ಧಾರವಾಡ

ನೈಋತ್ಯ ರೇಲ್ವೆ: ಡಿ ದರ್ಜೆ ನೌಕರರ ನೇಮಕ ಪರೀಕ್ಷೆಯಲ್ಲಿ ನಕಲು

Published On :

ಹುಬ್ಬಳ್ಳಿ: ನೈಋತ್ಯ ರೇಲ್ವೆ ವಲಯದ ಡಿ ದರ್ಜೆ ನೌಕರರ ನೇಮಕಾತಿ ಪರೀಕ್ಷೆಯಲ್ಲಿ ಮೇಲ್ವಿಚಾರಕರೇ ತಮಗೆ ಬೇಕಾದ ಅಭ್ಯರ್ಥಿಗಳಿಗೆ ನಕಲು ಚೀಟಿ ಪೂರೈಸಿದ್ದಾರೆ!
ಭಾನುವಾರ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಹೈಸ್ಕೂಲ್‌ನಲ್ಲಿ ನೈಋತ್ಯ ರೇಲ್ವೆ ವಲಯದ ಡಿ ದರ್ಜೆ ನೌಕರರ ನೇಮಕಾತಿ ಪರೀಕ್ಷೆ ಆಯೋಜಿಸಲಾಗಿತ್ತು. ಬ್ಲಾಕ್ ನಂ. 14ರಲ್ಲಿ ಡಿ ದರ್ಜೆ ನೌಕರರ ನೇಮಕಾತಿಗೆ ಪರೀಕ್ಷೆ ಬರೆಯುತ್ತಿದ್ದ ಯುವತಿ ಮತ್ತು ವಿವಾಹಿತ ಮಹಿಳೆಗೆ ಪರೀಕ್ಷಾ ಮೇಲ್ವಿಚಾರಕರು ಉತ್ತರಗಳನ್ನು ಪೂರೈಸುವ ಕೆಲಸ ಮಾಡಿದ್ದಾರೆ. ಇದಕ್ಕೆ ಇತರ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದಾಗ ಪರೀಕ್ಷಾ ಅವಧಿ ಮುಗಿಯುವ ಸಮಯದಲ್ಲಿ ಉತ್ತರ ಪತ್ರಿಕೆ ಕಸಿದುಕೊಳ್ಳುವ ಜಾಣತನ ತೋರಿಸಿದ್ದಾರೆ.
ಹೇಗೆ ನಡೆಯುತ್ತಿತ್ತು ಅಕ್ರಮ?: 12108408 ಮತ್ತು 12108422 ನೋಂದಣಿ ಸಂಖ್ಯೆ ಹೊಂದಿದ್ದ ಮಹಿಳೆ ಮತ್ತು ಯುವತಿಗೆ ಬ್ಲಾಕ್ ನಂ.14ರ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಕೊಠಡಿಗೆ ಬಂದ ಸೂಪರ್‌ವೈಸರ್ ಕೆಲವು ಪ್ರಶ್ನೆಗಳಿಗೆ ಉತ್ತರ ಹೇಳಿ ಹೋಗಿದ್ದಾರೆ. ಮತ್ತೆ ಕೆಲವು ಹೊತ್ತಿನ ಬಳಿಕ ಬಂದು ಉತ್ತರ ಬರೆದಿದ್ದ ಚೀಟಿ ನೀಡಿದ್ದಾರೆ. ಇದನ್ನು ಪಕ್ಕದ ಯುವತಿ ಪ್ರಶ್ನಿಸಿದರೂ ಲೆಕ್ಕಿಸದೇ ಮುಂದುವರಿಸಿದಾಗ ಇತರ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಗಳ ಅಕ್ರೋಶಕ್ಕೆ ಹೆದರಿದ ಪರೀಕ್ಷಾ ಮೇಲ್ವಿಚಾರಕರು ಕೊನೆಗೆ ಮಹಿಳೆ ಮತ್ತು ಯುವತಿಯರ ಒಎಂಆರ್ ಉತ್ತರ ಪತ್ರಿಕೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.