ಧಾರವಾಡ

ಪಟನಾ ಬಾಂಬ್ ಸ್ಫೋಟ: ಬಿಜೆಪಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಅ. 27
ಬಿಹಾರದ ಪಟನಾದಲ್ಲಿ ಭಾನುವಾರ ನರೇಂದ್ರ ಮೋದಿ ಅವರ ಬಹಿರಂಗ ಸಭೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಖಂಡಿಸಿ ಬಿಜೆಪಿ ನಗರ ಯುವ ಮೋರ್ಚಾ ಹಾಗೂ ತಾಲೂಕು ಯುವ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಸುಭಾಸ್ ರಸ್ತೆಯ ಪಕ್ಷದ ಕಚೇರಿಯಿಂದ ಹೊರಟು ವಿವೇಕಾನಂದರ ವೃತ್ತದಲ್ಲಿ ಪ್ರತಿಭಟನಾಕಾರರು ಜಮಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗಿದ್ದು, ಜನರ ರಕ್ಷಣೆ ಕಷ್ಟಕರವಾಗಿದೆ. ಬಿಜೆಪಿ ಪ್ರಧಾನಿ ಎಂದೇ ಬಿಂಬಿತರಾದ ನರೇಂದ್ರ ಮೋದಿಯವರ ಸಾರ್ವಜನಿಕ ಸಮಾವೇಶದಲ್ಲಿ ನಡೆದ ಬಾಂಬ್ ಸ್ಫೋಟವೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ಸಿನ ಕುತಂತ್ರ ರಾಜಕೀಯದಿಂದಾಗಿ ಜನರಲ್ಲಿ ಜಾತಿ-ಭೇದದ ಬೀಜ ಬಿತ್ತಿ ಕೋಮು-ಗಲಭೆಯಂತಹ ಭಯದ ವಾತಾವರಣ ಹುಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರ ಯುವ ಮೋರ್ಚಾ ಅಧ್ಯಕ್ಷ ನಾಗರಾಜ ನಾಯಕ, ನಾಗರಾಜ ಹುಣಸೀಕಟ್ಟಿ, ಪ್ರಮೋದ ಕಾರಕೂನ, ಪಾಲಿಕೆ ಸದಸ್ಯರಾದ ಸಂಜಯ ಕಪಟಕರ, ಬಸವರಾಜ ಮುತ್ತಳ್ಳಿ, ವಿಜಯಾನಂದ ಶೆಟ್ಟಿ, ಶಿವು ಹಿರೇಮಠ ಹಾಗೂ ಕಲಂದರ ಮುಲ್ಲಾ, ಮಕ್ತುಂ ಲಷ್ಕರಿ, ರಾಕೇಶ ನಾಜರೆ, ರಾಕೇಶ ದೊಡಮನಿ, ಮೋಹನ ರಾಮದುರ್ಗ ಇದ್ದರು.
ಉಪ್ಪಿನ ಬೆಟಗೇರಿ: ತಾಲೂಕು ಬಿಜೆಪಿ ಮೋರ್ಚಾ ವತಿಯಿಂದಲೂ ಉಪ್ಪಿನ ಬೆಟಗೇರಿಯಲ್ಲಿ ಪ್ರತಿಭಟನೆ ನಡೆಯಿತು. ಬಿಹಾರ್ ಮುಖ್ಯಮಂತ್ರಿ ನಿತೀಶ ಕುಮಾರ ಪ್ರತಿಕೃತಿ ದಹಿಸಿದರು. ಈ ಕೃತ್ಯವೆಸಗಿದ ದುಷ್ಕರ್ಮಿಗಳನ್ನು ಸಿಎಂ ನಿತೀಶಕುಮಾರ ಬಂಧಿಸಬೇಕೆಂದು ಮುಖಂಡರಾದ ಎಂ.ಎಚ್. ಪಾಟೀಲ, ಗುರುಪಾದಗೌಡ ಹಣಮಂತಗೌಡರ, ಮಕ್ತುಮ ಹುಸೇನ ತಟಗಾರ, ಮಡಿವಾಳಪ್ಪ ಜವಳಗಿ, ರಮೇಶ ಮಸೂತಿ, ಮಡಿವಾಳಪ್ಪ ಸಿಂದೋಗಿ, ಈಶ್ವರ ಹಿತ್ತಲಮನಿ ಮತ್ತಿತರರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.