.