ಕ್ಷೀರಭಾಗ್ಯದಿಂದ ಹಾಜರಾತಿ ಹೆಚ್ಚಳ
ಧಾರವಾಡ: ಚಿಕ್ಕಮಲ್ಲಿಗವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯಲ್ಲಿ ನ್ಯಾಯವಾದಿ ಮಹದೇವ ದೊಡ್ಡಮನಿ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಕ್ಷೀರಭಾಗ್ಯ ಯೋಜನೆಗೆ ಜಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮೊದಲು ಗ್ರಾಮೀಣ ಪ್ರದೇಶದಲ್ಲಿ ಹಸು ಸಾಕಾಣಿಕೆ ಮಾಡಿ ಹಾಲು ಕುಡಿದು ಆರೋಗ್ಯದಿಂದ ರೈತರು ಹಾಗೂ ಮಕ್ಕಳು ಬಾಳುತ್ತಿದ್ದರು. ಅಲ್ಲದೆ, ಗರಡಿಮನೆಗಳಲ್ಲಿ ತಾಲೀಮು ನಡೆಸಿ ದೇಹ ಸದೃಡವಾಗಿಟ್ಟುಕೊಳ್ಳಲು ಶ್ರಮಿಸುತ್ತಿದ್ದರು. ಹಾಗಾಗಿ, ಅವರಿಗೆ ಯಾವುದೇ ಕಾಯಿಲೆ ಬರುತ್ತಿರಲಿಲ್ಲ. ಪ್ರಸ್ತುತ ಹಸುಗಳನ್ನು ಮೇಯಿಸುವ ಜಾಗೆಗಳನ್ನು ಒತ್ತುವರಿ ಮಾಡಲಾಗುತ್ತಿದೆ. ಇದರಿಂದಾಗಿ ಜಾನುವಾರುಗಳ ಸಾಕಣಿಕೆಗೆ ತೊಂದರೆ ಉಂಟಾಗಿ ರೈತರು ಎಮ್ಮೆ ಹಾಗೂ ಹಸು ಸಾಕುತ್ತಿಲ್ಲ. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಕ್ಷೀರಭಾಗ್ಯ ಯೋಜನೆ ಜಾರಿ ತಂದಿದೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಾಗಲಿದೆ ಎಂದರು. ಗ್ರಾಪಂ ಅಧ್ಯಕ್ಷರಾದ ಲಕ್ಷ್ಮೀ ಹಳಿಗೇರಿ, ಗ್ರಾಪಂ ಸದಸ್ಯ ಶಿವಾಜಿ ಸಿಂಧೆ, ಎಡಿಎಂಸಿ ಅಧ್ಯಕ್ಷ ಉಮೇಶ ಮೊಕಾಶಿ, ಮಹದೇವ ಮಾಕಣ್ಣವರ, ಶಾಲೆಯ ಮುಖ್ಯೋಫಾಧ್ಯ ಆರ್.ಬಿ. ಹೀರೆಮಠ, ವಿ.ವಿ. ಹೂಗಾರ, ಶಿಕ್ಷಕ ಐ.ಐ. ಮುಲ್ಲಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

